ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಸಿಎಸ್‌ಕೆಯನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ಫ್ರಾಚೈಸಿ ಎನಿಸಿಕೊಂಡ ಆರ್‌ಸಿಬಿ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಚಾಂಪಿಯನ್‌ ಆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಎನಿಸಿಕೊಂಡಿದೆ. ಆರ್‌ಸಿಬಿ ಮೌಲ್ಯ 269 ದಶಲಕ್ಷ ಡಾಲರ್ ಆಗಿದೆ. ಮುಂಬೈ ಇಂಡಿಯನ್ಸ್ 242 ಮಿಲಿಯನ್ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅತ್ಯಂತ ಮೌಲ್ಯಯುತ ಫ್ರಾಂಚೈಸಿ!

ಆರ್‌ಸಿಬಿ ಅತ್ಯಂತ ಮೌಲ್ಯಯುತ ಫ್ರಾಂಚೈಸಿ.

Profile Ramesh Kote Jul 8, 2025 10:49 PM

ಮುಂಬೈ: ಹದಿನೇಳು ವರ್ಷಗಳ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೌಲ್ಯ 269 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆಂದು ಮಂಗಳವಾರ ವರದಿಯೊಂದು ತಿಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಡೆಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ತಂಡದ ಮೌಲ್ಯ ಶೇ 13.8 ರಷ್ಟು ಏರಿಕೆಯಾಗಿ 3.9 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ವರದಿ ಮಾಡಿದೆ.

ಐಪಿಎಲ್‌ನ ವ್ಯವಹಾರ ಮೌಲ್ಯ ಶೇ. 12.9 ರಷ್ಟು ಏರಿಕೆಯಾಗಿ 18.5 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವರದಿ ತಿಳಿಸಿದೆ. ಅಂಬಾನಿ ಕುಟುಂಬ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಮೌಲ್ಯ 242 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಎರಡನೇ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಾಗಿದೆ.

RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ!

ಮೂರನೇ ಸ್ಥಾನಕ್ಕೆ ಕುಸಿದ ಚೆನ್ನೈ ಸೂಪರ್ ಕಿಂಗ್ಸ್

ಇಂಡಿಯಾ ಸಿಮೆಂಟ್ಸ್‌ನ ಎನ್ ಶ್ರೀನಿವಾಸನ್ ಒಡೆತನದ ಸಿಎಸ್‌ಕೆ, ಒಂದು ವರ್ಷದ ಹಿಂದೆ ಅಗ್ರ ಸ್ಥಾನದಿಂದ 2025ರಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಫ್ರಾಂಚೈಸಿಯ ಬ್ರಾಂಡ್ ಮೌಲ್ಯ 235 ಡಾಲರ್‌ ಮಿಲಿಯನ್. ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ 227 ಡಾಲರ್‌ ಮಿಲಿಯನ್‌ನೊಂದಿಗೆ ಬ್ರ್ಯಾಂಡ್ ಮೌಲ್ಯದ ವಿಷಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 154 ಡಾಲರ್‌ ಮಿಲಿಯನ್ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದೆ.

ಪಂಜಾಬ್ ಕಿಂಗ್ಸ್ ತಂಡವು 2025ರಲ್ಲಿ ಶೇ. 39.6 ರಷ್ಟು ಅತ್ಯಧಿಕ ಬೆಳವಣಿಗೆ ಸಾಧಿಸಿತು. ಫ್ರಾಂಚೈಸಿ 141 ಡಾಲರ್‌ ಮಿಲಿಯನ್ ಮೌಲ್ಯದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ತಂಡವು 2025ರ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತ್ತು.

RCB vs PBKS: ಆರ್‌ಸಿಬಿ ಐಪಿಎಲ್‌ ಕಪ್ ಗೆಲ್ಲೋದು ಪಕ್ಕಾ ಎಂದ ವೀರೇಂದ್ರ ಸೆಹ್ವಾಗ್‌!

ಹೂಡಿಕೆ ಬ್ಯಾಂಕಿನ ಹಣಕಾಸು ಮತ್ತು ಮೌಲ್ಯಮಾಪನ ಸಲಹಾ ನಿರ್ದೇಶಕ ಹರ್ಷ್ ತಾಳಿಕೋಟಿ, ಫ್ರಾಂಚೈಸಿ ಮೌಲ್ಯಮಾಪನಗಳು ಗಗನಕ್ಕೇರಿವೆ, ಮಾಧ್ಯಮ ಹಕ್ಕುಗಳ ಒಪ್ಪಂದಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ ಮತ್ತು ಬ್ರ್ಯಾಂಡ್ ಪಾಲುದಾರಿಕೆಗಳು ವೈವಿಧ್ಯಮಯವಾಗಿವೆ ಮತ್ತು ಭೌಗೋಳಿಕವಾಗಿ ಹರಡಿವೆ ಎಂದು ಹೇಳಿದ್ದಾರೆ. ಟಾಟಾ ಗ್ರೂಪ್ 300 ಡಾಲರ್‌ ಮಿಲಿಯನ್ ಮೌಲ್ಯದ ಐದು ವರ್ಷಗಳ ಲಾಭದಾಯಕ ಒಪ್ಪಂದದಲ್ಲಿ 2028 ರವರೆಗೆ ತನ್ನ ಶೀರ್ಷಿಕೆ ಪ್ರಾಯೋಜಕತ್ವದ ಬದ್ಧತೆಯನ್ನು ವಿಸ್ತರಿಸಿದೆ ಮತ್ತು ಮೈ11 ಸರ್ಕಲ್‌, ಏಂಜೆಲ್‌ ಒನ್‌, ರುಪೇ ಮತ್ತು ಸಿಯೆಟ್‌ಗೆ ನಾಲ್ಕು ಅಸೋಸಿಯೇಟ್ ಪ್ರಾಯೋಜಕತ್ವಗಳು ಶೇ. 25 ರಷ್ಟು ಹೆಚ್ಚಾಗಿ 1,485 ಕೋಟಿ ರೂ.ಗೆ ತಲುಪಿವೆ ಎಂದು ವರದಿ ತಿಳಿಸಿದೆ.