ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ ಸರ್ಕಾರ!

ಮುಂಬರುವ 2025ರ ಏಷ್ಯಾಕಪ್‌ ಟೂರ್ನಿಗೆ ಭಾರತ ಸಿದ್ದತೆಯನ್ನು ನಡೆಸುತ್ತಿದೆ. ಇದರ ನಡುವೆ ಫೆಹಲ್ಗಾಮ್‌ ದಾಳಿಯ ಕಾರಣ ಪಾಕಿಸ್ತಾನ ವಿರುದ್ದದ ಭಾರತ ತಂಡ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಬಾರದು ಎಂಬ ಆಗ್ರಹಗಳು ಕೇಳಿ ಬರುತ್ತಿದ್ದವು. ಇದೀಗ ಕ್ರೀಡಾ ಸಚಿವಾಲಯ ಭಾರತ ಹಾಗೂ ಪಾಕಿಸ್ತಾನ ಆಟಬೇಕಾ ಅಥವಾ ಬೇಡವಾ? ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.

ಭಾರತ-ಪಾಕಿಸ್ತಾನ ಏಷ್ಯಾ ಕಪ್‌ ಪಂದ್ಯಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟ ಸರ್ಕಾರ.

ನವದೆಹಲಿ: ರಾಜಕೀಯ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಆಡುತ್ತಿಲ್ಲ. ಆದರೆ, ಐಸಿಸಿ ಹಾಗೂ ಏಷ್ಯಾ ಆಯೋಜನೆಯ ಟೂರ್ನಿಗಳಲ್ಲಿ ಮಾತ್ರ ಈ ಎರಡೂ ತಂಡಗಳು ಕಾದಾಟ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಫೆಹಲ್ಗಾಮ್‌ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಬೇಸರಗೊಂಡಿದೆ. ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ತಂಡ ಆಡಬಾರದು ಎಂದು ಹಲವರು ಆಗ್ರಹಿಸಿದ್ದರು. ಇದೀಗ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಆಡಬೇಕಾ? ಅಥವಾ ಬೇಡವಾ? ಎಂಬುದನ್ನು ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ (Sports Ministry) ಸ್ಪಷ್ಟನೆ ನೀಡಿದೆ.

ಪಾಕಿಸ್ತಾನದ ಮೇಲೆ ವಿಶೇಷ ಗಮನ ಹರಿಸಿ ಮಾಡಲಾದ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಭಾರತದ ಹೊಸ ನೀತಿಯನ್ನು ಕ್ರೀಡಾ ಸಚಿವಾಲಯ ಅನಾವರಣಗೊಳಿಸಿದೆ. ಈ ನೀತಿ ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಸಚಿವಾಲಯದ ಈ ನೀತಿಯು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಯಾವುದೇ ದ್ವಿಕ್ಷೀಯ ಸರಣಿಗಳಲ್ಲಿ ಆಡಲು ಅನುಮತಿ ಇಲ್ಲ. ಆದರೆ, ಐಸಿಸಿ, ಏಷ್ಯಾ ಅಥವಾ ಒಲಿಂಪಿಕ್ಸ್‌ನಂತಹ ಟೂರ್ನಿಗಳಲ್ಲಿ ಮಾತ್ರ ಈ ಎರಡೂ ದೇಶಗಳು ಮುಖಾಮುಖಿಯಾಗಬಹುದು ಎಂದು ತಿಳಿಸಿದೆ.

Asia Cup 2025: ಸಂಜು ಸ್ಯಾಮ್ಸನ್‌ಗೆ ಎದುರಾಗಿರುವ ಅಪಾಯವನ್ನು ತಿಳಿಸಿದ ಮೊಹಮ್ಮದ್‌ ಕೈಫ್‌!

"ಏಷ್ಯಾ ಕಪ್ ಬಹುಪಕ್ಷೀಯ ಟೂರ್ನಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಆ ಟೂರ್ನಿಯಲ್ಲಿ ಭಾರತ ತಂಡ ಆಡುವುದನ್ನು ತಡೆಯುವುದಿಲ್ಲ. ಆದರೆ, ಪಾಕಿಸ್ತಾನ ತಂಡ ದ್ವಿಪಕ್ಷೀಯ ಸರಣಿಯನ್ನು ಆಡಲು ಭಾರತದ ನೆಲಕ್ಕೆ ಬರಲು ಅನುಮತಿಸುವುದಿಲ್ಲ, ಆದರೆ ನಾವು ಒಲಿಂಪಿಕ್ಸ್‌ ಚಾರ್ಟರ್ ಅನ್ನು ಅನುಸರಿಸುವುದರಿಂದ ಬಹುಪಕ್ಷೀಯ ಟೂರ್ನಿಗಳಲ್ಲಿ ಆಡುವುದನ್ನು ನಾವು ಎಂದಿಗೂ ತಡೆಯುವುದಿಲ್ಲ," ಎಂದು ಕ್ರೀಡಾ ಸಚಿವಾಲಯ ಹೇಳಿದೆ.

"ಈ ನಿಯಮದ ಪ್ರಕಾರ, ಭಾರತ ತಂಡಗಳು ಮತ್ತು ವೈಯಕ್ತಿಕ ಆಟಗಾರರು, ಪಾಕಿಸ್ತಾನದ ತಂಡಗಳು ಅಥವಾ ಆಟಗಾರರನ್ನು ಒಳಗೊಂಡ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲಿದ್ದಾರೆ. ಅದೇ ರೀತಿ, ಭಾರತ ಆಯೋಜಿಸುವ ಇಂತಹ ಬಹುಪಕ್ಷೀಯ ಟೂರ್ನಿಗಳಲ್ಲಿ ಪಾಕಿಸ್ತಾನಿ ಆಟಗಾರರು ಮತ್ತು ತಂಡಗಳು ಭಾಗವಹಿಸಲು ಅವಕಾಶವಿರುತ್ತದೆ," ಎಂದು ತಿಳಿಸಿದೆ.

Asia Cup 2025: ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌!

ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟಂಬರ್‌ 14 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಇದಾದ ಬಳಿಕ ಸೆಪ್ಟಂಬರ್‌ 21 ರಂದು, ನಂತರ ಸೆಪ್ಟಂಬರ್‌ 29 ರಂದು ನಡೆಯುವ ಫೈನಲ್‌ನಲ್ಲಿಯೂ ಈ ತಂಡಗಳು ಮುಖಾಮುಖಿ ಕಾದಾಟ ನಡೆಸಬಹುದು. ಈ ಟೂರ್ನಿಯ ಬಳಿಕ ಮುಂದಿನ ವರ್ಷ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

2025ರ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್‌ದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ), ಹರ್ಷಿತ್ ರಾಣಾ

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್‌, ಪ್ರಸಿಧ್‌ ಕೃಷ್ಣ, ವಾಷಿಂಗ್ಟನ್‌ ಸುಂದರ್‌, ರಿಯಾನ್‌ ಪರಾಗ್‌ ಮತ್ತು ಧ್ರುವ್‌ ಜುರೆಲ್‌