ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ತಮ್ಮ ನಾಯಕತ್ವದಲ್ಲಿ ಇನ್ನೂ ಕಲಿಯಬೇಕಾಗಿದೆ ಎಂದು ಸಲಹೆ ನೀಡಿದ್ದ ಮಾಜಿ ನಾಯಕ ಕಪಿಲ್‌ ದೇವ್‌ ಅವರನ್ನು ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ಟೀಕಿಸಿದ್ದಾರೆ. ಆ ಮೂಲಕ ತಮ್ಮದೇ ಊರಿನ ಶುಭಮನ್‌ ಗಿಲ್‌ಗೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಗಿಲ್‌ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು

ಶುಭಮನ್‌ ಗಿಲ್‌ ನಾಯಕತ್ವದ ಬಗ್ಗೆ ಕಾಮೆಂಟ್‌ ಹಾಕಿದ್ದ ಕಪಿಲ್‌ ದೇವ್‌ ಅವರನ್ನು ಟೀಕಿಸಿದ ಯೋಗರಾಜ್‌ ಸಿಂಗ್‌.

Profile Ramesh Kote Aug 5, 2025 6:44 PM

ನವದೆಹಲಿ: ಶುಭಮನ್‌ ಗಿಲ್‌ (Shubman Gill) ನಾಯಕತ್ವದಲ್ಲಿ ಭಾರತ ತಂಡ ಐದನೇ ಹಾಗೂ ಟೆಸ್ಟ್‌ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ 6 ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು 2-2 ಸಮಬಲ ಸಾಧಿಸಿವೆ. ಗಿಲ್‌ ತಮ್ಮ ನಾಯಕತ್ವದ ಮೊದಲನೇ ಸರಣಿ ಇಂಗ್ಲೆಂಡ್‌ನಲ್ಲಿಇದ್ದ ಕಾರಣ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಇದನ್ನು ಅವರು ಮೆಟ್ಟಿ ನಿಂತಿದ್ದಾರೆ. ಆದರೂ ಭಾರತದ ಮಾಜಿ ನಾಯಕ ಕಪಿಲ್‌ ದೇವ್‌ ಅವರು ಗಿಲ್‌ ಇನ್ನೂ ಕಲಿಯಬೇಕಾಗಿದೆ ಎಂದು ಹೇಳಿದ್ದರು. ಇದರ ಬಗ್ಗೆ ಇದೀಗ ಭಾರತ ತಂಡದ ಮಾಜಿ ವೇಗಿ ಹಾಗೂ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ (Yograj Singh) ಪ್ರತಿಕ್ರಿಯೆ ನೀಡಿದ್ದಾರೆ. ನೀವೇನು ನಿಮ್ಮ ತಾಯಿಯ ಗರ್ಭದಿಂದಲೇ ಕಲಿತುಕೊಂಡು ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಎಎನ್‌ಐ ಜೊತೆ ಸಂಭಾಷಣೆಯಲ್ಲಿ ಮಾತನಾಡಿದ ಯೋಗರಾಜ್‌ ಸಿಂಗ್‌, ಕಪಿಲ್‌ ದೇವ್‌ ಹೆಸರನ್ನು ಪ್ರಸ್ತಾಪಿಸದೆ ಟೀಕೆ ಮಾಡಿದ್ದಾರೆ. ಭಾರತ ತಂಡದ ನಾಯಕ ಶುಭಮನ್‌ ಗಿಲ್‌ಗೆ ಈ ರೀತಿ ಹೇಳಬಾರದಿತ್ತು ಎಂದು ಅವರು ಹೇಳಿದ್ದಾರೆ.

IND vs ENG: ಮೊಹಮ್ಮದ್‌ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

"ಆರಂಭದಲ್ಲಿ ಶುಭಮನ್‌ ಗಿಲ್‌ ನಾಯಕತ್ವವನ್ನು ಆರಂಭದಲ್ಲಿ ಪ್ರಶ್ನೆ ಮಾಡಲಾಗಿತ್ತು. ಮಾಧ್ಯಮಗಳು ಟೀಕಿಸುವುದನ್ನು ನಿಲ್ಲಿಸಿದ ಬಳಿಕ ಭಾರತ ತಂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಒಬ್ಬ ವ್ಯಕ್ತಿ, ನಾಯಕತ್ವಕ್ಕೆ ಅವರು ಇನ್ನೂ ಹೊಸಬರು ಹಾಗೂ ಅವರಿನ್ನೂ ಹೆಚ್ಚು ಕಲಿಯಬೇಕಾಗಿದೆ ಎಂದು ಹೇಳಿದ್ದರು. ಹಾಗಾದರೆ, ನೀವೇನು ತಾಯಿಯ ಗರ್ಭದಿಂದಲೇ ಕಲಿತುಕೊಂಡು ಬಂದಿದ್ದೀರಾ? ಈ ರೀತಿ ನೀವು ಹೇಳಬಾರದು. ಅವರು ನಮ್ಮ ನಾಯಕ. ನಮಗೆ ತುಬಾ ಹೆಮ್ಮೆ ಇದೆ," ಎಂದು ಯೋಗರಾಜ್‌ ಸಿಂಗ್‌ ತಿಳಿಸಿದ್ದಾರೆ.

ಮೊಹಮ್ಮದ್‌ ಸಿರಾಜ್‌ಗೆ ಯೋಗರಾಜ್‌ ಸಿಂಗ್‌ ಮೆಚ್ಚುಗೆ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸ್ಟಾರ್‌ಗಳ ಪೈಕಿ ಮೊಹಮ್ಮದ್‌ ಸಿರಾಜ್‌ ಕೂಡ ಒಬ್ಬರು. 23 ವಿಕೆಟ್‌ಗಳ ಮೂಲಕ ಈ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಆಗಿದ್ದಾರೆ. ಇವರು ಓವಲ್‌ ಟೆಸ್ಟ್‌ನಲ್ಲಿ ಸಿರಾಜ್‌ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಿರಾಜ್‌ ಅವರ ಪ್ರದರ್ಶನವು ನನಗೆ ಕಪಿಲ್‌ ದೇವ್‌ ಅವರನ್ನು ನೆನಪಿಸಿದೆ. ಗಾಯದಿಂದ ಸರಣಿಯಿಂದ ಹೊರ ಬಿದ್ದರೂ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಯೋಗರಾಜ್‌ ಸಿಂಗ್‌ ಶ್ಲಾಘಿಸಿದ್ದಾರೆ.

IND vs ENG: ʻನನಗೋಸ್ಕರ ಅಲ್ಲ, ದೇಶಕ್ಕೋಸ್ಕರ ಬೌಲ್‌ ಮಾಡುತ್ತೇನೆʼ: ಮೊಹಮ್ಮದ್‌ ಸಿರಾಜ್‌!

"ನಮ್ಮ ಬೌಲರ್‌ಗಳು ತೋರಿದ ಪ್ರದರ್ಶನದ ಹಾದಿಯನ್ನು ನೋಡುವುದು ನಿಜಕ್ಕೂ ಅಸಾಧಾರಣವಾಗಿತ್ತು. ಮೊಹಮ್ಮದ್‌ ಸಿರಾಜ್‌ ಅವರ ಬೌಲಿಂಗ್‌ ನನಗೆ ಕಪಿಲ್‌ ದೇವ್‌ ಅವರನ್ನು ನೆನಪಿಸಿದೆ. ಶುಭಮನ್‌ ಗಿಲ್‌ ಮೊದಲನೇ ಬಾರಿ ನಾಯಕತ್ವ ವಹಿಸಿದರೂ ಅವರ ನಾಯಕತ್ವ ಪರಿಪಕ್ಷತೆಯಿಂದ ಕೂಡಿದೆ," ಎಂದು ಯುವರಾಜ್‌ ಸಿಂಗ್‌ ಗುಣಗಾನ ಮಾಡಿದ್ದಾರೆ.

"ತಂಡದ ಪ್ರತಿಯೊಬ್ಬ ಆಟಗಾರನೂ ಗಾಯಗೊಂಡಿದ್ದರೂ ದೃಢವಾಗಿ ನಿಂತು ಆಡಿದ್ದಾರೆ. ಪಂತ್ ಕೂಡ ಗಾಯದ ಹೊರತಾಗಿಯೂ ಆಡಿದರು. ಇದು ಕೇವಲ ಪಂದ್ಯವಲ್ಲ, ಯುದ್ಧದಲ್ಲಿ ಸಿಕ್ಕ ಗೆಲುವು," ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.