ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಟೆಸ್ಟ್‌ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಕ್ಕೆ ಹಿನ್ನಡೆ, ಪಾಕಿಸ್ತಾನ ಶುಭಾರಂಭ!

ಪಾಕಿಸ್ತಾನ ತಂಡ ಮೊದಲನೇ ಟಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 93 ರನ್‌ಗಳ ರೋಚಕ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ ಹಾಗೂ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಕ್‌ ಶಭಾರಂಭ ಕಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್‌ ಗೆದ್ದ ಪಾಕಿಸ್ತಾನ.

ನವದೆಹಲಿ: ನೊಮಾನ್‌ ಅಲಿ ಹಾಗೂ ಸಾಜಿದ್‌ ಖಾನ್‌ (Sajid Khan) ಅವರ ಸ್ಪಿನ್‌ ಮೋಡಿ ಹಾಗೂ ಶಾಹೀನ್‌ ಶಾ ಅಫ್ರಿದಿ ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡ, ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (PAK vs SA) ದಕ್ಷಿಣ ಆಫ್ರಿಕಾ ವಿರುದ್ಧ 93 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆತಿಥೇಯ ಪಾಕಿಸ್ತಾನ ತಂಡ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ ಹಾಗೂ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ (WTC 2025-27) ಶುಭಾರಂಭ ಕಂಡಿದೆ. ಮತ್ತೊಂದು ಕಡೆ ಚಾಂಪಿಯನ್ಸ್‌ ದಕ್ಷಿಣ ಆಫ್ರಿಕಾ (South Africa) ತಂಡ, ಭಾರತ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಕೊಂಚ ಹಿನ್ನಡೆಯನ್ನು ಅನುಭವಿಸಿದೆ.

ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ 276 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾಕಿಸ್ತಾನ ತಂಡದ ನೊಮಾನ್‌ ಅಲಿ ಹಾಗೂ ಶಾಹೀನ್‌ ಶಾ ಅಫ್ರಿದಿ ಶಾಕ್‌ ನೀಡಿದರು. ಹರಿಣ ಪಡೆ ದ್ವಿತೀಯ ಇನಿಂಗ್ಸ್‌ನಲ್ಲಿ 60.5 ಓವರ್‌ಗಳಿಗೆ 183 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸೋಲು ಅನುಭವಿಸಿತು. ದಕ್ಷಿಣ ಆಫ್ರಿಕಾ ತಂಡದ ಪರ ರಯಾನ್‌ ರಿಕೆಲ್ಟನ್‌ (45 ರನ್)‌ ಹಾಗೂ ಡೆವಾಲ್ಡ್‌ ಬ್ರೆವಿಸ್‌ (54) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ ಸೂರ್ಯಕುಮಾರ್‌ ಯಾದವ್‌!

ಏಡೆನ್‌ ಮಾರ್ಕ್ರಮ್‌, ವಿಯಾನ್‌ ಮುಲ್ಡರ್‌, ಟೋನಿ ಡಿ ಜಾರ್ಜಿ, ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಕೈಲ್‌ ವೇರನ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆದರೆ, ಪಾಕಿಸ್ತಾನ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ನೊಮಾನ್‌ ಅಲಿ 79 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಶಾಹೀನ್‌ ಶಾ ಅಫ್ರಿದಿ ಕೊನೆಯ ಹಂತದಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದರು. ಸಾಜಿದ್‌ ಅಲಿ ಕೂಡ ಸ್ಪಿನ್‌ ಮೋಡಿ ಮಾಡಿ 2 ವಿಕೆಟ್‌ಗಳನ್ನು ಕಬಳಿಸಿದರು. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿಯೇ ದಕ್ಷಿಣ ಆಫ್ರಿಕಾ ತಂಡದ ಸತತ 10 ಟೆಸ್ಟ್‌ ಪಂದ್ಯಗಳ ಗೆಲುವಿನ ಪಯಣ ಅಂತ್ಯವಾಗಿದೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 84 ಓವರ್‌ಗಳಿಗೆ 269 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಈ ವೇಳೆ ಟೋನಿ ಟಿ ಜಾರ್ಜಿ (104 ರನ್‌) ಶತಕವನ್ನು ಬಾರಿಸಿದ್ದರೆ, ರಯಾನ್‌ ರಿಕೆಲ್ಟನ್‌ (71 ರನ್) ಅರ್ಧಶತಕವನ್ನು ಬಾರಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿಯೂ ನೊಮನ್‌ ಅಲಿ ಸ್ಪಿನ್‌ ಮೋಡಿ ಮಾಡಿ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಸಾಜಿದ್‌ ಖಾನ್‌ 3 ವಿಕೆಟ್‌ ಕಿತ್ತಿದ್ದರು. ಪಾಕಿಸ್ತಾನ ತಂಡ ಕೂಡ ದ್ವಿತೀಯ ಇನಿಂಗ್ಸ್‌ನಲ್ಲಿ 167 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ 378 ರನ್‌ಗಳನ್ನು ಕಲೆ ಹಾಕಿದ್ದರ ಫಲವಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 276 ರನ್‌ಗಳ ಗುರಿಯನ್ನು ನೀಡಲು ಸಾಧ್ಯವಾಗಿತ್ತು.