ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶುಭಮನ್‌ ಗಿಲ್‌ ಅಲ್ಲ! ಟಿ20 ಕ್ರಿಕೆಟ್‌ನಲ್ಲಿ ತನ್ನ ಮನಸು ಗೆದ್ದ ಆಟಗಾರನನ್ನು ಹೆಸರಿಸಿದ ರಾಹುಲ್‌ ದ್ರಾವಿಡ್‌!

ಭಾರತ ಕ್ರಿಕೆಟ್‌ ತಂಡದ ಮಾಜಿ ಹೆಡ್‌ ಕೋಚ್‌ ಹಾಗೂ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರು ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆರಂಭದಲ್ಲಿ ಸಂಜು ಸ್ಯಾಮ್ಸನ್‌ ಅವರನ್ನು ತಮ್ಮ ಪ್ರತಿಭೆಯಿಂದ ನನ್ನನ್ನು ಆಕರ್ಷಿಸಿದ್ದರು ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಮಿಲಿಯನ್‌ ಡಾಲರ್‌ ಆಟಗಾರನನ್ನು ಹೆಸರಿಸಿದ ರಾಹುಲ್‌ ದ್ರಾವಿಡ್‌.

ನವದೆಹಲಿ: ಭಾರತೀಯ ಕ್ರಿಕೆಟ್‌ನ ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ (Rahul Dravid) ಅವರು 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ (T20 World Cup 2024) ಬಳಿಕ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಇದೀಗ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ದ್ರಾವಿಡ್‌ ಕೋಚಿಂಗ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಅನೇಕ ಪ್ರತಿಭಾವಂತರನ್ನು ಭಾರತೀಯ ಕ್ರಿಕೆಟ್‌ಗೆ ತಂದಿದ್ದಾರೆ. ಪೃಥ್ವಿ ಶಾ, ಶುಭಮನ್‌ ಗಿಲ್‌ ಪ್ರಮುಖರಾಗಿದ್ದಾರೆ. ಆದರೆ, ಅವರು ಇದೀಗ ಮಿಲಿಯನ್‌ ಡಾಲರ್‌ ಆಟಗಾರರನ್ನು ಆರಿಸಿದ್ದಾರೆ. ಶುಭಮನ್‌ ಗಿಲ್‌ ಅವರನ್ನು ಕಡೆಗಣಿಸಿದ ಅವರು, ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಆಯ್ಕೆ ಮಾಡಿದ್ದಾರೆ.

ರವಿಚಂದ್ರನ್‌ ಅಶ್ವಿನ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಂಭಾಷಣೆಯಲ್ಲಿ ರಾಹುಲ್‌ ದ್ರಾವಿಡ್‌, ಸಂಜು ಸ್ಯಾಮ್ಸನ್‌ ತಮ್ಮ 18ನೇ ವಯಸ್ಸಿನಲ್ಲಿರುವಾಗ ಅವರು ಮಿಲಿಯನ್‌ ಡಾಲರ್‌ ಆಟಗಾರನಾಗಿ ಕಂಡಿದ್ದರು. ಒಂದು ನಿರ್ದಿಷ್ಟ ಪ್ರತಿಭೆಯಲ್ಲ, ಬದಲಾಗಿ ಇಡೀ ಭಾರತೀಯ ಕ್ರಿಕೆಟ್‌ ಅನ್ನೇ ಅವರು ರೋಮಾಂಚನಗೊಳಿಸಿದ್ದರು ಎಂದು ಅವರು ತಿಳಿಸಿದ್ದಾರೆ.

Asia Cup 2025 ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ!

"ಸಂಜು ಸ್ಯಾಮ್ಸನ್‌ 18ನೇ ವಯಸ್ಸಿನಲ್ಲಿದ್ದಾಗ, ನಾನು ಅವರನ್ನು ಮೊದಲ ಬಾರಿ ಭೇಟಿಯಾಗಿದ್ದೆ ಹಾಗೂ ಅವರು ನೋಡಲು ಮಿಲಿಯನ್‌ ಡಾಲರ್‌ ಆಟಗಾರನ ರೀತಿ ಕಂಡಿದ್ದರು. ಅವರನ್ನು ಅದೇ ರೀತಿ ನೋಡುವುದನ್ನು ಮುಂದುವರಿಸಲಾಗಿತ್ತು. ಸಾಕಷ್ಟು ಹೆಸರುಗಳನ್ನು ಇಲ್ಲಿ ಉಲ್ಲೇಖಿಸುವುದಿಲ್ಲ. ಒಂದು ಮಗು ನಿಮ್ಮನ್ನು 'ವಾವ್' ಎಂದು ಕರೆಯುವುದಿಲ್ಲ, ವಾಸ್ತವವಾಗಿ ಭಾರತೀಯ ವ್ಯವಸ್ಥೆಯಲ್ಲಿ ಬರುವ ಪ್ರತಿಭೆಯೇ ನಿಮ್ಮನ್ನು 'ವಾವ್' ಎಂದು ಕರೆಯುವಂತೆ ಮಾಡುತ್ತದೆ. ಈಗಲೂ ಸಹ, ನೀವು ಐಪಿಎಲ್ ಟ್ರಯಲ್ಸ್‌ನಲ್ಲಿದ್ದಾಗ ಮತ್ತು ಹೊಸ ಮಕ್ಕಳು ಬರುತ್ತಿರುವುದನ್ನು ನೋಡಿದಾಗ, ಈ ಎಲ್ಲಾ ಪ್ರತಿಭೆಗಳು ಎಲ್ಲಿಂದ ಬರುತ್ತಿವೆ ಎಂದು ನೋಡುವುದು ಅದ್ಭುತವಾಗಿದೆ, ”ಎಂದು ದ್ರಾವಿಡ್ ಹೇಳಿದ್ದಾರೆ.

Asia Cup 2025: ಏಷ್ಯಾಕಪ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ

ಶುಭಮನ್‌ ಗಿಲ್‌ ಬಗ್ಗೆಯೂ ದ್ರಾವಿಡ್‌ ಹೇಳಿಕೆ

ಶುಭಮನ್ ಗಿಲ್ ಅವರನ್ನು ಭೇಟಿಯಾಗುವ ಮೊದಲೇ, ಭಾರತೀಯ ಕ್ರಿಕೆಟ್‌ನ ಎಲ್ಲಾ ವಲಯಗಳಿಂದ ಭಾರತದ ಮುಂದಿನ ದೊಡ್ಡ ಸ್ಟಾರ್‌ ಎಂಬ ಹೆಸರನ್ನು ಕೇಳಿದ್ದೆ ಎಂದು ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ. ಅವರು ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಮುಂದಿನ ದೊಡ್ಡ ಸ್ಟಾರ್‌ಗಳೆಂದು ಹೆಸರಿಸಿದ್ದಾರೆ.

Women’s Hockey Asia Cup 2025: ಮಹಿಳಾ ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ

"ಶುಭಮನ್‌ ಗಿಲ್‌ ಅವರನ್ನು ಹಲವು ಜನರು ಗುರುತಿಸಿದ್ದರು. ನಾನು ಎಲ್ಲಿಗೆ ಹೋದರೂ ಶುಭಮನ್‌ ಗಿಲ್‌ ಅವರ ಹೆಸರನ್ನು ಕೇಳುತ್ತಿದ್ದೆ, ವಾವ್ಹ್‌! ಎಂಥಾ ಆಟಗಾರ ಶುಭಮನ್‌ ಗಿಲ್‌. ಇದು ಸತ್ಯವಾದ ಮಾತು. ನೀವು ಈ ಭಾರತೀಯ ವ್ಯವಸ್ಥೆಯ ಮೂಲಕ ಬಂದಾಗ, ನೀವು ವೈಭವ್ ಸೂರ್ಯವಂಶಿ] ಅಥವಾ ಆಯುಷ್ ಮ್ಹಾತ್ರೆಯಂತಹ ವಿಶೇಷ ಆಟಗಾರರಾಗಿದ್ದರೆ, ಅವರು ಹಲವಾರು ತರಬೇತುದಾರರು, ಸ್ಕೌಟ್‌ಗಳ ಮೂಲಕ ಹೋಗಿದ್ದಾರೆ. ಶುಭಮನ್‌ ಗಿಲ್‌ ಅವರನ್ನು ನೋಡುವುದಕ್ಕೂ ಮುನ್ನ , ಬಲಗೈ ಬ್ಯಾಟ್ಸ್‌ಮನ್‌ ಬಗ್ಗೆ ಆರು ಮಂದಿ ನನ್ನ ಬಳಿ ಹೇಳಿದ್ದರು. ಇವರ ಹೆಸರು ಶುಭಮನ್‌ ಗಿಲ್‌ ಹಾಗೂ ತುಂಬಾ ಒಳ್ಳೆಯ ಆಟಗಾರ ಎಂದು ಹಲವರು ನನಗೆ ಹೇಳಿದ್ದರು," ಎಂದು ರಾಹುಲ್‌ ದ್ರಾವಿಡ್‌ ರಿವೀಲ್‌ ಮಾಡಿದ್ದಾರೆ.