ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌!

ಮುಂಬರುವ 2025ರ ಏಷ್ಯಾಕಪ್‌ ಟೂರ್ನಿಗೆ ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಇದರ ನಡುವೆ ಶುಭಮನ್‌ ಗಿಲ್‌ ಮರಳಿರುವ ಕಾರಣ, ಸಂಜು ಸ್ಯಾಮ್ಸನ್‌ಗೆ ಸ್ಥಾನ ಸಿಗುವುದು ಕಷ್ಟಕರ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಭಾರತದ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದೆ.

ಭಾರತದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌.

ದುಬೈ: ಸೆಪ್ಟೆಂಬರ್‌ 9 ರಂದು ಆರಂಭವಾಗಲಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿದೆ. 15 ಸದಸ್ಯರನ್ನೊಳಗೊಂಡ ಈ ತಂಡದಲ್ಲಿ ಸ್ಟಾರ್‌ ಆಟಗಾರರ ಗುಂಪೇ ಇದೆ. ಹೀಗಾಗಿ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ಗೆ ಭಾರತದ ಪ್ಲೇಯಿಂಗ್‌ ಇಲೆವೆನ್‌ (India's Playing XI) ಆಯ್ಕೆಯು ಕಷ್ಟವಾಗಬಹುದು. ಏಕೆಂದರೆ ತಂಡದಲ್ಲಿ ಮೂರು ಜನ ಆರಂಭಿಕ ಬ್ಯಾಟ್ಸ್‌ಮನ್‌ಗಳಿದ್ದಾರೆ ಮತ್ತು ನಾಲ್ಕು ಜನ ಆಲ್‌ರೌಡರ್‌ಗಳಿದ್ದಾರೆ. ಇವರಲ್ಲಿ ಯಾರಿಗೆ ಸ್ಥಾನ ನೀಡಿದರೆ ಪ್ಲೇಯಿಂಗ್‌ ಇಲೆವೆನ್‌ ಬಲಿಷ್ಠವಾಗಲಿದೆ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಇದರ ನಡುವೆ ಕ್ರಿಕೆಟ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar), ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ ಅನ್ನು ಪ್ರಕಟಿಸಿದ್ದಾರೆ.

ಭಾರತ ಟೆಸ್ಟ್‌ ತಂಡದ ನಾಯಕನಾಗಿ ಶುಭ್‌ಮನ್‌ ಗಿಲ್‌ ಅವರ ಮರಳುವಿಕೆಯಿಂದ ಕೆಲವು ಗೊಂದಲಗಳು ಸೃಷ್ಟಿಯಾಗಿವೆ. ಇತ್ತೀಚಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಆರಂಭಿಕರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಈ ಜೋಡಿಯನ್ನು ಕಣಕ್ಕಿಳಿಸಿಲು ಮ್ಯಾನೇಜ್‌ಮೆಂಟ್‌ ಮುಂದೆ ಗಿಲ್‌ ಆಯ್ಕೆ ಇದೆ ಇದರಿಂದಾಗಿ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎನ್ನುತ್ತಿರುವಾಗಲೇ ಸುನೀಲ್‌ ಗವಾಸ್ಕರ್‌, ತಂಡದಲ್ಲಿ ಸಂಜು ಸ್ಯಾಮ್ಸನ್‌ ಆಡಲೇಬೇಕು ಎಂದು ಆಗ್ರಹಿಸಿದ್ದಾರೆ.

Asia Cup 2025: ಶುಭಮನ್‌ ಗಿಲ್‌ ಆಗಮನದಿಂದ ಸೂರ್ಯಕುಮಾರ್‌ ಯಾದವ್‌ಗೆ ಆತಂಕ! ಏಕೆ ಗೊತ್ತೆ?

ಸಂಜು ಸ್ಯಾಮ್ಸನ್‌ ಪರ ಬ್ಯಾಟ್‌ ಬೀಸಿದ ಗವಾಸ್ಕರ್‌

ಸ್ಪೋರ್ಟ್ಸ್‌ ಟುಡೇ ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ ಗವಾಸ್ಕರ್‌, "ಸಂಜು ಸ್ಯಾಮ್ಸನ್‌ ಇನ್ನೂ ತಂಡದಲ್ಲಿ ಬ್ಯಾಟಿಂಗ್ ನಡೆಸುವ ವ್ಯಕ್ತಿಯಾಗಿರಬಹುದು. ಅವರು 5 ಅಥವಾ 6 ರಲ್ಲಿ ಬ್ಯಾಟಿಂಗ್ ನಡೆಸಬಹುದು. ಅವರನ್ನು ಹೊರಗಿಡಬಾರದು, ಮಧ್ಯಮ ಕ್ರಮಾಂಕದಲ್ಲಿ ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆಗಿ ಆಡಬಹುದು. ಸಂಜು ತುಂಬಾ ಪ್ರತಿಭಾನ್ವಿತ ಆಟಗಾರ ಹಾಗೂ ಮಧ್ಯಮ ಕ್ರಮಾಂಕಕ್ಕೆ ಹೊಂದಿಕೊಳ್ಳಬಲ್ಲರು," ಎಂದು ಸುನೀಲ್‌ ಗವಾಸ್ಕರ್ ತಿಳಿಸಿದ್ದಾರೆ.

"ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಒಗ್ಗಿಕೊಂಡಿರುತ್ತಾರೆ, ನಾವು ಅವರ ಬಗ್ಗೆ ಹೆಚ್ಚು ಚಿಂತಿಸಬಾರದು, ಅವರು ಕ್ಲಾಸ್ ಬ್ಯಾಟರ್‌. ನಿಮ್ಮ ಮೊದಲ ಆಯ್ಕೆಯ XI ಮತ್ತು ನಿಮ್ಮ ಬ್ಯಾಟಿಂಗ್ ಕ್ರಮಾಂಕವು ಪಿಚ್ ಹೇಗಿರುತ್ತದೆ, ಎದುರಾಳಿ ತಂಡ ಯಾರದ್ದು, ಅವರ ಬೌಲಿಂಗ್ ದಾಳಿ ಹೇಗಿರುತ್ತದೆ ಎಂಬಂತಹ ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ. ಅಭಿಷೇಕ್ ಮತ್ತು ಶುಭಮನ್ ಗಿಲ್ ಪಂಜಾಬ್‌ನ ಇಬ್ಬರು ಹುಡುಗರು ಒಟ್ಟಿಗೆ ಇನಿಂಗ್ಸ್‌ ಆರಂಭಿಸಲಿದ್ದಾರೆ. 3 ಮತ್ತು 4 ಕ್ರಮಾಂಕಗಳಲ್ಲಿ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಆಡಬಹುದು. ನೀವು ಹಾರ್ದಿಕ್ ಪಾಂಡ್ಯ ಅವರನ್ನು ಸ್ವಲ್ಪ ಮುಂದಕ್ಕೆ ಹಾಕಬೇಕು ಅಥವಾ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಲು ಹೋಗಬೇಕು, ಅಕ್ಷರ್ ಪಟೇಲ್ ಅವರಂತೆ ಯಾರಾದರೂ ಬ್ಯಾಟಿಂಗ್ ನಡೆಸಲು ಬರಬಹುದು, ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅವರು ಎಷ್ಟು ಚೆನ್ನಾಗಿ ಬ್ಯಾಟಿಂಗ್ ನಡೆಸಿದ್ದರು. ಆ ಮಾರ್ಗವನ್ನು ಅನುಸರಿಸಬೇಕು," ಎಂದು ಸುನೀಲ್‌ ಗವಾಸ್ಕರ್ ಸಲಹೆ ನೀಡಿದ್ದಾರೆ.

Asia Cup: ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಮದನ್‌ ಲಾಲ್‌!

ಇನ್ನು ಬೌಲಿಂಗ್‌ ವಿಭಾಗದ ಕುರಿತು ಮಾತನಾಡಿ, "ನಾನು ಅರ್ಷದೀಪ್ ಮತ್ತು ಬುಮ್ರಾ ಅವರೊಂದಿಗೆ ಬೌಲಿಂಗ್ ಅನ್ನು ಪ್ರಾರಂಭಿಸುತ್ತೇನೆ, ಅಕ್ಷರ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಆಲ್‌ರೌಂಡರ್‌ಗಳಾಗಿ ಆಯ್ಕೆ ಮಾಡುತ್ತೇನೆ, ನಂತರ ಕುಲ್‌ದೀಪ್ ಮತ್ತು ವರುಣ್ ಚಕ್ರವರ್ತಿ. ದುಬೆ, ಜಿತೇಶ್, ಹರ್ಷಿತ್ ಮತ್ತು ರಿಂಕು ಸಿಂಗ್‌ ಆಡಲಿದ್ದಾರೆ," ಎಂದು ಹೇಳಿದ್ದಾರೆ.

ಸುನೀಲ್‌ ಗವಾಸ್ಕರ್‌ ಆಯ್ಕೆಯ ಭಾರತದ ಪ್ಲೇಯಿಂಗ್‌ XI

ಅಭಿಷೇಕ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ಶುಭ್‌ಮನ್‌ ಗಿಲ್‌ (ಉಪ ನಾಯಕ) ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌ (ವಿ,ಕೀ) ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಅರ್ಷದೀಪ್‌ ಸಿಂಗ್‌