Asia Cup 2025: ಬಾಂಗ್ಲಾ ವಿರುದ್ಧ ಸೋಲು; ಆಫ್ಘಾನ್ ಸೂಪರ್-4 ಲೆಕ್ಕಾಚಾರ ಹೇಗಿದೆ?
ಅಫ್ಘಾನಿಸ್ತಾನಕ್ಕೆ ಸೂಪರ್-4 ಹಂತಕ್ಕೇರಲು ಗುರುವಾರ(ಸೆ.18) ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆಲ್ಲಲೇ ಬೇಕು. ಸೋತರೆ ಟೂರ್ನಿಯಿಂದ ಹೊರಬಳಲಿದೆ. ಸಣ್ಣ ಅಂತರದಿಂ ಗೆದ್ದರೂ ಆಪ್ಘಾನ್, ಸೂಪರ್-4 ಪ್ರವೇಶ ಪಡೆಯಲಿದೆ. ಕಾರಣ ತಂಡದ ರನ್‌ರೇಟ್ ಉತ್ತಮವಾಗಿದೆ. +2.150 ಇದೆ. ಬಾಂಗ್ಲಾದ ರನ್‌ರೇಟ್ -0.270 ಇದೆ.

-

ಅಬುಧಾಬಿ: ಸೆಪ್ಟೆಂಬರ್ 16, ಮಂಗಳವಾರ ಅಬುಧಾಬಿಯಲ್ಲಿ ನಡೆದ ನಿರ್ಣಾಯಕ ಗ್ರೂಪ್ ಬಿ ಪಂದ್ಯದಲ್ಲಿ ಬಾಂಗ್ಲಾದೇಶ(Bangladesh) ವಿರುದ್ಧ ಸೋತ ನಂತರ ಅಫ್ಘಾನಿಸ್ತಾನ(Afghanistan) ತಂಡದ ಏಷ್ಯಾಕಪ್(Asia Cup 2025) ಹಾದಿ ಕಠಿಣವಾಗಿದೆ. ಶ್ರೀಲಂಕಾ ಈಗಾಗಲೇ ಆಡಿದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಗಳಿಸಿದೆ. ಆಫ್ಘಾನ್ ವಿರುದ್ಧ ಗೆಲುವು ಸಾಧಿಸಿದ ಬಾಂಗ್ಲಾದೇಶ ಸೂಪರ್ ಫೋರ್ ರೇಸ್ ಜೀವಂತವಿರಿಸಿಕೊಂಡಿತು. ಇದೀಗ ಅಫ್ಘಾನಿಸ್ತಾನದ ಸೂಪರ್-4 ಲೆಕ್ಕಾಚಾರ ಹೇಗಿದೆ ಎಂಬ ವರದಿ ಇಲ್ಲಿದೆ.
ಬಾಂಗ್ಲಾದೇಶ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ದಾಖಲಿಸಿ 4 ಅಂಕದೊಂದಿಗೆ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾಕ್ಕೆ ಇನ್ನು ಯಾವುದೇ ಪಂದ್ಯ ಬಾಕಿ ಇಲ್ಲ. ಆದರೆ ಅಫ್ಘಾನ್‌ಗೆ ಇನ್ನೊಂದು ಪಂದ್ಯ ಬಾಕಿ ಇದೆ. ಅದು ಶ್ರೀಲಂಕಾ ವಿರುದ್ಧ.
ಮಾಡು ಇಲ್ಲವೇ ಮಡಿ ಪಂದ್ಯ
ಅಫ್ಘಾನಿಸ್ತಾನಕ್ಕೆ ಸೂಪರ್-4 ಹಂತಕ್ಕೇರಲು ಗುರುವಾರ(ಸೆ.18) ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆಲ್ಲಲೇ ಬೇಕು. ಸೋತರೆ ಟೂರ್ನಿಯಿಂದ ಹೊರಬಳಲಿದೆ. ಸಣ್ಣ ಅಂತರದಿಂ ಗೆದ್ದರೂ ಆಪ್ಘಾನ್, ಸೂಪರ್-4 ಪ್ರವೇಶ ಪಡೆಯಲಿದೆ. ಕಾರಣ ತಂಡದ ರನ್‌ರೇಟ್ ಉತ್ತಮವಾಗಿದೆ. +2.150 ಇದೆ. ಬಾಂಗ್ಲಾದ ರನ್‌ರೇಟ್ -0.270 ಇದೆ.
ಶ್ರೀಲಂಕಾ ಸೋತರೂ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಕಡಿಮೆ. ಲಂಕಾದ ರನ್‌ರೇಟ್ ಕೂಡ ಉತ್ತಮವಾಗಿದೆ. ಪವಾಡವೊಂದು ನಡೆದು ದೊಡ್ಡ ಅಂತರದ ಸೋಲು ಕಂಡರಷ್ಟೇ ಟೂರ್ನಿಯಿಂದ ಹೊರಬೀಳಬಹುದು. ಬಾಂಗ್ಲಾದೇಶಕ್ಕೆ ಸೂಪರ್-4 ಹಂತಕ್ಕೇರಲು ಆಪ್ಘಾನ್ ಸೋತರಷ್ಟೇ ಅವಕಾಶ. ಹೀಗಾಗಿ ಬಾಂಗ್ಲಾ ತಂಡ ಆಪ್ಘಾನ್ ಸೋಲನ್ನು ಬಯಸಬೇಕಿದೆ.
ಇದನ್ನೂ ಓದಿ Asia Cup 2025: ಬಹಿಷ್ಕಾರದ ಬೆದರಿಕೆಯಿಂದ ಹಿಂದೆ ಸರಿದ ಪಾಕ್; ಯುಎಇ ವಿರುದ್ಧ ಕಣಕ್ಕೆ