ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಟಿ20ಐ (AUS vs NZ) ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ನಿಯಮಿತ ನಾಯಕ ಮಿಚೆಲ್ ಸ್ಯಾಂಟ್ನರ್ (Mitchell Santner) ಅವರು ಆಸ್ಟ್ರೇಲಿಯಾ ಸರಣಿಯಿಂದ ಕೈ ಬಿಡಲಾಗಿದೆ. ಅಕ್ಟೋಬರ್ ಒಂದರಂದು ಮೌಂಟ್ ಮೌಂಗನುಯಿಯಲ್ಲಿ ಮೊದಲನೇ ಪಂದ್ಯದ ಮೂಲಕ ಟಿ20ಐ ಸರಣಿ ಆರಂಭವಾಗಲಿದೆ. ಮಿಚೆಲ್ ಸ್ಯಾಂಟ್ನರ್ ಅವರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಿಚೆಲ್ ಬ್ರೇಸ್‌ವೆಲ್ (Michael Bracewell) ಮುನ್ನಡೆಸಲಿದ್ದಾರೆ.
ಮೈಕಲ್ ಬ್ರೇಸ್‌ವೆಲ್ ಅವರು ಈ ಹಿಂದೆ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು. ಅವರು ಟಿ20ಐ ಸರಣಿಯಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿದ್ದಾರೆ. ಒಟ್ಟು 10 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಅವರು ಆರು ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ. ಇದರ ಆಧಾರದ ಮೇಲೆ ಮಿಚೆಲ್ ಸ್ಯಾಂಟ್ನರ್‌ಗೆ ಕಿವೀಸ್ ತಂಡದ ನಾಯಕತ್ವವನ್ನು ನೀಡಲಾಗಿದೆ.
Asia Cup 2025: ಬಾಂಗ್ಲಾ ವಿರುದ್ಧ ಸೋಲು; ಆಫ್ಘಾನ್ ಸೂಪರ್-4 ಲೆಕ್ಕಾಚಾರ ಹೇಗಿದೆ?
ಮಿಚೆಲ್ ಸ್ಯಾಂಟ್ನರ್ ಅವರನ್ನು ಕಳೆದುಕೊಂಡ ಬಗ್ಗೆ ಮಾತನಾಡಿದ ನ್ಯೂಜಿಲೆಂಡ್ ಕೋಚ್ ರಾಬ್ ವಾಲ್ಟರ್, "ನಿಮ್ಮ ನಾಯಕನನ್ನು ಕಳೆದುಕೊಳ್ಳುವುದು ಒಳ್ಳೆಯ ಸಂಗತಿಯಲ್ಲ. ಆದರೆ, ಈ ರೀತಿಯ ಸಂಗತಿಗಳು ನಡೆಯುತ್ತವೆ. ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ ಅನುಭವವನ್ನು ಮೈಕಲ್ ಬ್ರೇಸ್‌ವೆಲ್ ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಕಿವೀಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ದ ತಂಡವನ್ನು ಹೇಗೆ ಮುನ್ನಡೆಸಬೇಕೆಂಬುದರಲ್ಲಿ ವಿಶ್ವಾಸವನ್ನು ಹೊಂದಿದ್ದಾರೆ," ಎಂದು ತಿಳಿಸಿದ್ದಾರೆ.
Asia Cup 2025: ಭಾರತ ಸೂಪರ್-4ಗೆ ಎಂಟ್ರಿ; ಪಾಕ್ ಲೆಕ್ಕಾಚಾರ ಹೇಗಿದೆ?
ಈ ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಕೈಲ್ ಜೇಮಿಸನ್ ಹಾಗೂ ಬೆನ್ ಸೀರ್ಸ್ ಸೇರ್ಪಡೆಯಾಗಿದ್ದಾರೆ. ಜಿಂಬಾಬ್ವೆ ವಿರುದ್ದದ ಟಿ20ಐ ಸರಣಿಗೆ ಈ ಇಬ್ಬರೂ ಅಲಭ್ಯರಾಗಿದ್ದರು. ಕೈಲ್ ಜೇಮಿಸನ್ ಮೊದಲನೇ ಮಗುವಿನ ಜನನದ ಕಾರಣ ಜಿಂಬಾಬ್ವೆ ಸರಣಿಗೆ ಅಲಭ್ಯರಾಗಿದ್ದರು. ಆದರೆ, ಬೆನ್ ಸೀರ್ಸ್ ಅವರು ಗಾಯದ ಕಾರಣ ಅಲಭ್ಯರಾಗಿದ್ದರು. ಇದೀಗ ಕಿವೀಸ್ ವೇಗದ ಬೌಲಿಂಗ್ ವಿಭಾಗದಲ್ಲಿ ಮ್ಯಾಟ್ ಹೆನ್ರಿ ಮತ್ತು ಜಾಕೋಬ್ ಡಫಿ ಸೇರಿದಂತೆ ಬಲಿಷ್ಠ ವೇಗಿಗಳು ತಂಡದಲ್ಲಿದ್ದಾರೆ.
ಮಿಚೆಲ್ ಸ್ಯಾಂಟ್ನರ್ ಅವರ ಜೊತೆಗೆ ಫಿನ್ ಆಲೆನ್, ಲಾಕಿ ಫರ್ಗ್ಯೂಸನ್, ಆಡಮ್ ಮಿಲ್ನೆ, ವಿಲ್ ರೋರ್ಕಿ ಹಾಗೂ ಗ್ಲೆನ್ ಕೂಡ ಗಾಯ ಮತ್ತು ಅನಾರೋಗ್ಯದ ಕಾರಣ ತಂಡಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ ಅವರೇ ಸ್ವತಃ ತಂಡದಿಂದ ದೂರ ಉಳಿದಿದ್ದಾರೆ. ಈ ಕಾರಣದಿಂದಲೇ ಮೈಕಲ್ ಬ್ರೇಸ್‌ವೆಲ್‌ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೆ ನ್ಯೂಜಿಲೆಂಡ್ ತಂಡ: ಮೈಕಲ್ ಬ್ರೇಸ್‌ವೆಲ್ (ನಾಯಕ), ಮಾರ್ಕ್ ಚಾಂಪ್ಮನ್, ಡೆವೋನ್ ಕಾನ್ವೆ, ಜಾಕೋಬ್ ಡಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೆನ್ ಜಾಕೋಬ್ಸ್, ಕೈಲ್ ಜೇಮಿಸನ್, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಬೆನ್ ಸೀರ್ಸ್, ಟಿಮ್ ಸೀಫರ್ಟ್, ಇಶ್ ಸೋಧಿ