ಓವಲ್ ಟೆಸ್ಟ್‌ನಲ್ಲಿ ಐಸಿಸಿ ಎಚ್ಚರಿಕೆಗೂ ಜಗ್ಗದೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದ ಕೋಚ್ ಗಂಭೀರ್
ಗಂಭೀರ್ ಅವರ ಈ ದೃಢ ನಿರ್ಧಾರ ಫಲಿಸಿತು. ಭಾರತ ಪಂದ್ಯವನ್ನೂ ಗೆದ್ದಿತು, ಮಾತ್ರವಲ್ಲದೆ ದಂಡದ ಭೀತಿಯಿಂದಲೂ ಪಾರಾಯಿತು. ಸದ್ಯ WTC ಪಾಯಿಂಟ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಅಗ್ರ ಎರಡು ಸ್ಥಾನದಲ್ಲಿದೆ.


ಮುಂಬಯಿ: ಇತ್ತೀಚೆಗೆ ಮುಕ್ತಾಯ ಕಂಡಿದ್ದ ತೆಂಡುಲ್ಕರ್-ಆ್ಯಂಡರ್‌ಸನ್ ಸರಣಿಯ, ದಿ ಓವಲ್(oval test) ಕ್ರೀಡಾಂಗಣದಲ್ಲಿ ನಡೆದಿದ್ದ ಭಾರೀ ಥ್ರಿಲ್ಲರ್ ಕ್ಷಣಗಳನ್ನು ಕಟ್ಟಿಕೊಟ್ಟ 5ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯಭೇರಿ ಬಾರಿಸಿತ್ತು. ಇದರೊಂದಿಗೆ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾಗೊಂಡಿತ್ತು. ಅಂತಿಮ ದಿನದಾಟದ ವೇಳೆ ಕೋಚ್ ಗೌತಮ್ ಗಂಭೀರ್(Gautam Gambhir) ಐಸಿಸಿ ಎಚ್ಚರಿಕೆಯನ್ನು ಕೂಡ ಲೆಕ್ಕಿಸದೆ ತೆಗೆದುಕೊಂಡಿದ್ದ ಒಂದು ಗಟ್ಟಿ ನಿರ್ಧಾರದ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಭಾರತ ತಂಡ ಪಂದ್ಯದಲ್ಲಿ ಆರು ಓವರ್‌ಗಳನ್ನು ನಿಧಾನವಾಗಿ ಮಾಡಿತ್ತು. ಹೀಗಾಗಿ ಐಸಿಸಿ ಕೋಚ್ ಜೆಫ್ರಿ ಕ್ರೋವ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನಾಲ್ಕು ಸಂಕ ಕಡಿತಗೊಳಿಸುವ ಎಚ್ಚರಿಕೆ ನೀಡಿದರು. ಒಂದೆಡೆ ಪಂದ್ಯ ಗೆಲ್ಲುವ ಒತ್ತಡ ಮತ್ತೊಂದೆಡೆ ದಂಡ ತಪ್ಪಿಸಿಕೊಳ್ಳುವ ಸವಾಲು ಆಟಗಾರರಿಗೆ ಎದುರಾಯಿತು.
ದಂಡದ ಭೀತಿಯಿಂದ ಪಾರಾಗುವ ಸಲುವಾಗಿ ಆಟಗಾರರು ಸೇರಿದಂತೆ ಕೋಚಿಂಗ್ ಸಿಬ್ಬಂದಿಗಳು ಸಭೆ ನಡೆಸಿದ್ದರು. ಮುಖ್ಯ ಕೋಚ್ ಗಂಭೀರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಓವರ್ ರೇಟ್ ಸುಧಾರಿಸಿಕೊಳ್ಳಲು ಸ್ಪಿನ್ನರ್ ಅನ್ನು ಬಳಸಿಕೊಳ್ಳುವ ಸಲಹೆ ಹಲವರಿಂದ ಕೇಳಿಬಂದಿತ್ತು. ಆದರೆ ಗಂಭೀರ್ ಮಾತ್ರ ಅಂಕದ ಬಗ್ಗೆ ಈಗ ಚಿಂತೆ ಬೇಡ ಪಂದ್ಯವನ್ನು ಗೆಲ್ಲಲೇ ಬೇಕು ಎಂಬ ಖಡಕ್ ನಿರ್ಧಾರ ತೆಗೆದುಕೊಂಡರು. ಅದರಂತೆ ಅಂತಿಮ ದಿನದಾಟದಲ್ಲಿ ಸತತವಾಗಿ ವೇಗದ ಬೌಲಿಂಗ್ ದಾಳಿ ನಡೆಸಿ ಭಾರತ ಪಂದ್ಯ ಗೆದ್ದಿತ್ತು.
ಇದನ್ನೂ ಓದಿ ತಮ್ಮ ಮಗನಿಗೆ ಚಾನ್ಸ್ ನೀಡದ ಗೌತಮ್ ಗಂಭೀರ್ ಬಗ್ಗೆ ಅಭಿಮನ್ಯು ಈಶ್ವರನ್ ತಂದೆ ಹೇಳಿದ್ದೇನು?
ಗಂಭೀರ್ ಅವರ ಈ ದೃಢ ನಿರ್ಧಾರ ಫಲಿಸಿತು. ಭಾರತ ಪಂದ್ಯವನ್ನೂ ಗೆದ್ದಿತು, ಮಾತ್ರವಲ್ಲದೆ ದಂಡದ ಭೀತಿಯಿಂದಲೂ ಪಾರಾಯಿತು. ಸದ್ಯ WTC ಪಾಯಿಂಟ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಅಗ್ರ ಎರಡು ಸ್ಥಾನದಲ್ಲಿದೆ.