ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs UAE: ʻಏಷ್ಯಾ ಕಪ್‌ ಟೂರ್ನಿಗೆ ಭಾರತ ಎ ತಂಡವನ್ನು ಸೇರಿಸಿʼ-ಆರ್‌ ಅಶ್ವಿನ್‌ ಕಿಡಿ!

ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯ ಗುಣಮಟ್ಟದ ಬಗ್ಗೆ ಭಾರತದ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಕಿಡಿಕಾರಿದ್ದಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, ಏಷ್ಯಾ ಕಪ್‌ ಟೂರ್ನಿಯಲ್ಲಿನ ಸ್ಪರ್ಧೆಯು ಹೀನಾಯವಾಗಿದೆ ಎಂದು ದೂರಿದ್ದಾರೆ.

ಏಷ್ಯಾ ಕಪ್‌ ಟೂರ್ನಿಯ ಗುಣಮಟ್ಟವನ್ನು ಪ್ರಶ್ನೆ ಮಾಡಿದ ಆರ್‌ ಅಶ್ವಿನ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿನ ಸ್ಪರ್ಧೆಯ ಕೊರತೆಯಿದೆ ಎಂದು ಭಾರತೀಯ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (RaviChandran Ashwin) ಕಿಡಿಕಾರಿದ್ದಾರೆ. ಭಾರತ ಹಾಗೂ ಯುಎಇ (IND vs UAE) ವಿರುದ್ಧದ ಏಷ್ಯಾ ಕಪ್‌ ಟೂರ್ನಿಯ ಆರಂಭಿಕ ಪಂದ್ಯದ ನಿಮಿತ್ತ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆರ್‌ ಅಶ್ವಿನ್‌, ಈ 20 ಓವರ್‌ಗಳ ಟೂರ್ನಿಯಲ್ಲಿನ ಭಾರತ ಎ ತಂಡವನ್ನು ಕೂಡ ಆಡಿಸಬಹುದು ಎಂದು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಈ ಟೂರ್ನಿಯಲ್ಲಿನ ಗುಣಮಟ್ಟ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಯುಎಇ ನಡುವಣ ಪಂದ್ಯದ ನಿಮಿತ್ತ ಮಾತನಾಡಿದ ಆರ್‌ ಅಶ್ವಿನ್‌, ಏಷ್ಯಾ ಕಪ್‌ ಟೂರ್ನಿಯ ಗುಣಮಟ್ಟವನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ 20 ಓವರ್‌ಗಳ ಈ ಟೂರ್ನಿಯಲ್ಲಿ ಆಡುವ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ತಯಾರಿ ನಡೆಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ.

"ಈ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನೂ ಕೂಡ ಸೇರಿಸುವ ಮೂಲಕ ಆಫ್ರೋ-ಏಷ್ಯಾ ಕಪ್‌ ಟೂರ್ನಿ ಎಂದು ಹೆಸರನ್ನು ಬದಲಿಸಬಹುದು. ಈ ಟೂರ್ನಿಯ ಸ್ಪರ್ಧೆಯನ್ನು ನೋಡಿದರೆ, ಭಾರತ ಎ ತಂಡವನ್ನು ಕೂಡ ಸೇರಿಸಬಹುದು. ನಾವು ಇನ್ನೂ ಬಾಂಗ್ಲಾದೇಶ ತಂಡದ ಬಗ್ಗೆಯೂ ಮಾತನಾಡಿಲ್ಲ. ಏಕೆಂದರೆ ಅವರ ಬಗ್ಗೆ ಹೆಚ್ಚಾಗಿ ಮಾತನಾಡುವ ಅಗತ್ಯವಿಲ್ಲ. ಈ ರೀತಿಯ ತಂಡಗಳು ಭಾರತದ ವಿರುದ್ಧ ಯಾವ ರೀತಿಯ ಸ್ಪರ್ಧೆಯನ್ನು ನೀಡಬಹುದು?, ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಕೆ ಶ್ರೀಕಾಂತ್‌!

ಸೆಪ್ಟಂಬರ್‌ 9 ರಂದು 2025ರ ಏಷ್ಯಾ ಕಪ್‌ ಟೂರ್ನಿ ಆರಂಭವಾಗಿದೆ. ಮಂಗಳವಾರ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಹಾಂಕಾಂಗ್‌ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ರಶೀದ್‌ ಖಾನ್‌ ನಾಯಕತ್ವದ ಅಫ್ಘಾನಿಸ್ತಾನ ತಂಡ 94 ರನ್‌ಗಳ ಅಂತರದಲ್ಲಿ ಗೆಲುವು ಪಡೆಯಿತು. ಆದರೆ, ಹಾಂಕಾಂಗ್‌ ತಂಡ ಕನಿಷ್ಠ 100 ರನ್‌ಗಳನ್ನು ದಾಖಲಿಸಲು ಕೂಡ ಸಾಧ್ಯವಾಗಲಿಲ್ಲ.

ಆಫ್ಘನ್‌ ನೀಡಿದ್ದ 189 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಹಾಂಕಾಂಗ್‌ ತಂಡ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 94 ರನ್‌ಗಳಿಗೆ ಸೀಮಿತವಾಯಿತು. ಸ್ಪೋಟಕ ಅರ್ಧಶತಕ ಹಾಗೂ ಒಂದು ವಿಕೆಟ್‌ ಪರ ಅಝಮತ್‌ವುಲ್ಹಾ ಒಮರ್ಜಾಯ್‌ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಏಷ್ಯಾ ಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಶುಭಾರಂಭ ಕಂಡ ಹೊರತಾಗಿಯೂ ಆರ್‌ ಅಶ್ವಿನ್‌, ರಶೀದ್‌ ಖಾನ್‌ ತಂಡಕ್ಕೆ ಭಾರತ ವಿರುದ್ಧದ ಪಂದ್ಯವಿಲ್ಲ ಎಂದು ಹೇಳಿದ್ದಾರೆ.

IND vs UAE: ಏಷ್ಯಾ ಕಪ್‌ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

"ಇದು 2026ರ ಟಿ20 ವಿಶ್ವಕಪ್‌ಗೆ ಮುಹೂರ್ತವಲ್ಲ, ಇದು ಕೇವಲ ಒಂದು ಪರದೆ. ಇದು ಅಷ್ಟೊಂದು ದೊಡ್ಡ ಟೂರ್ನಿಯಲ್ಲ ಎಂದು ನನಗೆ ಕಾಣುತ್ತಿದೆ. ಭಾರತ ತಂಡಕ್ಕೆ ಅಫ್ಘಾನಿಸ್ತಾನ ಬೌಲರ್‌ಗಳಿಂದ ಭೀತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತ ತಂಡ ಉತ್ತಮವಾಗಿ ಬ್ಯಾಟ್‌ ಮಾಡಿದರೆ, 170ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಬಹುದು. ಇದನ್ನು ಆಫ್ಘನ್‌ ತಂಡ ಚೇಸ್‌ ಮಾಡಬಹುದಾ? ಇದು ಸಾಧ್ಯವೇ ಇಲ್ಲ," ಎಂದು ಅಶ್ವಿನ್‌ ತಿಳಿಸಿದ್ದಾರೆ.

"ಭಾರತ ತಂಡವನ್ನು ಸೋಲಿಸಲು ಏಕೈಕ ಮಾರ್ಗವಂದರೆ, 155 ರನ್‌ಗಳಿಗೆ ಕಟ್ಟಿ ಹಾಕುವುದು ಹಾಗೂ ಇದನ್ನೂ ಚೇಸ್‌ ಮಾಡಬಹುದು. ಸಾಮಾನ್ಯವಾಗಿ ಟಿ20 ಕ್ರಿಕೆಟ್‌ ರೋಚಕತೆಯಿಂದ ಕೂಡಿರುತ್ತದೆ. ಆದರೆ, ಭಾರತ ತಂಡ ಈ ಏಷ್ಯಾ ಕಪ್‌ ಟೂರ್ನಿಯಲ್ಲಿ ಏಕೈಕ ಮಾರ್ಗದಲ್ಲಿ ಗೆಲವು ಪಡೆಯಲಿದೆ," ಎಂದು ಸ್ಪಿನ್‌ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.