ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ತಮ್ಮ ನೆಚ್ಚಿನ ಇನಿಂಗ್ಸ್‌ ಹೆಸರಿಸಿದ ಶುಭಮನ್‌ ಗಿಲ್!

ನಾಲ್ಕನೇ ಟೆಸ್ಟ್‌ ಡ್ರಾ ಆದ ನಂತರ ಬಿಸಿಸಿಐ ಜೊತೆ ಮಾತನಾಡಿದ ಶುಭಮನ್‌ ಗಿಲ್‌, ನಾನು ಸಿಡಿಸಿರುವ ನಾಲ್ಕು ಶತಕಗಳಲ್ಲಿ ಡಾನ್ ಬ್ರಾಡ್ಮನ್‌ ಅವರ ಮಹತ್ವದ ದಾಖಲೆಗೆ ಸೇರ್ಪಡೆಯಾಗಲು ಕಾರಣವಾದ, ಜುಲೈ 28ರಂದು ನಾಲ್ಕನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಿಡಿಸಿದ 103 ರನ್‌ಗಳ ಇನಿಂಗ್ಸ್‌ ನನಗೆ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.

ತನ್ನ ನೆಚ್ಚಿನ ಇನಿಂಗ್ಸ್‌ ಹೆಸರಿಸಿದ ಶುಭಮನ್‌ ಗಿಲ್‌!

ಟೆಸ್ಟ್‌ ಸರಣಿಯಲ್ಲಿ ತಮ್ಮ ನೆಚ್ಚಿನ ಇನಿಂಗ್ಸ್‌ ಆರಿಸಿದ ಶುಭಮನ್‌ ಗಿಲ್‌.

Profile Ramesh Kote Jul 28, 2025 11:15 PM

ಕೆನಿಂಗ್ಟನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ(IND vs ENG) 4 ಪಂದ್ಯಗಳು ಮುಗಿದಿವೆ. ಇನ್ನು ಬಾಕಿ ಉಳಿದಿರುವುದು ಕೊನೆಯ ಪಂದ್ಯ ಮಾತ್ರ. ಈ ಪಂದ್ಯಕ್ಕೆ ಜುಲೈ 31ರಂದು ಕೆನಿಗ್ಟನ್‌ ಓವಲ್‌ನಲ್ಲಿ ಚಾಲನೆ ಸಿಗಲಿದೆ. ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯವಾಗಿದ್ದು, ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಈ ಸರಣಿಯಲ್ಲಿ 3-1 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಆಂಗ್ಲರು (England) ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ತಮ್ಮದಾಗಿಸಿಕೊಳ್ಳಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಇತ್ತ ಟೀಂಮ್‌ ಇಂಡಿಯಾ (India) ಎರಡನೇ ಪಂದ್ಯದಲ್ಲಿ ತೋರಿದ್ದ ಅದ್ಭುತ ಪ್ರದರ್ಶನವನ್ನು ತೋರಿ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಲು ಯೋಚಿಸುತ್ತಿದೆ.

ಇದರ ನಡುವೆ ತಂಡದ ನಾಯಕನಾಗಿ ಅದ್ಭುತ ಫಾರ್ಮ್‌ನಲ್ಲಿರುವ ಶುಭ್‌ಮನ್‌ ಗಿಲ್‌ ಇಡೀ ಸರಣಿಯಲ್ಲಿ 722ರನ್‌ ಗಳಿಸಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಕಳೆದ ಪಂದ್ಯ ಆರಂಭಿಕ ಹಂತದಲ್ಲಿ ಬಹುತೇಕ ಕೈ ತಪ್ಪಿ ಹೋಗಿತ್ತು. ಈ ಸಮಯದಲ್ಲಿ ತಂಡದ ನಾಯಕನಾಗಿ ಕಣಕ್ಕಿಳಿದ ಗಿಲ್‌ ಭರ್ಜರಿ ಶತಕ ಹಾಗೂ ತಂಡದ ಸ್ಪಿನ್‌ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ರವರ ವಿರೋಚಿತ ಹೋರಾಟದ ನೆರವಿನಿಂದ ಪಂದ್ಯ ಡ್ರಾ ಆಗಿತ್ತು. ಈ ಸರಣಿಯಲ್ಲಿ ಒಟ್ಟು ನಾಲ್ಕು ಶತಕಗಳನ್ನು ಬಾರಿಸಿರುವ ಗಿಲ್‌, ಡಾನ್ ಬ್ರಾಡ್ಮನ್‌ ಅವರ ಮಹತ್ವದ ದಾಖಲೆಗೆ ಸೇರ್ಪಡೆಯಾಗಲು ಕಾರಣವಾದ, ಜುಲೈ 28ರಂದು ನಾಲ್ಕನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಿಡಿಸಿದ 103ರನ್‌ಗಳನ್ನೊಳಗೊಂಡ ಶತಕವೇ ನನಗೆ ಅಂತ್ಯಂತ ತೃಪ್ತಿಕರ ಇನಿಂಗ್ಸ್ ಎಂದಿದ್ದಾರೆ.

IND vs ENG: ಟೆಸ್ಟ್‌ ಸರಣಿಯಿಂದ ಹೊರಬಿದ್ದ ಬಳಿಕ ಭಾವನಾತ್ಮಕ ಸಂದೇಶ ಹಂಚಿಕೊಂಡ ರಿಷಭ್‌ ಪಂತ್‌!

ಬಿಸಿಸಿಐ ಜೊತೆ ಈ ಬಗ್ಗೆ ಮಾಹಿತಿ ಹಂಚಿಕೊಂಡ ಗಿಲ್‌

ನಾಯಕನಾಗಿಯೂ ಅದ್ಭುತ ಫಾರ್ಮ್‌ ಮುಂದುವರಿಸುತ್ತಿರುವ ಗಿಲ್‌ ನಾಲ್ಕನೇ ಟೆಸ್ಟ್‌ ಡ್ರಾಗೊಂಡ ನಂತರ ಬಿಸಿಸಿಐ ಜೊತೆ ಮಾತನಾಡಿದ್ದು, "ನನಗೆ ಮ್ಯಾಂಚೆಸ್ಟರ್‌ನಲ್ಲಿ ಸಿಡಿಸಿದ ಟೆಸ್ಟ್‌ ಶತಕ ಸಂತೋಷ ತಂದುಕೊಟ್ಟಿದೆ ಎಂದು ಭಾವಿಸುತ್ತೇನೆ. ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಭಾರತ ತಂಡ ಸರಿಯಾದ ಮನಸ್ಥಿತಿಯನ್ನು ತೋರಿತು. ಇದು ನನಗೆ ಉತ್ತಮ ತಂಡ ಎನಿಸಿದೆ. ನಾಲ್ಕನೇ ಪಂದ್ಯದ ಕೊನೆಯ ದಿನದಾಟದಲ್ಲಿ ಶೂನ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡ ನಂತರ, ಕೆ ಎಲ್‌ ರಾಹುಲ್‌ ಮತ್ತು ನನ್ನ ನಡುವಿನ ಜೊತೆಯಾಟ ಪಂದ್ಯವನ್ನು ಸೋಲಿನಿಂದ ಪಾರು ಮಾಡಬಹುದು, ಮತ್ತು ಡ್ರಾಗೊಳಿಸಬಹುದು ಎನ್ನುವ ಭರವಸೆ ಹುಟ್ಟು ಹಾಕಿತು. ಆಟಗಾರರು 140 ಓವರ್‌ಗಳ ತನಕ ಅದೇ ಮನಸ್ಥಿತಿಯನ್ನು ಹೊದುವುದು ತುಂಬಾ ಕಷ್ಟ ಎಂದು ಭಾವಿಸುತ್ತೇನೆ. ಆದ್ದರಿಂದ ಈ ತಂಡವನ್ನು ಉತ್ತಮ ತಂಡ ಎಂದು ಹೇಳಿದ್ದೇನೆ. ಈ ಮೂಲಕ ಪಂದ್ಯವನ್ನು ಡ್ರಾಗೊಳಿಸಿದ್ದು ನಮಗೆ ಸಮಾಧಾನ ತಂದುಕೊಟ್ಟಿದೆ. ಓವಲ್‌ನಲ್ಲಿ ಪ್ರಾರಂಭವಾಗುವ ಐದನೇ ಟೆಸ್ಟ್‌ನಲ್ಲಿ ಗೆದ್ದು ಸರಣಿ ಸಮಬಲಗೊಳಿಸು ಗುರಿಯನ್ನು ಭಾರತ ತಂಡ ಹೊಂದಿದೆ," ಎಂದು ಹೇಳಿದ್ದಾರೆ.

IND vs ENG: ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂದು ವಿವರಿಸಿದ ವಾಷಿಂಗ್ಟನ್‌ ಸುಂದರ್‌!

ಐದನೇ ಟೆಸ್ಟ್‌ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್‌

ಮ್ಯಾಂಚೆಸ್ಟ್‌ರ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಸರಣಿಯ ಐದನೇ ಟೆಸ್ಟ್‌ ಪಂದ್ಯ ಕೆನಿಂಗ್ಟನ್‌ನ ಓವಲ್‌ನಲ್ಲಿ ಪ್ರಾರಂಭವಾಗಲಿದೆ. ಇದು ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಪಂದ್ಯವಾಗಿದ್ದು, ಅದರಲ್ಲೂ ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇದೆ ಬೆನ್ನಲ್ಲೇ ಇದೀಗ ಇಂಗ್ಲೆಂಡ್‌ ತಂಡ 15 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಅಂತಹ ಮಹತ್ವದ ಬದಲಾವಣೆಗಳೇನಿಲ್ಲ. ಕೊನೆಯ 3 ವರ್ಷಗಳ ಹಿಂದೆ ದೀರ್ಘಸ್ವರೂಪದ ಟೆಸ್ಟ್‌ ಮಾದರಿಯ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಒಂದೇ ಒಂದು ಪಂದ್ಯವಾಡಿರುವ ಆಲ್​ರೌಂಡರ್ ಜೇಮೀ ಓವರ್ಟನ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇನ್ನುಳಿದಂತೆ ಕಳೆದ ಪಂದ್ಯವಾಡಿದ ಆಟಗಾರರೇ ಇದ್ದಾರೆ.

IND vs ENG: ಇಂಗ್ಲೆಂಡ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಬೆನ್‌ ಸ್ಟೋಕ್ಸ್‌!

ಐದನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋ ರೂಟ್ (ವಿ ಕೀ), ಕ್ರಿಸ್ ವೋಕ್ಸ್, ಜ್ಯಾಕ್ ಕ್ರಾವ್ಲಿ, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಬ್ರೈಡನ್ ಕಾರ್ಸ್‌, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್, ಓಲಿ ಪೋಪ್, ಲಿಯಾಮ್ ಡಾಸನ್, ಜೇಮೀ ಸ್ಮಿತ್, ಜಾಕೋಬ್ ಬೆಥೆಲ್, ಜೋಫ್ರಾ ಆರ್ಚರ್, ಜಾಶ್ ಟಂಗ್.

ಬರಹ: ಕೆಎನ್‌ ರಂಗು, ಚಿತ್ರದುರ್ಗ