ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂರ್ಯಕುಮಾರ್‌ ಯಾದವ್‌ರನ್ನು ʻಹಂದಿʼ ಕರೆದಿದ್ದ ಮೊಹಮ್ಮದ್‌ ಯೂಸಫ್‌ಗೆ ಮದನ್‌ ಲಾಲ್‌ ತರಾಟೆ!

ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್‌ ಟೂರ್ನಿಯ ಪಂದ್ಯದ ವೇಳೆ ಹ್ಯಾಂಡ್‌ಶೇಕ್‌ ವಿವಾದದ ಬಗ್ಗೆ ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಹಂದಿ ಎಂದು ನಿಂದಿಸಿದ್ದ ಪಾಕ್‌ ಮಾಜಿ ನಾಯಕ ಮೊಹಮ್ಮದ್‌ ಯೂಸಫ್‌ ಅವರನ್ನು ಮಾಜಿ ಕ್ರಿಕೆಟಿಗ ಮದನ್‌ ಲಾಲ್‌ ಟೀಕಿಸಿದ್ದಾರೆ.

ಮೊಹಮ್ಮದ್‌ ಯೂಸಫ್‌ ವಿರುದ್ದ ಮದನ್‌ ಲಾಲ್‌ ಕಿಡಿ.

ನವದೆಹಲಿ: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Surykumar Yadav) ಅವರನ್ನು ಹಂದಿ ಎಂದು ನಿಂದಿಸಿದ್ದ ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಯೂಸಫ್‌ (Mohammad Yousuf) ಅವರನ್ನು ಟೀಮ್‌ ಇಂಡಿಯಾದ ಮಾಜಿ ಆಟಗಾರ ಮದನ್‌ ಲಾಲ್‌ (Madan Lal) ಟೀಕಿಸಿದ್ದಾರೆ. ನಿಮ್ಮ ಹೇಳಿಕೆಗಳು ನಾಚಿಕೆಗೇಡಿನ ಸಂಗತಿಯಾಗಿದೆ ಹಾಗೂ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂದು ಅನಿಸಿಕೊಳ್ಳಲು ಅನರ್ಹ ಎಂದು ಕಿಡಿಕಾರಿದ್ದಾರೆ. ಇದು7 ಪಾಕಿಸ್ತಾನದ ಅಸಲಿ ಎಂದು ಮದನ್‌ ಲಾಲ್‌ ವ್ಯಂಗ್ಯವಾಡಿದ್ದಾರೆ. ಅಂದ ಹಾಗೆ ಸೆ. 14 ರಂದು ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.

ಪಾಕಿಸ್ತಾನ ವಿರುದ್ದ ಭಾರತ ತಂಡ ಗೆಲುವು ಪಡೆದ ಬಳಿಕ ನಾಯಕ ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಟೀಮ್‌ ಇಂಡಿಯಾ ಆಟಗಾರರು ಪಾಕ್‌ ಆಟಗಾರರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿತ್ತು. ಇದರಿಂದ ಸಾಕಷ್ಟು ಹೈಡ್ರಾಮಾ ನಡೆದಿತ್ತು. ಪಾಕಿಸ್ತಾನ ಮಾಜಿ ನಾಯಕ ಮೊಹಮ್ಮದ್‌ ಯೂಸಫ್‌ ಅವರು, ಟಿವಿ ಕಾರ್ಯಕ್ರಮವೊಂದರಲ್ಲಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಹಂದಿಗೆ ಹೋಲಿಸಿದ್ದರು ಹಾಗೂ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್‌ ಅವರು ಭಾರತದ ಗೆಲುವಿಗೆ ನೆರವು ನೀಡಿದ್ದಾರೆ ಎಂದು ಆರೋಪಿಸಿದ್ದರು. ಮೊಹಮ್ಮದ್‌ ಯೂಸಫ್‌ ಅವರ ಹೇಳಿಕೆಯನ್ನು ಕ್ರಿಕೆಟ್‌ ಅಭಿಮಾನಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರು ಕೂಡ ಟೀಕಿಸಿದ್ದಾರೆ.

Asia Cup 2025: ಬಾಂಗ್ಲಾ ವಿರುದ್ಧ ಸೋಲು; ಆಫ್ಘಾನ್‌ ಸೂಪರ್‌-4 ಲೆಕ್ಕಾಚಾರ ಹೇಗಿದೆ?

ಇಂಡಿಯಾ ಟುಡೇ ಜೊತೆ ಮಾತನಾಡಿದ ಮದನ್‌ ಲಾಲ್‌, ಮೊಹಮ್ಮದ್‌ ಯೂಸಫ್‌ ಅವರು ಮೂರ್ಖತನದ ಹೇಳಿಕೆಯನ್ನು ನೀಡಿದ್ದಾರೆಂದು ದೂರಿದ್ದಾರೆ. "ಓಹ್, ನೋಡಿ, ಅದು ಪಾಕಿಸ್ತಾನದ ಸ್ವಭಾವ. ನೀವು ಯಾರನ್ನಾದರೂ ಹೇಗೆ ನಿಂದಿಸಬಹುದು? ಅವರಿಗೆ ತಿಳಿದಿರುವ ಮತ್ತು ಬೇರೇನೂ ತಿಳಿದಿಲ್ಲದ ಏಕೈಕ ವಿಷಯಗಳು ಇವು. ನಾನು ಇದರ ಬಗ್ಗೆ ಹೆಚ್ಚಿಗೆ ಹೇಳಲಾರೆ. ದುರುಪಯೋಗಪಡಿಸಿಕೊಳ್ಳುವುದು ತುಂಬಾ ತಪ್ಪು ಮತ್ತು ಮಾಜಿ ಕ್ರಿಕೆಟಿಗರಿಂದ ಬಂದಿರುವ ಹೇಳಿಕೆ ಸಂಪೂರ್ಣವಾಗಿ ಮೂರ್ಖತನದಿಂದ ಕೂಡಿದೆ," ಎಂದು ಹೇಳಿದ್ದಾರೆ.

ಮೊಹಮ್ಮದ್‌ ಯೂಸುಫ್ ಅವರ ಅಂಪೈರಿಂಗ್ ಪಕ್ಷಪಾತದ ಆರೋಪಗಳನ್ನು ಮದನ್‌ ಲಾಲ್ ತಳ್ಳಿ ಹಾಕಿದ್ದಾರೆ. ಡಿಆರ್‌ಎಸ್‌ನಂತಹ ಆಧುನಿಕ ವ್ಯವಸ್ಥೆಗಳೊಂದಿಗೆ, ಅಂತಹ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದರು. ಸೂರ್ಯಕುಮಾರ್ ಯಾದವ್‌ಗೆ ಯೂಸುಫ್ ಅವರ ಹೇಳಿಕೆಗಳು ಅವಮಾನಿಸಿದ್ದಲ್ಲದೆ, ಕ್ರೀಡಾ ಮನೋಭಾವಕ್ಕೂ ಹಾನಿ ಮಾಡಿದೆ ಎಂದು ಟೀಮ್‌ ಇಂಡಿಯಾ ಮಾಜಿ ಕೋಚ್‌ ಆರೋಪ ಮಾಡಿದ್ದಾರೆ.

Asia Cup 2025: ಬಹಿಷ್ಕಾರದ ಬೆದರಿಕೆಯಿಂದ ಹಿಂದೆ ಸರಿದ ಪಾಕ್‌; ಯುಎಇ ವಿರುದ್ಧ ಕಣಕ್ಕೆ

ಬಹಿಷ್ಕಾರದ ಕರೆಗಳ ನಡುವೆ, ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಅಂತಿಮವಾಗಿ ನಡೆದಿತ್ತು ಮತ್ತು ಅಂತಿಮವಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು 7 ವಿಕೆಟ್‌ಗಳ ಪ್ರಾಬಲ್ಯ ಸಾಧಿಸಿತು. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ, ಸೂಪರ್‌-4ರ ಹಂತಕ್ಕೆ ಪ್ರವೇಶ ಮಾಡಿದೆ. ಆದರೆ, ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು, ಇನ್ನೊಂದು ಪಂದ್ಯವನ್ನು ಸೋತಿರುವ ಪಾಕ್‌ಗೆ ಬುಧವಾರ ಯುಎಇ ವಿರುದ್ದ ಗೆಲ್ಲಲೇ ಬೇಕಾದ ಪರಿಸ್ಥಿತಿ ಉಂಟಾಗಿದೆ.