ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುವ ಅಭಿಮಾನಿಯನ್ನು ತಡೆದ ಭದ್ರತಾ ಸಿಬ್ಬಂದಿಯನ್ನು ಗದರಿದ ರೋಹಿತ್‌ ಶರ್ಮಾ!

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಗೆ ರೋಹಿತ್‌ ಶರ್ಮಾ ತಯಾರಿ ನಡೆಸುತ್ತಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಅಭ್ಯಾಸ ಮುಗಿಸಿದ ಬಳಿಕ ಯುವ ಅಭಿಮಾನಿಯನ್ನು ತಡೆದಿದ್ದ ಭದ್ರತಾ ಸಿಬ್ಬಂದಿಯನ್ನು ಗದರಿದರು. ನಂತರ ಯುವ ಅಭಿಮಾನಿಗಳಿಗೆ ಆಟೋಗ್ರಾಫ್‌ ನೀಡಿದರು.

ಯುವ ಅಭಿಮಾನಿಯನ್ನು ತಡೆದಿದ್ದ ಭದ್ರತಾ ಸಿಬ್ಬಂದಿಯನ್ನು ಗದರಿದ ಹಿಟ್‌ಮ್ಯಾನ್‌.

ಮುಂಬೈ: ಭಾರತ (India) ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿರುವ ರೋಹಿತ್‌ ಶರ್ಮಾ (Rohit Sharma), ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs AUS) ಸಜ್ಜಾಗುತ್ತಿದ್ದಾರೆ. ಈ ಸರಣಿಯ ತಯಾರಿ ಅಂಗವಾಗಿ ಅವರು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸವನ್ನು ನಡೆಸಿದರು. ಈ ವೇಳೆ ರೋಹಿತ್‌ ಶರ್ಮಾ ಅವರು ಯುವ ಅಭಿಮಾನಿಯನ್ನು ಹತ್ತಿರಕ್ಕೆ ಕರೆಸಿಕೊಂಡರು. ಆ ಮೂಲಕ ಹಿಟ್‌ಮ್ಯಾನ್‌ ಹೃದಯವಂತಿಕೆಯನ್ನು ಮೆರೆದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ರೋಹಿತ್‌ ಶರ್ಮಾ ಅವರನ್ನು ನೋಡಲು ಶಿವಾಜಿ ಪಾರ್ಕ್‌ಗೆ ನೂರಾರು ಮಂದಿ ಅಭಿಮಾನಿಗಳು ಬಂದಿದ್ದರು. ಈ ವೇಳೆ ಬಾಲಕನೊಬ್ಬ ತನ್ನ ನೆಚ್ಚಿನ ಆಟಗಾರನನ್ನುಹತ್ತಿರದಿಂದ ಕಣ್ತುಂಬಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ಅವರು ರೋಹಿತ್‌ ಶರ್ಮಾ ಅವರ ಬಳಿ ಬರಲು ಪ್ರಯತ್ನಿಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ಆ ಬಾಲಕನನ್ನು ತಡೆದರು. ಈ ವೇಳೆ ರೋಹಿತ್‌ ಸರ್‌ ಎಂದು ಬಾಲಕ ಜೋರಾಗಿ ಕೂಗಿದ್ದಾನೆ. ಇದನ್ನು ಕೇಳಿಸಿಕೊಂಡ ರೋಹಿತ್‌ ಶರ್ಮಾ, ಹೇ....... ಎಂದು ಹೇಳುವ ಮೂಲಕ ಭದ್ರತಾ ಸಿಬ್ಬಂದಿಯನ್ನು ಗದರಿದರು. ನಂತರ ಯುವ ಅಭಿಮಾನಿಯನ್ನು ತಮ್ಮ ಬಳಿಗೆ ಕರೆಸಿಕೊಂಡರು. ಆ ಮೂಲಕ ಹೃದಯವಂತಿಕೆಯನ್ನು ಮೆರೆದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ರೋಹಿತ್‌ ಶರ್ಮಾ ಅವರ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

IND vs WI: ರನ್‌ಔಟ್‌ ಆದ ಬೆನ್ನಲ್ಲೆ ಶುಭಮನ್‌ ಗಿಲ್‌ ವಿರುದ್ದ ಯಶಸ್ವಿ ಜೈಸ್ವಾಲ್‌ ಕಿಡಿ! ವಿಡಿಯೊ

ಆಸ್ಟ್ರೇಲಿಯಾ ಏಕದಿನ ಸರಣಿಗೆ ರೋಹಿತ್‌ ಸಜ್ಜು

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್‌ ಶರ್ಮಾ ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಶಿವಾಜಿ ಪಾರ್ಕ್‌ನಲ್ಲಿ ನೆಟ್‌ ಸೆಷನ್‌ ಮಾಡಿದ್ದಾರೆ. ಕವರ್‌ ಡ್ರೈವ್‌, ಪುಲ್‌ ಶಾಟ್‌ ಹಾಗೂ ಸ್ವೀಪ್‌ ಶಾಟ್‌ಗಳ ಮೂಲಕ ರೋಹಿತ್‌ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿರುವಂತೆ ಕಾಣುತ್ತಿದ್ದಾರೆ. ರೋಹಿತ್‌ ಶರ್ಮಾ ಅವರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು. ಇದರ ಹೊರತಾಗಿಯೂ ರೋಹಿತ್‌ ಶರ್ಮಾ ಯುವ ಅಭಿಮಾನಿಯನ್ನು ಹತ್ತಿರಕ್ಕೆ ಕರೆಸಿಕೊಂಡಿದ್ದು ಅವರ ಹೃದಯವಂತಿಕೆಯ ನಡೆಯಾಗಿದೆ.



ಅಂದಹಾಗೆ ರೋಹಿತ್‌ ಶರ್ಮಾ ಅವರ ನೆಟ್‌ ಸೆಷನ್‌ಗೆ ಟೀಮ್‌ ಇಂಡಿಯಾ ಮಾಜಿ ಬ್ಯಾಟಿಂಗ್‌ ಕೋಚ್‌ ಅಭಿಷೇಕ್‌ ನಾಯರ್‌ ನೆರವು ನೀಡಿದ್ದರು. ಈ ವೇಳೆ ಮುಂಬೈ ಆಟಗಾರ ಅಂಗಕ್ರಿಶ್‌ ರಘುವಂಶೀ ಕೂಡ ಉಪಸ್ಥಿತರಿದ್ದರು. ಪತ್ನಿ ರಿತಿಕಾ ಸಾಜ್ದೆ ಅವರು ಕೂಡ ತಮ್ಮ ಪತಿ ರೋಹಿತ್‌ ಶರ್ಮಾ ಅವರ ಎರಡು ಗಂಟೆಗಳ ನೆಟ್‌ ಸೆಷನ್‌ ಅನ್ನು ವೀಕ್ಷಿಸಿ ಬಳಿಕ ಮನೆಗೆ ಮರಳಿದ್ದರು.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಕೊನೆಯ ಬಾರಿ ರೋಹಿತ್‌ ಶರ್ಮಾ ಭಾರತ ತಂಡದ ಪರ ಆಡಿದ್ದರು. ಈ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಇದೀಗ ದೀರ್ಘಾವಧಿ ಬಳಿಕ ರೋಹಿತ್‌ ಶರ್ಮಾ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ರೋಹಿತ್‌ ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ.