ನವದೆಹಲಿ: ಭಾರತ ತಂಡದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ (Suresh Raina), ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಆರಿಸಿದ್ದಾರೆ. ಸುರೇಶ್ ರೈನಾ 2008 ರಿಂದ 2015ರವರೆಗೂ ಸಿಎಸ್‌ಕೆ ಪರ ಆಡಿದ್ದರು. ನಂತರ 2018ರಿಂದ ಮುಂದಿನ ಮೂರು ವರ್ಷಗಳ ಕಾಲ ರೈನಾ ಸಿಎಸ್‌ಕೆ ಪರ ಆಡಿದ್ದರು. ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ ಆಡುವಾಗ ಸುರೇಶ್ ರೈನಾ ನಾಲ್ಕು ಚಾಂಪಿಯನ್ ಆಗಿದ್ದರು. ಹಲವು ವರ್ಷಗಳ ಕಾಲ ಎಂಎಸ್ ಧೋನಿ (MS Dhoni) ಅವರಿಗೆ ರೈನಾ ಉಪ ನಾಯಕರಾಗಿದ್ದರು. 2022ರಲ್ಲಿ ಸುರೇಶ್ ರೈನಾ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.
ಶುಭಾಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸುರೇಶ್ ರೈನಾ, ತನ್ನ ನೆಚ್ಚಿನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮುರಳಿ ವಿಜಯ್ ಹಾಗೂ ಮ್ಯಾಥ್ಯೂ ಹೇಡನ್ ಅವರನ್ನು ಆರಿಸಿದ್ದಾರೆ. ಮುರಳಿ ವಿಜಯ್ ಅವರು 70 ಐಪಿಎಲ್ ಪಂದ್ಯಗಳಿಂದ 1708 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರು 32 ಪಂದ್ಯಗಳಿಂದ ಸಿಎಸ್‌ಕೆ ಪರ 1107 ರನ್‌ಗಳನ್ನು ಸಿಡಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದೊಡ್ಡ ದಾಖಲೆಯನ್ನು ಬರೆದ ಕೈರೊನ್ ಪೊಲಾರ್ಡ್!
ಇನ್ನು ಮೂರನೇ ಕ್ರಮಾಂಕಕ್ಕೆ ಮೈಕಲ್ ಹಸ್ಸಿ ಅವರನ್ನು ರೈನಾ ಆರಿಸಿದ್ದಾರೆ. ಮಾಜಿ ಆಲ್‌ರೌಂಡರ್ ಸಿಎಸ್‌ಕೆ ಪರ 1768 ರನ್‌ಗಳನ್ನು ಕಲೆ ಹಾಕಿದ್ದಾರೆ. 2018 ರಿಂದ ಇಲ್ಲಿಯವರೆಗೂ ಅವರು ಸಿಎಸ್‌ಕೆ ತಂಡದಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕಕ್ಕೆ ರೈನಾ ತನ್ನನ್ನೇ ಆಯ್ಕೆ ಮಾಡಿದ್ದಾರೆ. ಇವರು ಸಿಎಸ್‌ಕೆ ಪರ ಐಪಿಎಲ್ ಟೂರ್ನಿಯಲ್ಲಿ 4687 ರನ್‌ಗಳನ್ನು ಗಳಿಸಿದ್ದಾರೆ.
ನಂತರದ ಕ್ರಮಾಂಕಕ್ಕೆ ಸುಬ್ರಮಣಿಯನ್ ಬದ್ರಿನಾಥನ್ ಅವರನ್ನು ರೈನಾ ಆರಿಸಿದ್ದಾರೆ. ಬದ್ರಿನಾಥ್ ಅವರು 67 ಇನಿಂಗ್ಸ್‌ಗಳಿಂದ 1441 ರನ್‌ಗಳನ್ನು ಕಲೆ ಹಾಕಿದ್ದಾರೆ. ಆರನೇ ಕ್ರಮಾಂಕಕ್ಕೆ ವೇಗದ ಬೌಲಿಂಗ್ ಆಲ್‌ರೌಂಡರ್ ಆಲ್ಬಿ ಮಾರ್ಕೆಲ್‌ಗೆ ಸ್ಥಾನ ನೀಡಲಾಗಿದೆ. ಸಿಎಸ್‌ಕೆ ಮಾಜಿ ಸ್ಟಾರ್ ಆಟಗಾರ 827 ರನ್‌ಗಳ ಜೊತೆಗೆ 76 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇನ್ನುಳಿದ ಸ್ಥಾನಗಳಿಗೆ ಡೌಗ್ ಬೊಲಿಂಜರ್, ಶದಾಬ್ ಜಕಾತಿ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಲಕ್ಷ್ಮಿಪತಿ ಹಾಗೂ ಮೋಹಿತ್ ಶರ್ಮಾ ಅವರನ್ನು ರೈನಾ ಆರಿಸಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಶ್ರೀಲಂಕಾ ದಿಗ್ಗಜ ಮುತ್ತಯ್ಯ ಮುರಳಿಧರನ್ ಅವರನ್ನು ಆಯ್ಕೆ ಮಾಡಿದ್ದಾರೆ.
Rahul Dravid: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ
ರೈನಾ ಆರಿಸಿದ ಆಟಗಾರರ ಪೈಕಿ ಇದೀಗ ತಂಡದಲ್ಲಿ ಸಕ್ರಿಯರಾಗಿರುವುದು ಎಂಎಸ್ ಧೋನಿ ಹಾಗೂ ರವೀಂದ್ರ ಜಡೇಜಾ ಮಾತ್ರ. ಇನ್ನುಳಿದ ಎಲ್ಲಾ ಆಟಗಾರರು ಈಗಾಗಲೇ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮೋಹಿತ್ ಶರ್ಮಾ 2019ರಲ್ಲಿ ಸಿಎಸ್‌ಕೆ ಪರ ಕೊನೆಯ ಬಾರಿ ಐಪಿಎಲ್ ಆಡಿದ್ದರು.ಇದೀಗ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.
ಸುರೇಶ್ ರೈನಾ ಆರಿಸಿದ ಸಾರ್ವಕಾಲಿಕ ಶ್ರೇಷ್ಠ ಸಿಎಸ್‌ಕೆ ತಂಡ: ಎಂಎಸ್ ಧೋನಿ, ಮುರಳಿ ವಿಜಯ್, ಮ್ಯಾಥ್ಯೂ ಹೇಡನ್, ಮೈಕಲ್ ಹಸ್ಸಿ, ಸುರೇಶ್ ರೈನಾ, ಸುಬ್ರಮಣ್ಯಂ ಬದರಿನಾಥ್, ಆಲ್ಬಿ ಮಾರ್ಕೆಲ್, ಡೌಗ್ ಬೊಲ್ಲಿಂಜರ್, ಶದಾಬ್ ಜಕಾತಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಎಲ್‌ಪಿ ಬಾಲಾಜಿ, ಮೋಹಿತ್ ಶರ್ಮಾ, ಮುತ್ತಯ್ಯ ಮುರಳೀಧರನ್ (ಇಂಪ್ಯಾಕ್ಟ್ ಪ್ಲೇಯರ್)