ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗದೇ ಇರಲು ಕಾರಣ ತಿಳಿಸಿದ ದೀಪ್ ದಾಸ್‌ಗುಪ್ತಾ!
ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಕುಲ್ದೀಪ್ ಯಾದವ್ ಒಂದೇ ಒಂದು ಪಂದ್ಯದಲ್ಲಿಯೂ ಆಡದೇ ಇರಲು ಕಾರಣವೇನೆಂದು ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ಬಹಿರಂಗಪಡಿಸಿದ್ದಾರೆ. ಈ ಸರಣಿಯಲ್ಲಿ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲ ಸಾಧಿಸಿತ್ತು.

ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗದ ಬಗ್ಗೆ ದೀಪ್ ದಾಸ್‌ಗುಪ್ತಾ ಹೇಳಿಕೆ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ (IND vs ENG) ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು 2-2 ಅಂತರದಲ್ಲಿ ಸಮಬಲವಾಗಿದೆ. ಈ ಸರಣಿಯ ಭಾರತ ತಂಡದ ಭಾಗವಾಗಿದ್ದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಅವರು, ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಅಂದ ಹಾಗೆ ಭಾರತ ತಂಡದ ಮಾಜಿ ಆಟಗಾರ ದೀಪ್ ದಾಸ್‌ಗುಪ್ತಾ (Deep Dasgupta) ಅವರು, ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗದೆ ಇರಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.
ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ನಿಯಮಿತವಾಗಿ 350ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಕುಲ್ದೀಪ್ ಯಾದವ್‌ಗೆ ಪ್ಲೇಯಂಗ್ XIನಲ್ಲಿ ಏಕೆ ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ತಮ್ಮ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ವಿವರಿಸಿದ್ದಾರೆ ಹಾಗೂ ಸರಣಿಯ ವೇಳೆ ಈ ಬಗ್ಗೆ ಹೆಟ್ ಕೋಚ್ ಗೌತಮ್ ಗಂಭೀರ್ ಹೇಳಿದ್ದ ಮಾತನ್ನು ಇದೀಗ ದಾಸ್‌ಗುಪ್ತಾ ರಿವೀಲ್ ಮಾಡಿದ್ದಾರೆ.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಎದುರಾಗಿದ್ದ ಸಮಸ್ಯೆ ಏನೆಂದರೆ, ಆತಿಥೇಯರು ತ್ವರಿತವಾಗಿ ರನ್ ಗಳಿಸುತ್ತಿದ್ದರು. ಹಾಗಾಗಿ ಭಾರತ ತಂಡ 350 ರಿಂದ 400 ರನ್‌ಗಳನ್ನು ಗಳಿಸಿ ಪಂದ್ಯದಲ್ಲಿ ಉಳಿಯಬೇಕಾದ ಅಗತ್ಯವಿತ್ತು. ಈ ಕಾರಣದಿಂದಲೇ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಕ್ಕಿರಲಿಲ್ಲ ಎಂದಿದ್ದಾರೆ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಿದ್ದರು. ಆದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಮತ್ತೊಂದು ಕಡೆಗೆ ಕರುಣ್ ನಾಯರ್ ಹಾಗೂ ಸಾಯಿ ಸುದರ್ಶನ್ ವಿಫಲರಾಗಿದ್ದರು. ಈ ಕಾರಣದಿಂದಲೇ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ಸಿಕ್ಕಿರಲಿಲ್ಲ.
While I didn't agree with all the tactical calls, talking to Gautam made me understand where the team was coming from. pic.twitter.com/rG0lbcp5J5
— Deep Dasgupta (@DeepDasgupta7) August 7, 2025
ಕುಲ್ದೀಪ್‌ಗೆ ಅವಕಾಶ ನೀಡದೇ ಇರಲು ಕಾರಣ
"ತಾಂತ್ರಿಕವಾಗಿ ನಾನು ಗಂಭೀರ್ ಅವರ ಹಲವಾರು ವಿಷಯಗಳನ್ನು ಒಪ್ಪಲಿಲ್ಲ. ಈ ಸರಣಿಯಲ್ಲಿ ಭಾರತ ತಂಡ 8 ಗಂಟೆಯವರೆಗೆ ಬ್ಯಾಟಿಂಗ್ ನಡೆಸಿತ್ತು. ನಾನು, ಗಂಭೀರ್ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಜೊತೆ ದೀರ್ಘ ಮಾತುಕತೆ ನಡೆಸಿದೆ. ಬೆನ್ ಸ್ಟೋಕ್ಸ್ ತಂಡವು ದೊಡ್ಡ ಗುರಿಗಳನ್ನು ಬೆನ್ನಟ್ಟಲು ಹೆಸರುವಾಸಿಯಾಗಿರುವುದರಿಂದ ಇಂಗ್ಲೆಂಡ್ ವಿರುದ್ಧ ಅವರಿಗೆ ದೀರ್ಘ ಬ್ಯಾಟಿಂಗ್ ಲೈನ್ ಅಪ್ ಅಗತ್ಯವಿದೆ ಎಂದು ಅವರು ನನಗೆ ವಿವರಿಸಿದ್ದರು. ಹೌದು, ಅವರಿಗೆ ಗೆಲ್ಲಲು 20 ವಿಕೆಟ್‌ಗಳು ಬೇಕಾಗಿದ್ದವು. ಆದರೆ ಪಂದ್ಯದಲ್ಲಿ ಉಳಿಯಲು ಭಾರತಕ್ಕೆ 350-400 ರನ್‌ಗಳು ಬೇಕಾಗಿದ್ದವು," ಎಂದು ದಾಸ್‌ಗುಪ್ತಾ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
"ಒಂದು ವೇಳೆ ಕರುಣ್ ಕಾರಣ ಅಥವಾ ಸಾಯಿ ಸುದರ್ಶನ್ ಅಥವಾ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮೊದಲನೇ ಟೆಸ್ಟ್ ಪಂದ್ಯದಲ್ಲಿ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿದ್ದರೆ, ಆಗ ಕುಲ್ದೀಪ್ ಯಾದವ್ ಅವರನ್ನು ಹೆಚ್ಚುವರಿ ಸ್ಪಿನ್ನರ್ ಆಗಿ ಆಡಿಸಲಾಗಿತ್ತು. ಇದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ," ಎಂದು ದಾಸ್‌ಗುಪ್ತಾ ತಿಳಿಸಿದ್ದಾರೆ.