ನವದೆಹಲಿ: ಬುಲವಾಯೊದ ಕ್ವೀನ್ಸ್ ಪಾರ್ಕ್‌ನಲ್ಲಿ ಆಗಸ್ಟ್ 7 ರಂದು ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ (ZIM vs NZ) ಜಿಂಬಾಬ್ವೆ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಜಿಂಬಾಬ್ವೆ ಪ್ಲೇಯಿಂಗ್ XIನಲ್ಲಿ ಆಡುವ ಮೂಲಕ ಜಿಂಬಾಬ್ವೆ ತಂಡದ ಆಟಗಾರ ಬ್ರೆಂಡನ್ ಟೇಲರ್ (Brendan Taylor) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ದೀರ್ಘಾವಧಿ ಆಡಿದ ಆಟಗಾರರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಆ ಮೂಲಕ ಇಂಗ್ಲೆಂಡ್ ದಿಗ್ಗಜ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ.
ಬ್ರೆಂಡನ್ ಟೇಲರ್ ಅವರು ನಾಲ್ಕು ವರ್ಷಗಳ ಬಳಿಕ ಜಿಂಬಾಬ್ವೆ ತಂಡದ ಪ್ಲೇಯಿಂಗ್ XIನಲ್ಲಿ ಆಡಿದ್ದಾರೆ. 2021ರಲ್ಲಿ ಹರಾರೆಯಲ್ಲಿ ಬಾಂಗ್ಲಾದೇಶ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಅವರು ಮೂರೂವರೆ ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದರು. ಜಿಂಬಾಬ್ವೆ ಕ್ರಿಕೆಟ್ ದಂತಕಥೆ, ಉದ್ಯಮಿಯಿಂದ ಹಣ ಮತ್ತು ಉಡುಗೊರೆಗಳನ್ನು ಪಡೆದ ನಂತರ ಸಕಾಲದಲ್ಲಿ ವಿಚಾರಣೆಯನ್ನು ವರದಿ ಮಾಡದಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿತ್ತು.
IND vs ENG ಸಂಯೋಜನೆಯ ಪ್ಲೇಯಿಂಗ್ XI ಪ್ರಕಟಿಸಿದ ಆಕಾಶ ಚೋಪ್ರಾ!
21ನೇ ಶತಮಾನದಲ್ಲಿ ವಿಶ್ವ ದಾಖಲೆ ಬರೆದ ಬ್ರೆಂಡನ್ ಟೇಲರ್
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಮೂಲಕ ಬ್ರೆಂಡನ್ ಟೇಲರ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ 21ನೇ ಶತಕಮಾನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘಾವಧಿ ಆಡಿದ ವಿಶ್ವದ 11ನೇ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.
ದೀರ್ಘಾವಧಿ ಟೆಸ್ಟ್ ವೃತ್ತಿ ಜೀವನದ ಆಟಗಾರರು
ವಿಲ್ಫ್ರೆಡ್ ರೋಡ್ಸ್ (ಇಂಗ್ಲೆಂಡ್): 30 ವರ್ಷಗಳು, 315 ದಿನಗಳು, 1899-1390
ಬ್ರಿಯಾನ್ ಕ್ಲೋಸ್ (ಇಂಗ್ಲೆಂಡ್): 26 ವರ್ಷಗಳು, 356 ದಿನಗಳು, 1949-1976
ಫ್ರಾಂಕ್ ವೂಲಿ (ಇಂಗ್ಲೆಂಡ್) 25 ವರ್ಷಗಳು, 13 ದಿನಗಳು, 1909-1934
ಜಾರ್ಜ್ ಹೆಡ್ಲಿ (ವೆಸ್ಟ್ ಇಂಡೀಸ್) 24 ವರ್ಷಗಳು, 10 ದಿನಗಳು, 1930 1954
ಸಚಿನ್ ತೆಂಡೂಲ್ಕರ್ (ಭಾರತ) 24 ವರ್ಷಗಳು, 1 ದಿನ, 1989 2013
ಜಾನ್ ಟ್ರೈಕೋಸ್ (ದಕ್ಷಿಣ ಆಫ್ರಿಕಾ) 23 ವರ್ಷಗಳು, 40 ದಿನಗಳು, 1970 1993
ಜ್ಯಾಕ್ ಹಾಬ್ಸ್ (ಇಂಗ್ಲೆಂಡ್) 22 ವರ್ಷಗಳು, 233 ವರ್ಷಗಳು, 1908 1930
ಜಾರ್ಜ್ ಗನ್ (ಇಂಗ್ಲೆಂಡ್) 22 ವರ್ಷಗಳು, 230 ದಿನಗಳು, 1907 1930
ಸಿಡ್ ಗ್ರೆಗೊರಿ (ಆಸ್ಟ್ರೇಲಿಯಾ) 22 ವರ್ಷಗಳು, 32 ದಿನಗಳು, 1890 1912
ಫ್ರೆಡ್ಡಿ ಬ್ರೌನ್ (ಇಂಗ್ಲೆಂಡ್) 21 ವರ್ಷ, 336 ದಿನಗಳು, 1931 1953
ಡೇವ್ ನೂರ್ಸೆ (ದಕ್ಷಿಣ ಆಫ್ರಿಕಾ) 21 ವರ್ಷ, 313 ದಿನಗಳು, 1902 1924
ಬ್ರೆಂಡನ್ ಟೇಲರ್ (ಜಿಂಬಾಬ್ವೆ) 21 ವರ್ಷ, 93 ದಿನಗಳು, 2004 2025
ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) 21 ವರ್ಷ, 47 ದಿನಗಳು, 2003 2024
ಶಿವನಾರಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) 21 ವರ್ಷ,47 ದಿನಗಳು 1994-2015
ಶುಭಮನ್ ಗಿಲ್ ಔಟ್! IND vs ENG ಸಂಯೋಜನೆಯ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್
21ನೇ ಶತಮಾನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬಾಂಗ್ಲಾದೇಶ ತಂಡದ ಮುಷ್ಫಿಕರ್ ರಹೀಮ್ ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಎರಡು ದಶಕಕ್ಕೂ ಅವಧಿ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಇನ್ನು ಬ್ರೆಂಡನ್ ಟೇಲರ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 35 ಪಂದ್ಯಗಳಿಂದ 2364 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಆರು ಶತಕಗಳನ್ನು ಬಾರಿಸಿದ್ದಾರೆ. ಇವರು 2004ರಲ್ಲಿಯೇ ಶ್ರೀಲಂಕಾ ವಿರುದ್ಧ ಹರಾರೆಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.