ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಾಯಕತ್ವ ಕೇಳಲಿಲ್ಲ, ಕನಿಷ್ಠ ತಂಡಕ್ಕೆ ಆಯ್ಕೆ ಮಾಡಿʼ: ಶ್ರೇಯಸ್‌ ಅಯ್ಯರ್‌ ತಂದೆ ಕಿಡಿ!

ಮುಂಬರುವ ಏಷ್ಯಾ ಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ತಂದೆ ಸಂತೋಷ್‌ ಅಯ್ಯರ್‌ ಕಿಡಿ ಕಾರಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ಪ್ರದರ್ಶನದ ಹೊರತಾಗಿಯೂ ಶ್ರೇಯಸ್‌ ಅಯ್ಯರ್‌ ಅವರನ್ನು ಟಿ20ಐ ತಂಡದಿಂದ ಕೈ ಬಿಡಲಾಗಿತ್ತು.

ತಮ್ಮ ಮಗ ಶ್ರೇಯಸ್‌ ಅಯ್ಯರ್‌ಗೆ ಅವಕಾಶ ನೀಡದ ಬಗ್ಗೆ ತಂದೆ ಕಿಡಿ!

ಶ್ರೇಯಸ್‌ ಅಯ್ಯರ್‌ಗೆ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ತಂದೆ ಪ್ರತಿಕ್ರಿಯೆ.

Profile Ramesh Kote Aug 21, 2025 4:13 PM

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಅವರಿಗೆ ಸ್ಥಾನ ನೀಡದ ಬಗ್ಗೆ ಬಲಗೈ ಬ್ಯಾಟ್ಸ್‌ಮನ್‌ ಸಂತೋಷ್‌ ಅಯ್ಯರ್‌ (Shreyas Iyer) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತಂಡದ ನಾಯಕತ್ವವನ್ನು ನೀಡಿಲ್ಲವಾದರೂ ಪರವಾಗಿಲ್ಲ, ಕನಿಷ್ಠ ತಂಡದಲ್ಲಿ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ. ಆಗಸ್ಟ್‌ 19 ರಂದು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಶ್ರೇಯಸ್‌ ಅಯ್ಯರ್‌, ಯಶಸ್ವಿ ಜೈಸ್ವಾಲ್‌ ಅವರನ್ನು ಕಡೆಗಣಿಸಲಾಗಿತ್ತು. ಆ ಮೂಲಕ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರನ್ನು ಆರಿಸಿ ಉಪ ನಾಯಕತ್ವವನ್ನು ನೀಡಲಾಗಿದೆ.

ಸೆಪ್ಟಂಬರ್‌ 9 ರಂದು ಏಷ್ಯಾ ಕಪ್‌ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಶೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಬಿಸಿಸಿಐ ಆಯ್ಕೆ ಸಮಿತಿಯು ಬಲಗೈ ಬ್ಯಾಟ್ಸ್‌ಮನ್‌ ಅನ್ನು ಕಡೆಗಣಿಸಿದೆ. ಇನ್ನು ಎಡಗೈ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಕೂಡ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗಮನವನ್ನು ಸೆಳೆದಿದ್ದರು. ಆದರೆ, ಅವರನ್ನು ಕೂಡ ಬಿಸಿಸಿಐ ಕೈ ಬಿಟ್ಟಿದೆ. ಆ ಮೂಲಕ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಅವರ ಜೊತೆಗೆ ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ಗೆ ಅವಕಾಶವನ್ನು ನೀಡಿದೆ.

Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರರು

ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿದ ತಂದೆ ಸಂತೋಷ್‌ ಅಯ್ಯರ್‌, "ಭಾರತ ಟಿ20 ತಂಡಕ್ಕೆ ಶ್ರೇಯಸ್‌ ಅಯ್ಯರ್‌ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದು ಗೊತ್ತಿಲ್ಲ. ಅವರು ವರ್ಷದಿಂದ ವರ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಪರ ನಿಯಮಿತವಾಗಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. 2024ರಲ್ಲಿ ಇವರ ನಾಯಕತ್ವದಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿತ್ತು ಹಾಗೂ 2025ರಲ್ಲಿ ಇವರ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ಫೈನಲ್‌ಗೆ ಲಗ್ಗೆ ಇಟ್ಟಿತ್ತು," ಎಂದು ಹೇಳಿದ್ದಾರೆ.

2025ರ ಐಪಿಎಲ್‌ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದರ ಆಧಾರದ ಮೇಲೆ ಏಷ್ಯಾ ಕಪ್‌ ಭಾರತ ತಂಡಕ್ಕೆ ಆಯ್ಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಆಯ್ಕೆ ಮಾಡಿರಲಿಲ್ಲ. ನಂತರ ಅಜಿತ್‌ ಅಗರ್ಕರ್‌ ಅವರು ಶ್ರೇಯಸ್‌ ಅಯ್ಯರ್‌ಗೆ ಅವಕಾಶ ಏಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Asia Cup 2025: ಸಂಜು ಸ್ಯಾಮ್ಸನ್‌ಗೆ ಎದುರಾಗಿರುವ ಅಪಾಯವನ್ನು ತಿಳಿಸಿದ ಮೊಹಮ್ಮದ್‌ ಕೈಫ್‌!

ಶ್ರೇಯಸ್‌ ಅಯ್ಯರ್‌ ಮನಸ್ಥಿತಿ ಬಗ್ಗೆ ತಿಳಿಸಿದ ಸಂತೋಷ್‌ ಅಯ್ಯರ್‌

"ಅವರನ್ನು ಭಾರತ ತಂಡದ ನಾಯಕನ್ನಾಗಿ ನೇಮಿಸಿ ಎಂದು ನಾನು ಕೇಳುತ್ತಿಲ್ಲ ಆದರೆ, ಕನಿಷ್ಠ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಿ. ಅವರನ್ನು ಹೊರಗಿಟ್ಟರೂ ಸಹ, ಅವರು ಎಂದಿಗೂ ಭಿನ್ನಾಭಿಪ್ರಾಯವನ್ನು ತೋರಿಸುವುದಿಲ್ಲ. ʻಇದು ನನ್ನ ಅದೃಷ್ಟ, ನೀವು ಏನನ್ನೂ ಮಾಡಲು ಸಾಧ್ಯವಿಲ್ಲʼ ಎಂದು ಸುಮ್ಮನೆ ಹೇಳುತ್ತಾರೆ. ಅವರು ಯಾವಾಗಲೂ ತಾಳ್ಮೆ ಮತ್ತು ಶಾಂತರಾಗಿರುತ್ತಾರೆ," ಎಂದು ಸಂತೋಷ್‌ ಅಯ್ಯರ್‌ ಹೇಳಿದ್ದಾರೆ.

"ಅವರು (ಶ್ರೇಯಸ್‌ ಅಯ್ಯರ್‌) ಯಾರನ್ನೂ ದೂರುವುದಿಲ್ಲ ಆದರೆ, ಅವರು ತಮ್ಮ ಒಳ ಮನಸಿನಲ್ಲಿ ತುಂಬಾ ನಿರಾಶರಾಗುತ್ತಾರೆ," ಎಂದು ಬಲಗೈ ಬ್ಯಾಟ್ಸ್‌ಮನ್‌ ತಂದೆ ತಿಳಿಸಿದ್ದಾರೆ.