ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್‌ಸಿಬಿಗೆ ಐಪಿಎಲ್‌ ಕಪ್‌ ಗೆದ್ದುಕೊಟ್ಟ ಬಳಿಕ ದೊಡ್ಡ ನಿರ್ಧಾರ ತೆಗೆದುಕೊಂಡ ಜಿತೇಶ್‌ ಶರ್ಮಾ!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಚೊಚ್ಚಲ ಕಪ್‌ ಗೆದ್ದುಕೊಟ್ಟ ಬಳಿಕ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು 2025-26ರ ದೇಶಿ ಆವೃತ್ತಿಯಲ್ಲಿ ವಿದರ್ಭ ತಂಡವನ್ನು ತೊರೆದು ಬರೋಡ ಸೇರಲು ನಿರ್ಧರಿಸಿದ್ದಾರೆ.

ವಿದರ್ಭ ತಂಡವನ್ನು ತೊರೆದು ಬರೋಡಗೆ ಆಡಲಿರುವ ಜಿತೇಶ್‌ ಶರ್ಮಾ.

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೊಚ್ಚಲ ಕಪ್‌ ಗೆದ್ದುಕೊಟ್ಟ ಬಳಿಕ ಸ್ಟಾರ್‌ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ (Jitesh Sharma) ಅವರು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ಜಿತೇಶ್‌ ಶರ್ಮಾ, ಮುಂದಿನ 2025-26ರ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ತಂಡವನ್ನು ಬದಲಾವಣೆ ಮಾಡುತ್ತಿದ್ದಾರೆ. ಆ ಮೂಲಕ ಇದೀಗ ಅವರು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಪುನಃ ಸ್ಥಾನವನ್ನು ಪಡೆಯುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ವರದಿಯ ಪ್ರಕಾರ, 2025-26ರ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡವನ್ನು ತೊರೆದು ಬರೋಡ ತಂಡದ ಪರ ಆಡಲಿದ್ದಾರೆಂದು ತಿಳಿದು ಬಂದಿದೆ. ಆರ್‌ಸಿಬಿ ಸಹ ಆಟಗಾರ ಕೃಣಾಲ್‌ ಪಾಂಡ್ಯ ಅವರ ನಾಯಕತ್ವದ ಬರೋಡ ತಂಡದಲ್ಲಿ ಆಡಲು ಜಿತೇಶ್‌ ಶರ್ಮಾ ಈ ಬಾರಿ ರಣಜಿ ಟ್ರೋಫಿ ಸೇರಿದಂತೆ ವೈಟ್‌ ಬಾಲ್‌ ಟೂರ್ನಿಗಳನ್ನು ಆಡಲಿದ್ದಾರೆ. ಕೃಣಾಲ್‌ ಪಾಂಡ್ಯ ಸಹೋದರ ಹಾರ್ದಿಕ್‌ ಪಾಂಡ್ಯ ಕೂಡ ಬರೋಡ ತಂಡದಲ್ಲಿ ಆಡಲಿದ್ದಾರೆ.

IPL 2025: ಸಿಎಸ್‌ಕೆಯನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ಫ್ರಾಚೈಸಿ ಎನಿಸಿಕೊಂಡ ಆರ್‌ಸಿಬಿ!

2024-25ರ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ಕೃಣಾಲ್‌ ಪಾಂಡ್ಯ ಅವರು ವಿದರ್ಭ ತಂಡದ ಪರ ರಣಜಿ ಟ್ರೋಫಿ ಚಾಂಪಿಯನ್‌ ಆಗಿದ್ದರು ಹಾಗೂ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದರು. ಆದರೆ, ರಣಜಿ ಟ್ರೋಫಿ ಗೆದ್ದ ವಿದರ್ಭ ತಂಡದ ಪರ ಜಿತೇಶ್‌ ಶರ್ಮಾ ಒಂದೇ ಒಂದು ಪಂದ್ಯವನ್ನು ಕೂಡ ಆಡಿರಲಿಲ್ಲ. ಏಕೆದರೆ ವಿದರ್ಭ ನಾಯಕ ಅಕ್ಷಯ್‌ ವಾಡ್ಕರ್‌ ಕೂಡ ವಿಕೆಟ್‌ ಕೀಪರ್‌ ಆಗಿದ್ದರು ಹಾಗೂ ಅವರು ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದರು.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡವನ್ನು ಜಿತೇಶ್‌ ಮುನ್ನಡೆಸಿದ್ದರು ಹಾಗೂ ಈ ತಂಡವನ್ನು ಕ್ವಾರ್ಟರ್‌ಫೈನಲ್‌ಗೆ ಕರೆದುಕೊಂಡು ಹೋಗಿದ್ದರು. ಲಿಸ್ಟ್‌ ಎ ತಂಡದಲ್ಲಿಯೂ ಜಿತೇಶ್‌ ಶರ್ಮಾ ಕೀ ಆಟಗಾರನಾಗಿದ್ದು, ಈ ತಂಡವನ್ನು ಕೃಣಾಲ್‌ ಪಂಡ್ಯ ಜೊತೆ ಫೈನಲ್‌ಗೇರಿಸಿದ್ದರು.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

2024ರ ಜನವರಿಯಿಂದ ರೆಡ್‌ ಬಾಲ್‌ ಕ್ರಿಕೆಟ್‌ ಆಡದಿರುವ ಜಿತೇಶ್‌ ಶರ್ಮಾಗೆ ಬರೋಡಾಗೆ ಸ್ಥಳಾಂತರವು ದೀರ್ಘಾವಧಿ ಕ್ರಿಕೆಟ್ ಆಡಲು ನೆರವು ನೀಡುತ್ತದೆ. ಒಟ್ಟಾರೆಯಾಗಿ, ಅವರು ತಮ್ಮ ವೃತ್ತಿಜೀವನದಲ್ಲಿ 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 24.48 ರ ಸರಾಸರಿಯಲ್ಲಿ 661 ರನ್ ಗಳಿಸಿದ್ದಾರೆ.

2024 ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಪಂದ್ಯದ ಬಳಿಕ ಜಿತೇಶ್ ಶರ್ಮಾ ಭಾರತ ತಂಡದ ಪರ ಯಾವುದೇ ಪಂದ್ಯವನ್ನು ಆಡಿಲ್ಲ. ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳ ಭಾರತ ಟಿ20ಐ ತಂಡದಲ್ಲಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಇನ್ನು 2025ರ ಐಪಿಎಲ್‌ ಟೂರ್ನಿಯಲ್ಲಿ ಅವರು 149.28 ರ ಸ್ಟ್ರೈಕ್ ರೇಟ್‌ನೊಂದಿಗೆ 29.85 ರ ಸರಾಸರಿಯಲ್ಲಿ 418 ರನ್ ಗಳಿಸಿದ್ದಾರೆ.