ನವದೆಹಲಿ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ (BWF World Championships) ಫೈನಲ್ ತಲುಪುವ ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwik-Chirag) ಅವರ ಆಸೆ ಈಡೇರಲಿಲ್ಲ. ಭಾರತೀಯ ಜೋಡಿ ಚೀನಾದ ಜೋಡಿ ಚೆನ್ ಬೊ ಯಾಂಗ್ ಮತ್ತು ಲಿಯು ಯಿ (Liu Yi and Chen Bo Yang) ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಒಂಬತ್ತನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಚೀನಾದ ಚೆನ್ ಬೊ ಯಾಂಗ್ ಮತ್ತು ಲಿಯು ಯಿ ಜೋಡಿ ವಿರುದ್ಧ ಒಂದು ಗಂಟೆ ಏಳು ನಿಮಿಷಗಳ ಕಾಲ ಜರುಗಿದ್ದ ಸೆಮಿಫೈನಲ್ ಪಂದ್ಯದಲ್ಲಿ 19-21, 21-18 ಮತ್ತು 12-21 ಅಂತರದಲ್ಲಿ ಸೋಲು ಅನುಭವಿಸಿದರು.
ಭಾನುವಾರ ನಡೆದಿದ್ದ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಸೋಲಿನೊಂದಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು. ಸೆಮಿಫೈನಲ್ ತಲುಪುವುದರೊಂದಿಗೆ, ಅವರಿಗೆ ಕಂಚಿನ ಪದಕ ಖಚಿತವಾಯಿತು ಮತ್ತು 2011 ರಿಂದ ಇಲ್ಲಿಯವರೆಗೂ ಪ್ರತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕನಿಷ್ಠ ಒಂದು ಪದಕ ಗೆಲ್ಲುವ ಭಾರತದ ಸರಣಿ ಹಾಗೆಯೇ ಮುಂದುವರಿದಿದೆ.
2025ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ 13 ಪದಕಗಳು!
ಚೀನಾದ ಜೋಡಿಯ ವಿರುದ್ಧ ಎರಡು ಪಂದ್ಯಗಳಲ್ಲಿ ಭಾರತದ ಜೋಡಿಯ ಮೊದಲ ಸೋಲು ಇದಾಗಿದೆ. ಇದಕ್ಕೂ ಮುನ್ನ ಕಳೆದ ವರ್ಷ ಥಾಯ್ಲೆಂಡ್ ಓಪನ್‌ನ ಫೈನಲ್‌ನಲ್ಲಿ ಅವರು ಸೋಲನ್ನು ಅನುಭವಿಸಬೇಕಾಗಿತ್ತು. ಈ ವರ್ಷ ಇಂಡಿಯನ್, ಸಿಂಗಾಪುರ್, ಮಲೇಷಿಯನ್ ಮತ್ತು ಚೀನಾ ಓಪನ್ ನಂತರ ಸಾತ್ವಿಕ್-ಚಿರಾಗ್ ಅವರ ಐದನೇ ಸೆಮಿಫೈನಲ್ ಸೋಲು ಇದಾಗಿದೆ.
ಭಾರತದ ಜೋಡಿ ಭರ್ಜರಿ ಆರಂಭ ಪಡೆದು 4-0 ಮುನ್ನಡೆ ಸಾಧಿಸಿತ್ತು. ಆ ಮೂಲಕ ಭಾರತದ ಜೋಡಿ 11-5 ಮುನ್ನಡೆ ಸಾಧಿಸಿತ್ತು. ಆದರೆ ಚೀನಾ ಜೋಡಿ ವಿರಾಮದ ನಂತರ ಬಲವಾಗಿ ಕಮ್‌ಬ್ಯಾಕ್ ಮಾಡಿ 14-13 ಮುನ್ನಡೆ ಸಾಧಿಸಿ ಮೊದಲನೇ ಗೇಮ್ ಅನ್ನು 19-21 ಅಂತರದಲ್ಲಿ ವಶಪಡಿಸಿಕೊಂಡಿತು.
ನಂತರ ಎರಡನೇ ಗೇಮ್‌ನಲ್ಲಿಯೂ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮತ್ತೆ 5-1 ಮುನ್ನಡೆ ಸಾಧಿಸಿದದ್ದರು, ಆದಾಗ್ಯೂ ಮೊದಲಾವಧಿಯ ವೇಳೆಗೆ ಅವರ ಮುನ್ನಡೆ 11-9ಕ್ಕೆ ಇಳಿಯಿತು. ಆದರೂ ಅಂತಿಮವಾಗಿ ಭಾರತದ ಜೋಡಿ 21-18 ಅಂತರದಲ್ಲಿ ಗೆದ್ದಕೊಂಡಿತು. ಆ ಮೂಲಕ ಕಮ್‌ಬ್ಯಾಕ್ ಮಾಡಿತು. ಈ ವೇಳೆ ಉಭಯ ಜೋಡಿಗಳು 1-1 ಸಮಬಲ ಸಾಧಿಸಿದ್ದವು.
BWF World Championships: ಕ್ವಾರ್ಟರ್‌ನಲ್ಲಿ ಸಿಂಧುಗೆ ಸೋಲಿನ ಆಘಾತ
ಆದರೆ, ನಿರ್ಣಾಯಕ ಗೇಮ್‌ನಲ್ಲಿ ಚೆನ್ ಬೊಯಾಂಗ್ ಮತ್ತು ಲಿಯು ಯಿ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿತು. ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿ 9-0 ಮುನ್ನಡೆ ಸಾಧಿಸಿದರು ಮತ್ತು ಅಂತಿಮವಾಗಿ 21-12 ಚೀನಾ ಜೋಡಿ ಜೋಡಿ ಗೆಲುವು ಪಡೆಯಿತು. ಇದರ ಜೊತೆಗೆ ಭಾರತದ ಜೋಡಿ 1-2 ಅಂತರದಲ್ಲಿ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಚೀನಾ ಜೋಡಿ ಫೈನಲ್‌ಗೆ ಪ್ರವೇಶ ಮಾಡಿತು. 2022ರಲ್ಲಿ ಟೋಕಿಯೊದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಸಾತ್ವಿಕ್-ಚಿರಾಗ್ ಅವರ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದು ಎರಡನೇ ಕಂಚಿನ ಪದಕವಾಗಿದೆ.