ನವದೆಹಲಿ: ಆಸ್ಟ್ರೇಲಿಯಾ ಒಡಿಐ ಹಾಗೂ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ (Travis Head) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಫ್ರಾಂಚೈಸಿಯೊಂದರ 10 ಮಿಲಿಯನ್ ಡಾಲರ್ ಆಫರ್‌ವೊಂದನ್ನು ನಿರಾಕರಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಆಡದೆ ಪೂರ್ಣ ಪ್ರಮಾಣದಲ್ಲಿ ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್‌ಗಳನ್ನು ಆಡಬೇಕೆಂಬ ಮನವಿಯನ್ನು ಈ ಇಬ್ಬರೂ ಸ್ಟಾರ್ ಆಟಗಾರರ ತಿರಸ್ಕರಿಸಿದ್ದಾರೆ. ಆ ಮೂಲಕ ರಾಷ್ಟ್ರೀಯ ತಂಡದ ಪರ ಮುಂದುವರಿಯಲು ಬಯಸಿದ್ದಾರೆಂದು ವರದಿಯಾಗಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯನ್ನು ಪ್ರಕಟಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಟ್ರಾವಿಸ್ ಹೆಡ್ 1.5 ಮಿಲಿಯನ್ ಡಾಲರ್ ಹಾಗೂ ಪ್ಯಾಟ್ ಕಮಿನ್ಸ್ 3 ಮಿಲಿಯನ್ ಡಾಲರ್ ಮೊತ್ತದ ವಾರ್ಷಿಕ ಗುತ್ತಿಗೆಯನ್ನು ಹೊಂದಿದ್ದಾರೆ. ಇದರ ಜೊತೆ ಐಪಿಎಲ್ ಟೂರ್ನಿಯಲ್ಲಿಯೂ ಈ ಇಬ್ಬರೂ ದೊಡ್ಡ ಮೊತ್ತವನ್ನು ಪಡೆಯುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ಯಾಟ್ ಕಮಿನ್ಸ್ 18 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದೇ ತಂಡದ ಪರ ಆಡುವ ಟ್ರಾವಿಸ್ ಹೆಡ್ 14 ಕೋಟಿ ರೂ. ಗಳನ್ನು ಪಡೆಯುತ್ತಿದ್ದಾರೆ.
ಬಿಗ್ ಬ್ಯಾಷ್ ಲೀಗ್ (BBL) ಅನ್ನು ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ, ರಾಜ್ಯ ಸಂಸ್ಥೆಗಳು ಮತ್ತು ಆಟಗಾರರ ಒಕ್ಕೂಟದ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ವರದಿ ಹೇಳುತ್ತದೆ. ಕಮಿನ್ಸ್ ಮತ್ತು ಹೆಡ್‌ಗೆ ನೀಡಲಾದ ಒಪ್ಪಂದಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬದಲಾಗುತ್ತಿರುವ ಭೂದೃಶ್ಯ ಮತ್ತು ಬಿಬಿಎಲ್‌ಗೆ ಖಾಸಗಿ ಹೂಡಿಕೆಯನ್ನು ತರುವ ಅಗತ್ಯಕ್ಕೆ ಉದಾಹರಣೆಯಾಗಿ ಬಳಸಲಾಗುತ್ತಿದೆ.
IND vs AUS: ರೋಹಿತ್ ಶರ್ಮಾ ಬಗ್ಗೆ ಬಿಸಿಸಿಐ ಸೆಲೆಕ್ಟರ್ಸ್‌ಗೆ ಎಚ್ಚರಿಕೆ ನೀಡಿದ ಮೊಹಮ್ಮದ್ ಕೈಫ್!
ಈ ಹೂಡಿಕೆಗಳು ಆಟಗಾರರ ವೇತನದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತವೆ ಮತ್ತು ಟಿ20 ಲೀಗ್ ಅನ್ನು ಫ್ರಾಂಚೈಸಿ ಮಾಲೀಕರ ಬೆಳೆಯುತ್ತಿರುವ ಜಾಗತಿಕ ಜಾಲಕ್ಕೆ ಸಂಪರ್ಕಿಸುತ್ತವೆ. ಇದಕ್ಕೂ ಮುನ್ನ ಜೋಫ್ರಾ ಆರ್ಚರ್‌ಗೆ ವರ್ಷಪೂರ್ತಿ ಮುಂಬೈ ಇಂಡಿಯನ್ಸ್ (MI) ಪರ ಆಡಲು ಮತ್ತು 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೊಂದಲು 7.5 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ನೀಡಲಾಗಿತ್ತು, ಆದರೆ ವೇಗಿ ಆರ್ಚರ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
ಈ ವರ್ಷದ ಆರಂಭದಲ್ಲಿ ಹೆನ್ರಿಚ್ ಕ್ಲಾಸೆನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಆಘಾತಕಾರಿ ನಿವೃತ್ತಿಯನ್ನು ಘೋಷಿಸಿ, ಪ್ರಪಂಚದಾದ್ಯಂತದ ಟಿ20 ಲೀಗ್‌ಗಳಲ್ಲಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದ್ದರು. ಟಿ20 ಲೀಗ್‌ಗಳ ಸಂಪತ್ತು ಪ್ರಪಂಚದಾದ್ಯಂತ ಉನ್ನತ ಆಟಗಾರರನ್ನು ಆಕರ್ಷಿಸುತ್ತಿರುವುದರಿಂದ, ರಾಷ್ಟ್ರೀಯ ಮಂಡಳಿಗಳು ಉತ್ತಮ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಆದರೆ ಬಿಸಿಸಿಐ, ಇಸಿಬಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದಂತಹ ದೊಡ್ಡ ಕ್ರಿಕೆಟ್ ಮಂಡಳಿಗಳು ಉನ್ನತ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ, ಅಷ್ಟೊಂದು ಶ್ರೀಮಂತವಲ್ಲದ ರಾಷ್ಟ್ರಗಳು ಕಷ್ಟಪಡುವ ಸಾಧ್ಯತೆಯಿದೆ.