China Open: ಪಿ.ವಿ.ಸಿಂಧು, ಸಾತ್ವಿಕ್–ಚಿರಾಗ್ ಜೋಡಿ ಗೆಲುವಿನ ಶುಭಾರಂಭ
ಪುರುಷರ ಡಬಲ್ಸ್‌ನಲ್ಲಿ ವಿಶ್ವದ 15 ನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಜಪಾನ್‌ನ ಜಪಾನ್‌ನ ಕೀನ್ಯಾ ಮಿತ್ಸುಹಾಶಿ ಮತ್ತು ಹಿರೋಕಿ ಒಕಮುರಾ ವಿರುದ್ಧ 21-13, 21-9 ನೇರ ಗೇಮ್‌ಗಳಿಂದ ಗೆದ್ದು ಬೀಗಿದರು. ಪಂದ್ಯ ಕೇವಲ 31 ನಿಮಿಷಗಳಲ್ಲಿ ಅಂತ್ಯ ಕಂಡಿತು.

ಚಾಂಗ್‌ಝೌ: ಲಯಕ್ಕಾಗಿ ಪರದಾಡುತ್ತಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು(PV Sindhu) ಅವರು ಹಲವು ದಿನಗಳ ಬಳಿಕ ಗೆಲುವಿನ ಹಳಿಗೆ ಮರಳಿದಾರೆ. ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್(China Open) ಟೂರ್ನಿಯ ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆಯಿಟ್ಟದಾರೆ. ಇದೇ ವೇಳೆ ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ(Satwik-Chirag) ಕೂಡ ಗೆಲುವಿನಿಂದಿಗೆ ಮುನ್ನಡೆ ಸಾಧಿಸಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ಸಿಂಧು ಅವರು ಜಪಾನ್‌ನ ಆರನೇ ಶ್ರೇಯಾಂಕದ ಟೊಮೊಕಾ ಮಿಯಾಜಾಕಿಯನ್ನು ಮೂರು ಗೇಮ್‌ಗಳ ಮ್ಯಾರಥಾನ್ ಹೋರಾಟದಲ್ಲಿ 21-15, 8-21, 21-17 ಅಂತರದಿಂದ ಗೆಲ್ಲುವ ಮೂಲಕ 16 ರ ಸುತ್ತಿಗೆ ಪ್ರವೇಶಿಸಿದರು.
ಪ್ರಸ್ತುತ ವಿಶ್ವದ 15ನೇ ಶ್ರೇಯಾಂಕದಲ್ಲಿರುವ ಸಿಂಧು, ಆರಂಭಿಕ ಗೇಮ್‌ನಲ್ಲಿ ಸತತ ಏಳು ಅಂಕಗಳನ್ನು ಗಳಿಸಿ 13-5 ಮುನ್ನಡೆ ಸಾಧಿಸುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಇಏ ಲಯ ಮುಂದುವರಿಸಿ ಪಂದ್ಯವನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಕಳೆದ ವರ್ಷ ಸ್ವಿಸ್ ಓಪನ್‌ನ ಸೋಲಿನ ಸೇಡನ್ನು ಸಿಂಧು ಈ ಬಾರಿಸಿ ತೀರಿಸಿಕೊಂಡರು.
ಇದನ್ನೂ ಓದಿ IND vs ENG: ನಾಲ್ಕನೇ ಟೆಸ್ಟ್‌ನಿಂದ ಆಕಾಶ್ ದೀಪ್ ಔಟ್, ಮ್ಯಾಂಚೆಸ್ಟರ್ ಟೆಸ್ಟ್‌ಗೆ ಯುವ ವೇಗಿ!