ಅಬುದಾಬಿ: ಸೋಮವಾರ ಒಮಾನ್ ವಿರುದ್ಧ ( Oman vs UAE) ಯುಎಇ ತಂಡ 42 ರನ್‌ಗಳ ಗೆಲುವು ದಾಖಲಿಸಿತು. ಇದರ ಫಲವಾಗಿ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಭಾರತ (India) ತಂಡ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಹಂತಕ್ಕೆ ಪ್ರವೇಶ ಮಾಡಿತು. ಟೀಮ್ ಇಂಡಿಯಾ ಇಲ್ಲಿಯವರೆಗೂ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ತನ್ನ ಮೊದಲನೇ ಪಂದ್ಯದಲ್ಲಿ ಯುಎಇ ವಿರುದ್ದ ಗೆದ್ದಿದ್ದ ಟೀಮ್ ಇಂಡಿಯಾ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ವಿರುದ್ದ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.
ಇಲ್ಲಿನ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಮುಹಮ್ಮದ್ ವಾಸೀಮ್ (69 ರನ್) ಹಾಗೂ ಆಲಿಶನ್ ಶರಫು (51 ರನ್) ಅವರ ಅರ್ಧಶತಕಗಳ ಬಲದಿಂದ ಯುಎಇ ತಂಡ, ಎದುರಾಳಿ ಒಮಾನ್ ವಿರುದ್ಧ 42 ರನ್‌ಗಳಿಂದಗ ಗೆಲುವು ಪಡೆಯಿತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ 20 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆ 172 ರನ್‌ಗಳನ್ನು ಕಲೆ ಹಾಕಿತು.
Asia Cup 2025: ಅರ್ಧಶತಕ ಬಾರಿಸಿ ಜೋಸ್ ಬಟ್ಲರ್ ದಾಖಲೆ ಮುರಿದ ಮುಹಮ್ಮದ್ ವಾಸೀಮ್!
ನಂತರ ಗುರಿ ಹಿಂಬಾಲಿಸಿದ ಒಮಾನ್ ತಂಡ, 18.4 ಓವರ್‌ಗಳಿಗೆ 130 ರನ್‌ಗಳಿಗೆ ಆಲ್‌ಔಟ್ ಆಯಿತು. ಸಿದ್ದಿಕ್ ಅವರು ಒಮಾನ್ ಆರಂಭಿಕ ಬ್ಯಾಟ್ಸ್‌ಮನ್‌ಗಳು ಆಮಿರ್ ಖಲೀಮ್ (2) ಹಾಗೂ ನಾಯಕ ಜತೀಂದರ್ ಸಿಂಗ್ (20) ಅವರನ್ನು ಔಟ್ ಮಾಡಿದ್ದರು. ಆ ಮೂಲಕ ಒಮಾನ್ ಕೇವಲ 23 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಎಡಗೈ ಸ್ಪಿನ್ನರ್ ಹೈದರ್ ಅಲಿ 22 ರನ್ ನೀಡಿ ಎರಡು ವಿಕೆಟ್ ಕಿತ್ತರು. ಆ ಮೂಲಕ ಒಮಾನ್ ತಂಡ ಏಳನೇ ಓವರ್‌ನಲ್ಲಿ 50 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.
ಆರ್ಯನ್ ಬಿಷ್ಟ್ ಹಾಗೂ ವಿಕೆಟ್ ಕೀಪರ್ ವಿನಾಯಕ್ ಶಕ್ಲಾ ಅವರು ತಂಡವನ್ನು ಅಪಾಯದಿಂದ ಪಾರು ಮಾಡಲು ಪ್ರಯತ್ನಿಸಿದ್ದರು. ಆ ಮೂಲಕ ಒಮಾನ್ 10 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆ 74 ರನ್‌ಗಳನ್ನು ಕಲೆ ಹಾಕಿತ್ತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ವೇಳೆ ಆರ್ಯನ್ ಬಿಷ್ಟ್, ಮುಹಮ್ಮದ್ ಜವಾದುಲ್ಹಾಗೆ ಬೌಲ್ಡ್ ಆದರು. ನಂತರ ಜಿತೆನ್ ರಾಮನಂದಿ (13) ಅವರು ತಂಡವನ್ನು ಗೆಲುವಿನ ಸನಿಹ ತಂದು ಔಟ್ ಆದರು.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
ಯುಎಇ ಪರ ಜುನೈದ್ ಸಿದ್ದಿಕ್ ಅವರು 23 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಹೈದರ್ ಅಲಿ ಮತ್ತು ಮುಹಮ್ಮದ್ ಜವಾದುಲ್ಲಾ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಮುಹಮ್ಮದ್ ರುಹಿದ್ ಖಾನ್ ಒಂದು ವಿಕೆಟ್ ಪಡೆದರು.
ಭಾರತ ತಂಡಕ್ಕೆ ಮುಂದಿನ ಪಂದ್ಯ ಯಾವಾಗ?
ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ, ಲೀಗ್ ಹಂತದ ಕೊನೆಯ ಪಂದ್ಯವನ್ನು ಸೆಪ್ಟಂಬರ್ 19 ರಂದು ಒಮಾನ್ ವಿರುದ್ದ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದರೂ, ಸೋತರೂ ಭಾರತಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.