ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maharani Trophy 2025: 15 ಆಟಗಾರ್ತಿಯರ ಮೈಸೂರು ವಾರಿಯರ್ಸ್ ತಂಡ ಪ್ರಕಟ!

2025ರ ಮಹಾರಾಣಿ ಟ್ರೋಫಿ ಟೂರ್ನಿಯ ನಿಮಿತ್ತ ಮೈಸೂರು ವಾರಿಯರ್ಸ್‌ ತಂಡವನ್ನು ಜುಲೈ 29 ರಂದು ಪ್ರಕಟಿಸಲಾಗಿದೆ. ಒಟ್ಟು 15 ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಹೊರ ವಲಯದ ಜಸ್ಟ್‌ ಕ್ರಿಕೆಟ್‌ ಕ್ಲಬ್‌ನಲ್ಲಿ ಜುಲೈ27 ರಂದು ನಡೆದಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಈ ತಂಡವನ್ನು ಕಟ್ಟಲಾಗಿತ್ತು.

2025ರ ಮಹಾರಾಣಿ ಟ್ರೋಫಿ ಟೂರ್ನಿಗೆ ಮೈಸೂರು ವಾರಿಯರ್ಸ್‌ ತಂಡ ಪ್ರಕಟ.

ಬೆಂಗಳೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಮಾಲೀಕತ್ವದ ಮೈಸೂರು ವಾರಿಯರ್ಸ್‌ (Mysore Warriors) ತಂಡ, ಚೊಚ್ಛಲ ಆವೃತ್ತಿಯ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಟಿ20 (Maharani Trophy 2025) ಟೂರ್ನಿಗಾಗಿ ತನ್ನ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ತಂಡವನ್ನು ಪ್ರಕಟಿಸಿದೆ. ಜುಲೈ 29ರಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ(KSCA) ನಡೆದಿದ್ದ ಹರಾಜು ಪ್ರಕ್ರಿಯೆಯ ಬಳಿಕ ತನ್ನ 15 ಮಂದಿ ಆಟಗಾರ್ತಿಯರ ಹೆಸರುಗಳನ್ನು ಘೋಷಿಸಿದೆ. ಈ ಟೂರ್ನಿಯ ಮೂಲಕ ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಆಗಸ್ಟ್ 5 ರಿಂದ 10ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮಹಾರಾಣಿ ಟ್ರೋಫಿ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡ, ಹುಬ್ಬಳ್ಳಿ ಟೈಗರ್ಸ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಕಾದಾಟ ನಡೆಸಲಿವೆ.

IND vs ENG: ಈ ಒಂದೇ ಒಂದು ಕಾರಣಕ್ಕೆ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ವಿರುದ್ದ ಡೇಲ್‌ ಸ್ಟೇನ್‌ ಆಕ್ರೋಶ!

ಈ ಟೂರ್ನಿಗಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲು ಮೈಸೂರು ವಾರಿಯರ್ಸ್ ತಂಡ, ಈ ಹಿಂದೆ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಆಯ್ಕೆ ಪ್ರಕ್ರಿಯೆಯಲ್ಲಿ 70ಕ್ಕೂ ಹೆಚ್ಚು ಆಸಕ್ತ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಭಾಗವಹಿಸಿದ್ದರು.

ಮೈಸೂರು ವಾರಿಯರ್ಸ್ ಮಹಿಳಾ ತಂಡ

ಶುಭಾ ಸತೀಶ್, ಶಿಶಿರ ಎ ಗೌಡ, ಸಹನಾ ಎಸ್ ಪವಾರ್, ದೀಕ್ಷಾ ಜೆ, ಹೊನುಶ್ರೀ, ರಚಿತಾ ಹತ್ವಾರ್, ಶ್ರೇಯಾ ಪೋತೆ, ವಂದಿತಾ ಕೆ ರಾವ್, ರೋಹಿತಾ ಚೌಡ್ರಿ ಪಿ, ಪೂಜಾ ಕುಮಾರಿ ಎಂ, ದಿಶಾ ಕೆ ವಿ, ತನ್ವಿ ರಾಜ್ ಎಸ್, ಕಿಂಜಲ್ ಬಿ ಪಟೇಲ್, ಪಟೇಲ್ ಸಿಲ್ಕಿನ್ ಜೀತುಭಾಯ್, ಅಕ್ಫಿನ್ ರೂಹಿ ಕೆ, ಕುಸುಮಾ ಗೌಡ, ಪ್ರಕೃತಿ ಎನ್ ಜಿ.

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ತಮ್ಮ ನೆಚ್ಚಿನ ಇನಿಂಗ್ಸ್‌ ಹೆಸರಿಸಿದ ಶುಭಮನ್‌ ಗಿಲ್!

ಯುವ ಪ್ರತಿಭೆಗಳನ್ನು ಬೆಳೆಸಲು ಬದ್ಧ

ಈ ವೇಳೆ ಮೈಸೂರು ವಾರಿಯರ್ಸ್‌ ತಂಡದ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗಾ ಮಾತನಾಡಿ, "ಕರ್ನಾಟಕ ಕ್ರಿಕೆಟ್‌ನ ಈ ಐತಿಹಾಸಿಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿರುವುದಕ್ಕೆ ನಮಗೆ ಹೆಮ್ಮೆ ಇದೆ. ಮಹಾರಾಣಿ ಟ್ರೋಫಿ ಟೂರ್ನಿಯು ಮಹಿಳಾ ಕ್ರಿಕೆಟ್‌ನ ಸಂಭ್ರಮಾಚರಣೆಯಾಗಿದೆ. ಈ ಟೂರ್ನಿಗಾಗಿ ನಾವು ಅತ್ಯುತ್ತಮ ತಂಡ ಕಟ್ಟಿದ್ದೇವೆ. ಪ್ರತಿಭಾನ್ವೇಷಣಾ ಕಾರ್ಯಕ್ರಮದ ಮೂಲಕ ನಾವು ಹೊಸಬರಿಗೆ ಅವಕಾಶ ನೀಡಿದ್ದೇವೆ. ಮೈಸೂರು ವಾರಿಯರ್ಸ್ ತಂಡ ಯುವ ಪ್ರತಿಭೆಗಳನ್ನು ಬೆಳೆಸಲು ಬದ್ಧವಾಗಿದೆ," ಎಂದು ತಿಳಿಸಿದ್ದಾರೆ.

IND vs ENG: ಟೆಸ್ಟ್‌ ಸರಣಿಯಿಂದ ಹೊರಬಿದ್ದ ಬಳಿಕ ಭಾವನಾತ್ಮಕ ಸಂದೇಶ ಹಂಚಿಕೊಂಡ ರಿಷಭ್‌ ಪಂತ್‌!

ಈ ಚೊಚ್ಛಲ ಆವೃತ್ತಿಯ ಮಹಾರಾಣಿ ಟ್ರೋಫಿ ಟೂರ್ನಿಗೆ ಕರುಣಾ ಜೈನ್ ಅವರು ಮೈಸೂರು ವಾರಿಯರ್ಸ್‌ ತಂಡದ ಮುಖ್ಯ ತರಬೇತುದಾರರಾಗಿರುತ್ತಾರೆ. ರಜತ್ ಎಸ್ ಅವರು ಸಹಾಯಕ ಕೋಚ್‌ ಆಗಿದ್ದಾರೆ. ಮೃದು ಗೌತಮ್ ತಂಡದ ಫಿಸಿಯೋ ಆಗಿದ್ದು, ಹರ್ಷಿತಾ ಕೃಷ್ಣಸ್ವಾಮಿ ಅವರು ಸ್ಟ್ರೆಂಥ್ ಆಂಡ್ ಕಂಡಿಷನಿಂಗ್ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಗುರು ಥ್ರೋ ಡೌನ್ ತಜ್ಞರಾಗಿದ್ದು, ಎಂಆರ್ ಸುರೇಶ್ ತಂಡದ ವ್ಯವಸ್ಥಾಪಕರಾಗಿದ್ದಾರೆ. ಸೈಕಲ್ ಪ್ಯೂರ್ ಅಗರಬತ್ತಿ ಈ ಆವೃತ್ತಿಯ ಶ್ರೇಷ್ಠ ಆಟಗಾರ್ತಿಯರಿಗೆ ಟ್ರಸ್ಟೆಡ್ ಪ್ಲೇಯರ್ ಅವಾರ್ಡ್ ನೀಡಿ ಗೌರವಿಸಲಿದೆ.