ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ರೋಹಿತ್‌ ಶರ್ಮಾ ಬಗ್ಗೆ ಬಿಸಿಸಿಐ ಸೆಲೆಕ್ಟರ್ಸ್‌ಗೆ ಎಚ್ಚರಿಕೆ ನೀಡಿದ ಮೊಹಮ್ಮದ್‌ ಕೈಫ್‌!

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಫಾರ್ಮ್ ಆಧಾರದಲ್ಲಿ ಮೇಲೆ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬಾರದು. ಅವರು ಆಗಾಗ್ಗೆ ವಿಫಳರಾಗುತ್ತಾರೆ. ಆದರೆ ಪ್ರಮುಖ ಪಂದ್ಯಗಳಲ್ಲಿ ನಿರ್ಣಾಯಕ ಇನಿಂಗ್ಸ್‌ಗಳನ್ನು ಆಡಿ ತಂಡವನ್ನು ಗೆಲ್ಲಿಸುತ್ತಾರೆ. ಇದನ್ನು ಆಯ್ಕೆ ಸಮಿತಿ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ.

ರೋಹಿತ್‌ ಶರ್ಮಾ ಬಗ್ಗೆ ಆಯ್ಕೆದಾರರಿಗೆ ಮೊಹಮ್ಮದ್‌ ಕೈಫ್‌ ವಾರ್ನಿಂಗ್‌!

ರೋಹಿತ್‌ ಶರ್ಮಾ ಆಯ್ಕೆಯ ಬಗ್ಗೆ ಮೊಹಮ್ಮದ್‌ ಕೈಫ್‌ ಅಭಿಪ್ರಾಯ. -

Profile Ramesh Kote Oct 8, 2025 5:42 PM

ದುಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯು ಆಸೀಸ್ ನೆಲದಲ್ಲಿ ಅಕ್ಟೋಬರ್ 19 ರದು ಆರಂಭವಾಗಲಿದೆ. ಈ ಸರಣಿಗಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಈಗಾಗಲೇ ಭಾರತ ಏಕದಿನ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕರಾಗಿ ಶುಭ್​ಮನ್ ಗಿಲ್ ನೇಮಕವಾಗಿದ್ದು, ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೈ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಅವರ ಏಕದಿನ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗುವ ಬಗ್ಗೆ ಅನುಮಾನಗಳು ಎದ್ದಿವೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ ಹಾಗೂ ರೋಹಿತ್‌ ಶರ್ಮಾ ಬಗ್ಗೆ ಬಿಸಿಸಿಐ ಆಯ್ಕೆದಾರರು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕೆಂದು ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಫಾರ್ಮ್ ಅನ್ನು ಅರಿಯಲು ಆಯ್ಕೆದಾರರಿಗೆ ಕಷ್ಟಕರವಾಗಿರುತ್ತದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯೂ, ವಿಶ್ವಕಪ್ ತಂಡದಲ್ಲಿ ಅವರ ಆಯ್ಕೆಯು ಏಕದಿನ ಸರಣಿಯ ಪ್ರದರ್ಶನದ ಆಧಾರದ ಮೇಲೆ ನಡೆಯಲಿದೆ. ಕೊಹ್ಲಿ ಮತ್ತು ರೋಹಿತ್ ಮುಂದಿನ ಸರಣಿಯಲ್ಲಿ ಆಯ್ಕೆಯಾಗಲು ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆದರೆ ರೋಹಿತ್ ಅವರ ಬ್ಯಾಟಿಂಗ್ ಶೈಲಿಯಿಂದಾಗಿ ಅವರ ನಿಜವಾದ ಫಾರ್ಮ್ ಅನ್ನು ಆಯ್ಕೆದಾರರು ತಿಳಿಯಲು ಸಾಧ್ಯವಾಗುವುದಿಲ್ಲ. ಅಲ್ಲಿ ಅವರು ಆಗಾಗ್ಗೆ ವಿಫಲರಾಗುತ್ತಾರೆ. ಆದರೆ ನಿರ್ಣಾಯಕ ಪಂದ್ಯಗಳಲ್ಲಿ ಪಂದ್ಯ ಗೆಲ್ಲುವ ಇನಿಂಗ್ಸ್ ಆಡುತ್ತಾರೆ ಎಂಬುದು ಕೈಫ್‌ ಅಭಿಪ್ರಾಯ.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, "ವಿರಾಟ್ ಕೊಹ್ಲಿಯನ್ನು ಈ ಸರಣಿಯಲ್ಲಿ ನಿರ್ಣಯಿಸಲಾಗುವುದು ಎಂದು ಜನರು ಹೇಳುತ್ತಿದ್ದಾರೆ, ಆದರೆ ಅದು ರೋಹಿತ್ ಶರ್ಮಾಗೆ ಅನ್ವಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ನಾಯಕತ್ವ ವಹಿಸುತ್ತಿಲ್ಲ ಮತ್ತು ಅವರು ವರ್ಷಗಳಿಂದ ಆಡುತ್ತಿರುವ ರೀತಿ, 20 ರಿಂದ 30 ರನ್ ಗಳಿಸುತ್ತಾರೆ, ಆದರೆ ದೊಡ್ಡ ಪಂದ್ಯ ಬಂದಾಗ, ಅವರು 80 ರನ್ ಗಳಿಸುತ್ತಾರೆ, ಇದು ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಗಿರುತ್ತದೆ. ಅವರ ವೃತ್ತಿಜೀವನ ಇದೇ ರೀತಿ ಮುಂದುವರಿದಿದೆ. ಅವರು ಎಂದಿಗೂ ಸ್ಥಿರವಾಗಿ ರನ್ ಗಳಿಸುವುದಿಲ್ಲ," ಎಂದು ಹೇಳಿದ್ದಾರೆ.

"ರೋಹಿತ್ ಮತ್ತು ಕೊಹ್ಲಿ ನಡುವಿನ ವ್ಯತ್ಯಾಸವೆಂದರೆ ಡೆಲ್ಲಿ ಬ್ಯಾಟ್ಸ್‌ಮನ್‌ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ರೋಹಿತ್ ಪಂದ್ಯ ಗೆಲ್ಲುವ ಇನಿಂಗ್ಸ್ ಆಡುತ್ತಾರೆ. ಆಯ್ಕೆದಾರರಿಗೆ ಇದು ಕಷ್ಟಕರವಾಗಿರುತ್ತದೆ. ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ವಿಫಲವಾದರೆ ಏನು? ಅವರು ಫಾರ್ಮ್‌ನಲ್ಲಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ನೀವು ಅವರ ವೃತ್ತಿಜೀವನವನ್ನು ನೋಡಿದರೆ, ಅವರು ಆಗಾಗ್ಗೆ ಎರಡು ಅಥವಾ ಮೂರು ಇನಿಂಗ್ಸ್‌ಗಳಲ್ಲಿ ವಿಫಲರಾಗುತ್ತಾರೆ ಮತ್ತು ನಂತರ ಬಲವಾಗಿ ಕಮ್ ಬ್ಯಾಕ್ ಮಾಡುತ್ತಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಸಹ, ಅವರು ಆರಂಭಿಕ ಪಂದ್ಯಗಳಲ್ಲಿ 30 ರಿಂದ 40 ರನ್ ಗಳಿಸಿದ್ದರು ಮತ್ತು ನಂತರ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು," ಎಂದು ಮೊಹಮ್ಮದ್‌ ಕೈಫ್ ತಿಳಿಸಿದ್ದಾರೆ.

IND vs AUS: ರವೀಂದ್ರ ಜಡೇಜಾರ ಏಕದಿನ ವೃತ್ತಿ ಜೀವನ ಅಂತ್ಯ? ಎಬಿಡಿ ಹೇಳಿದ್ದಿದು!

ವಿಶ್ವಕಪ್ ತಂಡಕ್ಕೆ ರೋಹಿತ್ ಮತ್ತು ಕೊಹ್ಲಿ ಆಯ್ಕೆ ಮಾಡಬೇಕೆಂದ ಕೈಫ್

ಅಯ್ಕೆ ಸಮಿತಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನು ವಿಶ್ವಕಪ್ ಆಡಲು ಒತ್ತಾಯಿಸಬೇಕು ಎಂದು ಕೈಫ್ ಹೇಳಿದರು. ಮೆಗಾ ಈವೆಂಟ್‌ನಲ್ಲಿ ಅವರಿಗೆ ಅನುಭವಿ ಆಟಗಾರರು ಬೇಕಾಗುತ್ತಾರೆ ಎಂದ ಕೈಫ್, "ವಿಶ್ವಕಪ್‌ನಲ್ಲಿ ನಿಮಗೆ ಅನುಭವಿ ಆಟಗಾರರು ಬೇಕಾಗುತ್ತಾರೆ. ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರು ನಿರ್ಧರಿಸಿದರೆ ಮತ್ತು ಅವರು ನಿವೃತ್ತಿಯ ಹತ್ತಿರದಲ್ಲಿದ್ದರೆ, ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಅವರಿಬ್ಬರೂ ವಿಶ್ವಕಪ್‌ನಲ್ಲಿ ಆಡಿದರೆ, ಭಾರತದ ಸಾಧನೆ ಹೆಚ್ಚಾಗುತ್ತದೆ ಮತ್ತು ಪಂದ್ಯ ಗೆಲ್ಲುವ ಇನಿಂಗ್ಸ್ ಖಂಡಿತವಾಗಿಯೂ ಅವರ ಬ್ಯಾಟ್‌ಗಳಿಂದ ಬರುತ್ತವೆ. ಎರಡು ಅಥವಾ ಮೂರು ಇನಿಂಗ್ಸ್‌ಗಳ ಆಧಾರದ ಮೇಲೆ ಅವರನ್ನು ನಿರ್ಣಯಿಸಬಾರದೆಂಬುದು ನನ್ನ ಏಕೈಕ ಮನವಿಯಾಗಿದೆ," ಎಂದು ಮೊಹಮ್ಮದ್‌ ಕೈಫ್ ಸಲಹೆ ನೀಡಿದ್ದಾರೆ.