ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಸಂಜು ಸ್ಯಾಮ್ಸನ್‌ ಬದಲು ಜಿತೇಶ್‌ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್‌!

ಪಾಕಿಸ್ತಾನ ವಿರುದ್ಧ 2025ರ ಏಷ್ಯಾ ಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಪಂದ್ಯದ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್‌, ಸಂಜು ಸ್ಯಾಮ್ಸನ್‌ ಬದಲಿಗೆ ಜಿತೇಶ ಶರ್ಮಾಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಬದಲು ಜಿತೇಶ್‌ ಶರ್ಮಾ ಆಡಬೇಕು: ಶ್ರೀಕಾಂತ್‌!

ಸಂಜು-ಜಿತೇಶ್‌ ನಡುವೆ ಉತ್ತಮ ಮ್ಯಾಚ್‌ ಫಿನಿಷರ್‌ ಅನ್ನು ಆರಿಸಿದ ಕೆ ಶ್ರೀಕಾಂತ್‌. -

Profile Ramesh Kote Sep 15, 2025 4:46 PM

ನವದೆಹಲಿ: ಪಾಕಿಸ್ತಾನ ವಿರುದ್ಧ 2025ರ ಏಷ್ಯಾ ಕಪ್‌ ಟೂರ್ನಿಯ ಪಂದ್ಯದಲ್ಲಿ (IND vs PAK) ಭಾರತ ತಂಡದ ಏಳು ವಿಕೆಟ್‌ಗಳ ಜಯದ ಹೊರತಾಗಿಯೂ ಮುಂದಿನ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಪರ ಮ್ಯಾಚ್‌ ಫಿನಿಷರ್‌ ಆಗಿ ಸಂಜು ಸ್ಯಾಮ್ಸನ್‌ ಅವರ ಬದಲು ಜಿತೇಶ್‌ ಶರ್ಮಾ (Jitesh Sharma) ಆಡಬೇಕೆಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ (K Srikkanth) ಆಗ್ರಹಿಸಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿ ಶುಭಮನ್‌ ಗಿಲ್‌ ಹಾಗೂ ಅಭಿಷೇಕ್‌ ಶರ್ಮಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ.

ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣ ನಡೆದಿದ್ದ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ಗೆ ಅವಕಾಶ ಸಿಕ್ಕಿರಲಿಲ್ಲ. ನಾಯಕ ಸೂರ್ಯಕುಮಾರ್‌ ಯಾದವ್‌ ಅವರೇ ಮೂರನೇ ಕ್ರಮಾಂಕದಲ್ಲಿ 37 ಎಸೆತಗಳಲ್ಲಿ ಅಜೇಯ 47 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಪಂದ್ಯವನ್ನು ಮುಗಿಸಿದ್ದರು. ಅಲ್ಲದೆ ಮೂರನೇ ವಿಕೆಟ್‌ ಉರುಳಿದ ಬಳಿಕ ಸಂಜು ಸ್ಯಾಮ್ಸನ್‌ಗೆ ಆಡಲು ಅವಕಾಶವನ್ನು ನೀಡಬೇಕಾಗಿತ್ತು. ಆದರೆ, ಇವರ ಶಿವಂ ದುಬೆ ಕ್ರೀಸ್‌ಗೆ ಬಂದಿದ್ದರು. ಹಾಗಾಗಿ ಸಂಜುಗೆ ಮತ್ತೊಮ್ಮೆ ಬ್ಯಾಟಿಂಗ್‌ಗೆ ಅವಕಾಶ ಸಿಗಲಿಲ್ಲ.

IND vs PAK: ಮುಂದಿನ ಭಾನುವಾರ ಮತ್ತೆ ಭಾರತ-ಪಾಕ್‌ ಪಂದ್ಯ

ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಕೆ ಶ್ರೀಕಾಂತ್‌, "ಶೇ 100ರಷ್ಟು ಜಿತೇಶ್‌ಶರ್ಮಾ ಅತ್ಯುತ್ತಮ ಫಿನಿಷರ್‌ ಆಗಿದ್ದಾರೆ. ಸಂಜು ಸ್ಯಾಮ್ಸನ್‌ ಅವರಿಗಾಗಿ ನಾನು ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಸಂಜು ಅದ್ಭುತ ಬ್ಯಾಟ್ಸ್‌ಮನ್‌ ಹಾಗೂ ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌. ಅಗ್ರ ಮೂರು ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದರೆ, ಅವರು ಎದುರಾಳಿ ಬೌಲರ್‌ಗಳನ್ನು ದಂಡಿಸುತ್ತಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ನೇರವಾಗಿ ಕ್ರೀಸ್‌ಗೆ ಹೋಗಿ ಸ್ಪೋಟಕ ಬ್ಯಾಟಂಗ್‌ ಪ್ರದರ್ಶನವನ್ನು ತೋರಲು ಅವರಿಂದ ಸಾಧ್ಯವಿಲ್ಲ," ಎಂದು ಕೆ ಶ್ರೀಕಾಂತ್‌ ತಿಳಿಸಿದ್ದಾರೆ.

Asia Cup 2025: ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಬಹಿರಂಗಪಡಿಸಿದ ಶುಭಮನ್‌ ಗಿಲ್‌!

"ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವುದು ತುಂಬಾ ಕಠಿಣವಾಗಿದೆ. ಟೀಮ್‌ ಮ್ಯಾನೇಜ್‌ಮೆಂಟ್‌ ಅವರನ್ನು ನಿರ್ವಹಿಸುತ್ತಿದೆ. ಆದರೆ, ಅವರ ಬದಲು ಮಧ್ಯಮ ಕ್ರಮಾಂಕದಲ್ಲಿ ಜಿತೇಶ್‌ ಶರ್ಮಾ ಆಡಬೇಕು. ಆರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಅಥವಾ ಹಾರ್ದಿಕ್‌ ಪಾಂಡ್ಯ ಅವರಲ್ಲಿ ಯಾರು ಉತ್ತಮ ಬ್ಯಾಟ್ಸ್‌ಮನ್‌? ಆರನೇ ಕ್ರಮಂಕದಲ್ಲಿ ಹಾರ್ದಿಕ್‌ ಪಾಂಡ್ಯ ಅತ್ಯುತ್ತಮ ಬ್ಯಾಟ್ಸ್‌ಮನ್‌, ಆದರೆ, ಸಂಜು ಸ್ಯಾಮ್ಸನ್‌ ಇಲ್ಲ," ಎಂದು ಕೆ ಶ್ರೀಕಾಂತ್‌ ತಿಳಿಸಿದ್ದಾರೆ.

ಕಳೆದ ವರ್ಷದಿಂದ ಸಂಜು ಸ್ಯಾಮ್ಸನ್‌ ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದರು ಹಾಗೂ ಮೂರು ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಅವರು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ 12 ಇನಿಂಗ್ಸ್‌ಗಳಿಂದ 183.70ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಬಾರಿಸಿದ್ದರು ಹಾಗೂ ಇದರಲ್ಲಿ ಅವರು ಮೂರು ಶತಕಗಳನ್ನು ಕೂಡ ಸಿಡಿಸಿದ್ದರು. ಆದರೆ, ಏಷ್ಯಾ ಕಪ್‌ಗೆ ಶುಭಮನ್‌ ಗಿಲ್‌ ಬಂದಿದ್ದರಿಂದ ಸಂಜುಗೆ ಅಗ್ರ ಕ್ರಮಾಂಕದಲ್ಲಿ ಅವಕಾಶ ತಪ್ಪಿದೆ.