ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಯಾರೂ ನನ್ನ ಜೊತೆ ಮಾತನಾಡಿಲ್ಲʼ-ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಮೊಹಮ್ಮದ್‌ ಶಮಿ ಆಕ್ರೋಶ!

ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದಲ್ಲಿ ತಮಗೆ ಸ್ಥಾನ ನೀಡದ ಬಗ್ಗೆ ಹಿರಿಯ ವೇಗಿ ಮೊಹಮ್ಮದ್‌ ಶಮಿ ಬೇಸರ ವ್ಯಕ್ತಪಡಿಸಿದ್ದಾರೆ. ಫಿಟ್‌ನೆಸ್‌ ಬಗ್ಗೆ ಯಾರೂ ನನ್ನ ಬಳಿ ಸಂವಹನ ನಡೆಸಿಲ್ಲ. ರಣಜಿ ಟ್ರೋಫಿ ಆಡುವುದಾದರೆ, ಒಡಿಐ ಕ್ರಿಕೆಟ್‌ ಯಾಕೆ ಆಡಲು ಸಾಧ್ಯವಿಲ್ಲ ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ದ ಶಮಿ ಕಿಡಿ ಕಾರಿದ್ದಾರೆ.

ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ದ ಶಮಿ ಕಿಡಿ.

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಒಡಿಐ ಹಾಗೂ ಟಿ20ಐ ಸರಣಿಗಳ (IND vs AUS) ಭಾರತ ತಂಡದಿಂದ ತನ್ನನ್ನು ಕೈ ಬಿಟ್ಟಿರುವುದಕ್ಕೆ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಬೇಸರ ವ್ಯಕ್ತಪಡಿಸಿದ್ದಾರೆ. ಫಿಟ್‌ನೆಸ್‌ ವಿಚಾರವಾಗಿ ಯಾರೂ ಕೂಡ ನನ್ನ ಬಳಿ ಸಂಹವನ ನಡೆಸಿಲ್ಲ ಎಂದು ದೂರಿದ ಶಮಿ, 4 ದಿನಗಳ ರಣಜಿ ಟ್ರೋಫಿ ಪಂದ್ಯವನ್ನು ಆಡಲು ಫಿಟ್‌ ಇರುವ ನಾನು, 50 ಓವರ್‌ಗಳ ಪಂದ್ಯವನ್ನು ಏಕೆ ಆಡಲು ಸಾಧ್ಯವಿಲ್ಲ ಎಂದು ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಶಮಿ ಕಿಡಿ ಕಾರಿದ್ದಾರೆ. ಮೊಹಮ್ಮದ್‌ ಶಮಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಬಳಿಕ ಭಾರತ ತಂಡದ ಪರ ಇನ್ನೂ ಕಮ್‌ಬ್ಯಾಕ್‌ ಮಾಡಿಲ್ಲ. ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದ ಅವರು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಲು ಎದುರು ನೋಡುತ್ತಿದ್ದರು. ಆದರೆ, ಅವರಿಗೆ ಆಯ್ಕೆದಾರರು ಬೇಸರ ಮೂಡಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಿಂದ ಮೊಹಮ್ಮದ್‌ ಶಮಿಯನ್ನು ಕೈ ಬಿಟ್ಟ ಬಳಿಕ ಅವರನ್ನು ಬಂಗಾಳ ಪರ ರಣಜಿ ಟ್ರೋಫಿ ಆಡಲು ಅವಕಾಶ ನೀಡಲಾಗಿದೆ. ಅಕ್ಟೋಬರ್‌ 15 ರಂದು ಆರಂಭವಾಗಲಿರುವ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಭಿಮನ್ಯು ಈಶ್ವರನ್‌ ನಾಯಕತ್ವದ ಬಂಗಾಳ ಪರ ಶಮಿ ಕಣಕ್ಕೆ ಇಳಿಯಲಿದ್ದಾರೆ. ಈ ಬಗ್ಗೆ ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಮಾಹಿತಿ ನೀಡಿದೆ.

IND vs AUS: ಭಾರತ ಎದುರಿನ ಏಕದಿನ ಸರಣಿಯ ಆರಂಭಿಕ ಪಂದ್ಯದಿಂದ ಇಂಗ್ಲಿಸ್, ಜಂಪಾ ಔಟ್‌

"ಫಿಟ್‌ನೆಸ್‌ ಸಂಬಂಧಿಸಿದಂತೆ ನನ್ನ ಜೊತೆ ಭಾರತ ತಂಡದಿಂದ ಯಾರೊಬ್ಬರೂ ಮಾತನಾಡಿಲ್ಲ. ಫಿಟ್‌ನೆಸ್‌ ಬಗ್ಗೆ ಅವರಿಗೆ ಮಾಹಿತಿ ನೀಡುವ ವ್ಯಕ್ತಿ ನಾನಲ್ಲ ಹಾಗೂ ಈ ಬಗ್ಗೆ ಅವರೇ ನನ್ನ ಬಳಿ ಮಾತನಾಡಬೇಕು. ನಾನು ನಾಲ್ಕು ದಿನಗಳ ಪಂದ್ಯವನ್ನು ಆಡಬಹುದೆಂದಾದರೆ. 50 ಓವರ್‌ಗಳ ಪಂದ್ಯವನ್ನು ಆಡಲು ಸಾಧ್ಯವಿಲ್ಲವೇ? ಒಂದು ನಾನು ಫಿಟ್‌ ಇಲ್ಲವಾಗಿದ್ದರೆ ಬೆಂಗಳೂರಿನ ಎನ್‌ಸಿಎನಲ್ಲಿ ಇರುತ್ತಿದ್ದೆ ಹಾಗೂ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿರಲಿಲ್ಲ," ಎಂದು ಮೊಹಮ್ಮದ್‌ ಶಮಿ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಅವರು, ವೇಗಿ ಮೊಹಮ್ಮದ್‌ ಶಮಿ ಅವರನ್ನು ಆಯ್ಕೆ ಮಾಡದೇ ಇರುವ ಬಗ್ಗೆ ವಿಭಿನ್ನ ಕಾರಣವನ್ನು ನೀಡಿದ್ದರು. ಶಮಿ ಬಗ್ಗೆ ನಮಗೆ ಇನ್ನೂ ಯಾವುದೇ ಹೊಸ ಅಪ್‌ಡೇಟ್‌ ಸಿಕ್ಕಿಲ್ಲ ಎಂದು ಹೇಳಿದ್ದರು.

IND vs AUS: ಆಸ್ಟ್ರೇಲಿಯಾ ಸರಣಿಯಿಂದ ನನ್ನನ್ನು ಕೈ ಬಿಟ್ಟಿದ್ದೇಕೆ? ಮೊಹಮ್ಮದ್‌ ಶಮಿ ಪ್ರತಿಕ್ರಿಯೆ!

"ಮೊಹಮ್ಮದ್‌ ಶಮಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರು ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ್ದಾರೆ. ಆದರೆ, ಕಳೆದ ಎರಡು-ಮೂರು ವರ್ಷಗಳಿಂದ ಅವರು ಸರಿಯಾಗಿ ಕ್ರಿಕೆಟ್‌ ಆಡಿಲ್ಲ. ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಅವರು ಬಂಗಾಳ ಪರ ಒಂದು ಪಂದ್ಯವನ್ನು ಆಡಿದ್ದರು. ಒಬ್ಬ ಪ್ರದರ್ಶಕನಾಗಿ ಏನು ಮಾಡಬೇಕೆಂಬುದು ಅವರಿಗೆ ತಿಳಿದಿದೆ ಆದರೆ, ಅವರು ಕ್ರಿಕೆಟ್‌ ಆಡಬೇಕಾಗಿದೆ," ಎಂದು ಅಜಿತ್‌ ಅಗರ್ಕರ್‌ ತಿಳಿಸಿದ್ದರು.

2025ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದ ಬಂಗಾಳದ ವೇಗಿ, ಅಂದಿನಿಂದ ಎಲ್ಲಾ ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ ಸಾಧನೆಯ ಮೂಲಕ ಆ ಟೂರ್ನಿಯನ್ನು ಬಲವಾಗಿ ಆರಂಭಿಸಿದರೂ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ವಿಕೆಟ್ ಪ್ರದರ್ಶನ ಮತ್ತು ಫೈನಲ್‌ನಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಶಮಿ ಮತ್ತೆ ಫಾರ್ಮ್‌ಗೆ ಮರಳುವ ಮೊದಲು ಸತತ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆದಿರಲಿಲ್ಲ.