ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (IND vs AUS) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಅಕ್ಟೋಬರ್ 19 ರಂದು ಆರಂಭವಾಗಲಿದೆ. ಈ ಸರಣಿಯ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ (Virat Kohli) ಅವರು ದೀರ್ಘಾವಧಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಮೊದಲನೇ ಏಕದಿನ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (Michael Clarke) ಅವರು, ಮುಂಬರುವ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಬಲ್ಲ ಬ್ಯಾಟ್ಸ್‌ಮನ್ ಅನ್ನು ಆರಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ಸರಣಿಯಲ್ಲಿ ಲೀಡಿಂಗ್ ಸ್ಕೋರರ್ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಮೈಕಲ್ ಕ್ಲಾರ್ಕ್‌ಗೆ ಈ ಸರಣಿಯಲ್ಲಿ ಯಾರು ಅತಿ ಹೆಚ್ಚು ರನ್‌ಗಳಿಸಬಹುದು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕ್ಲಾರ್ಕ್, "ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರ ಪೈಕಿ ಒಬ್ಬರು ಅತಿ ಹೆಚ್ಚು ರನ್ ಗಳಿಸಬಹುದು. ಇದು ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಕೊನೆಯ ಆಸ್ಟ್ರೇಲಿಯಾ ಪ್ರವಾಸ, ಹಾಗಾಗಿ ಅವರು ಅತ್ಯುತ್ತಮ ಪ್ರದರ್ಶನದ ಮೂಲಕ ಇದನ್ನು ಮುಗಿಸಲು ಎದುರು ನೋಡುತ್ತಿದ್ದಾರೆ. ಓಪನಿಂಗ್ ಬ್ಯಾಟಿಂಗ್‌ಗಿಂತ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಸ್ವಲ್ಪ ಸುಲಭವಾಗಿದೆ. ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ, ಹಾಗಾಗಿ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಬಹುದು," ಎಂದು ಭವಿಷ್ಯ ನುಡಿದಿದ್ದಾರೆ.
IND vs AUS: ಮೊದಲ ಬ್ಯಾಚ್‌ನಲ್ಲಿ ಆಸೀಸ್‌ಗೆ ತೆರಳಿದ ಕೊಹ್ಲಿ, ರೋಹಿತ್, ರಾಹುಲ್
ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ 30 ಏಕದಿನ ಪಂದ್ಯಗಳಿಂದ 1328 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 53.12ರ ಸರಾಸರಿಯಲ್ಲಿ ಐದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಕೂಡ ಆಸೀಸ್ ನಾಡಿನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು 29 ಇನಿಂಗ್ಸ್‌ಗಳಿಂದ 51.03ರ ಸರಾಸರಿಯಲ್ಲಿ 1327 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಐದು ಶತಕಗಳು ಹಾಗೂ ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಈ ಇಬ್ಬರೂ ಇದೇ ಮೊದಲ ಬಾರಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ. ಈಗಾಗಲೇ ಈ ಇಬ್ಬರೂ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು.
IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಗೆಲ್ಲಲಿದೆ: ಮೈಕಲ್ ಕ್ಲಾರ್ಕ್
ಮೈಕಲ್ ಕ್ಲಾರ್ಕ್ ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದಾಗ್ಯೂ, ಭಾರತ ಬಲಿಷ್ಠ ತಂಡವು ಆಸೀಸ್ ತಂಡವನ್ನು ವಿನಮ್ರಗೊಳಿಸಬಹುದು ಎಂದು ವಿಶ್ವಕಪ್ ವಿಜೇತ ನಾಯಕ ಎಚ್ಚರಿಸಿದರು.
"ವಾಶ್ಔಟ್ ಆಗುತ್ತದೆಯೇ? ಮಳೆ ಬರದಿದ್ದರೆ, ನಾನು 2-1 ಅಂತರದಲ್ಲಿ ಆಸ್ಟ್ರೇಲಿಯಾ ಒಡಿಐ ಸರಣಿ ಗೆಲ್ಲಲಿದೆ ಎಂದು ಹೇಳುತ್ತೇನೆ. ಈ ಸರಣಿ ಹೆಚ್ಚಿನ ಪೈಪೋಟಿಯಿಂದ ಕೂಡಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ನಾನು 2-1 ಅಂತರದಲ್ಲಿ ಆಸೀಸ್ ಪರ ಆಡುತ್ತೇನೆ. ನಾನು ಅದರೊಂದಿಗೆ ಹೋಗುತ್ತೇನೆ. ಹೌದು, ನಾನು ಅದರೊಂದಿಗೆ ಮುಂದುವರಿಯುತ್ತೇನೆ, ಆದರೆ ನನಗೆ ಆತ್ಮವಿಶ್ವಾಸವಿಲ್ಲ. ಇದು 2-1 ಒನ್ ವೇ. ನಾನು ಆಸೀಸ್‌ಗೆ ಹೋಗುತ್ತಿದ್ದೇನೆ. ನಾನು ಕಷ್ಟಪಟ್ಟು ಹೋಗುತ್ತಿದ್ದೇನೆ," ಎಂದು ಭವಿಷ್ಯ ನುಡಿದಿದ್ದಾರೆ.