ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಡೆದ ಐದು ಪಂದ್ಯಗಳ (IND vs ENG) ಟೆಸ್ಟ್ ಸರಣಿ 2-2 ಅಂತರದ ಡ್ರಾನಲ್ಲಿ ಮುಕ್ತಾಯ ಕಂಡಿದೆ. ಇನ್ನು ಓವಲ್ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದ ಅಂತಿಮ ದಿನದಾಟದ ಕೊನೆಯ ಕ್ಷಣದಲ್ಲಿ ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ (Mohammed Siraj) ಮತ್ತು ಕನ್ನಡಿಗ ಪ್ರಸಿಧ್ ಕೃಷ್ಣ ಅವರು ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಅತಿಥೇಯ ತಂಡದ ಕೆಳ ಕ್ರಮಾಂಕದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಇದರ ಪರಿಣಾಮವಾಗಿ ಭಾರತ ತಂಡ ಐದನೇ ಪಂದ್ಯದಲ್ಲಿ 6 ರನ್‌ಗಳ ರೋಚಕ ಗೆಲುವು ಸಾಧಿಸಿ, ಸರಣಿಯನ್ನು ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ಶುಭಮನ್ ಗಿಲ್ (Shubman Gill) ಓವಲ್ ಟೆಸ್ಟ್ ಪಂದ್ಯದ ಏರಿಳಿತಗಳ ಬಗ್ಗೆ ಹಾಗೂ ಪಂದ್ಯದ ಗೆಲುವಿನಲ್ಲಿ ಪ್ರುಮುಖ ಪಾತ್ರ ವಹಿಸಿದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ ಅವರ ಕಾರ್ಯ ಕ್ಷಮತೆಯನ್ನು ಹೊಗಳಿಸಿದರು. ಪಂದ್ಯವನ್ನು ಸೋತಿದ್ದರೂ ಕ್ಯಾಚ್ ಕೈಚೆಲ್ಲಿದ್ದ ಸಿರಾಜ್ ಅವರ ಮೇಲಿನ ಗೌರವ ಮಾತ್ರ ಕಡಿಮೆಯಾಗುತ್ತಿರಲಿಲ್ಲ ಎಂದು ಗಿಲ್ ಹೇಳಿಕೊಂಡಿದ್ದಾರೆ.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶುಭಮನ್ ಗಿಲ್, "ಸಿರಾಜ್ ಕೈಬಿಟ್ಟ ಕ್ಯಾಚ್ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್‌ಗೆ ಶತಕ ಗಳಿಸಲು ಅವಕಾಶ ಮಾಡಿಕೊಟ್ಟಿತು. ಆ ಕ್ಷಣ ಪಂದ್ಯವನ್ನು ಇಂಗ್ಲೆಂಡ್ ಪರವಾಗಿ ತಿರುಗಿಸಿದರೂ, ಕೊನೆಯ ದಿನದಂದು ಸಿರಾಜ್ ಅವರ ಕಮ್‌ಬ್ಯಾಕ್ ಅದ್ಭುತವಾಗಿತ್ತು. ನಾನು ಮೊದಲೇ ಹೇಳಿದ್ದೇನೆ, ನಾವು ಸಿರಾಜ್ ಭಾಯ್ ಅವರನ್ನು ಮಾತ್ರ ನಂಬುತ್ತೇವೆ," ಎಂದು ತಿಳಿಸಿದ್ದಾರೆ.
IND vs ENG: ಶುಭಮನ್ ಗಿಲ್ ಇನ್ನೂ ಕಲಿಯಬೇಕೆಂದಿದ್ದ ಕಪಿಲ್ ದೇವ್‌ಗೆ ಯೋಗರಾಜ್ ಸಿಂಗ್ ತಿರುಗೇಟು!
"ನಾವು ಪಂದ್ಯವನ್ನು ಸೋತಿದ್ದರೂ ಸಹ, ಅವರು ಮಾಡಿದ ಪ್ರಯತ್ನವು ಖಂಡಿತವಾಗಿಯೂ ಸ್ಮರಣೀಯ. ಆದರೆ ಡ್ರೆಸ್ಸಿಂಗ್ ರೂಂನಲ್ಲಿ ಅವರಿಗಿರುವ ಗೌರವದ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಕಳೆದ 4-5 ವರ್ಷಗಳಲ್ಲಿ ಅವರು ಶ್ರಮಿಸಿ ಗಳಿಸಿರುವ ಅವರ ಗೌರವವನ್ನು ಒಂದು ಕ್ಷಣವೂ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ 4/86 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5/104 ವಿಕೆಟ್‌ಗಳೊಂದಿಗೆ ಪಂದ್ಯವನ್ನು ಮುಗಿಸಿದರು. ಅವರ ಅವಿರತ ಶಕ್ತಿ, ಬೌನ್ಸ್ ಮತ್ತು ಚಲನೆಯು ಸರಣಿಯುದ್ದಕ್ಕೂ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳಿಗೆ ಮುಳುವಾಗಿ ಕಾಡಿತು. ಐದು ಪಂದ್ಯಗಳಲ್ಲಿ 23 ವಿಕೆಟ್‌ಗಳೊಂದಿಗೆ ಸಿರಾಜ್ ಸರಣಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ಅವರು ಭಾರತದ ಅತ್ಯಂತ ವಿಶ್ವಾಸಾರ್ಹ ರೆಡ್-ಬಾಲ್ ಬೌಲರ್‌ಗಳಲ್ಲಿ ಒಬ್ಬರಾಗಿ ಏಕೆ ಉಳಿದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ," ಎಂದು ಭಾರತ ತಂಡದ ನಾಯಕ ಶ್ಲಾಘಿಸಿದ್ದಾರೆ.
IND vs ENG: ʻಒಂದು ವೇಳೆ ಬೆನ್ ಸ್ಟೋಕ್ಸ್ ಆಡಿದ್ರೆ ಇಂಗ್ಲೆಂಡ್ ಗೆಲ್ಲುತ್ತಿತ್ತುʼ-ಮೈಕಲ್ ವಾನ್!
ಓವಲ್ ಟೆಸ್ಟ್ ಪಂದ್ಯವು ತೀವ್ರ ಮತ್ತು ಸಮಬಲದ ಹೋರಾಟದಿಂದ ಕೂಡಿತ್ತು. ಇಂಗ್ಲೆಂಡ್ ತಂಡವು 374 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಆಂಗ್ಲ ಬ್ಯಾಟಿಂಗ್ ಪಡೆ ಗೆಲುವಿಗೆ ಸಮೀಪಸಿತ್ತು, ಆದರೆ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ನೇತೃತ್ವದ ಭಾರತದ ಬೌಲರ್‌ಗಳು ಕೊನೆಯ ನಾಲ್ಕು ವಿಕೆಟ್‌ಗಳನ್ನು ಕೇವಲ 28 ರನ್‌ಗಳಿಗೆ ಉರುಳಿಸುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು.
ಹ್ಯಾರಿ ಬ್ರೂಕ್ ಕ್ಯಾಚ್ ಕೈಬಿಟ್ಟಾಗಿನಿಂದ ಕೊನೆಯ ದಿನದ ಪ್ರದರ್ಶನದವರೆಗೆ ಸಿರಾಜ್ ಅವರ ಕಾರ್ಯಕ್ಷಮತೆ ಮೆಚ್ಚುಗೆಗೆ ಅರ್ಹವಾಯಿತು. ಮುಖ್ಯವಾಗಿ ಇದು ಭಾರತ ತಂಡದ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅವರ ಮೇಲಿರುವ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿತು.