ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK) ನಡುವಣ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಉಂಟಾಗಿದ್ದ ಹ್ಯಾಂಡ್‌ಶೇಕ್ ವಿವಾದದಿಂದ (Handshake Row) ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ದೂರು ನೀಡಿದೆ. ಇದರ ನಡುವೆ ಏಷ್ಯಾ ಕಪ್ ಟೂರ್ನಿಯ ಇನ್ನುಳಿದ ಭಾಗವನ್ನು ಬಹಿಷ್ಕಾರದ ಬೆದರಿಕೆಯನ್ನು ಪಿಸಿಬಿ ಹಾಕಿದೆ. ಅಂದ ಹಾಗೆ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಅಭಿಮಾನಿಗಳು ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದದ ಪಂದ್ಯವನ್ನು ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಿದ್ದರು. ಏಕೆಂದರೆ ಫಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರಿಂದ ಹಲವು ಭಾರತೀಯ ಪ್ರವಾಸಿಗರು ಹುತಾತ್ಮರಾಗಿದ್ದರು. ಆದರೂ ಭಾರತ ತಂಡ, ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ದ ಆಡಿತ್ತು. ಅದರಂತೆ ಬಿಸಿಸಿಐ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.
ಅಂದಹಾಗೆ ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದ ಬಳಿಕ, ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಎಲ್ಲಾ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತ ಲಾಘವ ಮಾಡಲು ನಿರಾಕರಿಸಿದ್ದರು. ಇದರಿಂದ ಪಾಕ್ ಆಟಗಾರರು ಸೇರಿದಂತೆ ಪಿಸಿಬಿ ಕೂಡ ಇದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು ಹಾಗೂ ಇದು ಕ್ರೀಡಾ ಸ್ಪೂರ್ತಿಗೆ ವಿರುದ್ದ ಎಂದು ದೂರಿದೆ.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
ಪಿಸಿಬಿ ಏಷ್ಯಾ ಕಪ್ ಬಹಿಷ್ಕರಿಸುವ ಬೆದರಿಕೆ
ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಬಲವಾದ ನಿಲುವನ್ನು ತೆಗೆದುಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಎಂಸಿಸಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ನಡೆಯುತ್ತಿರುವ ಟೂರ್ನಿಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಅವರನ್ನು ತೆಗೆದುಹಾಕದಿದ್ದರೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪೈಕ್ರಾಫ್ಟ್ ತಮ್ಮ ಕರ್ತವ್ಯಗಳನ್ನು ವಿಫಲಗೊಳಿಸಿದ್ದಾರೆ ಮತ್ತು ಆಟದ ಉತ್ಸಾಹವನ್ನು ನಿರ್ಲಕ್ಷಿಸಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ.
IND vs PAK: ಟಾಸ್ ವೇಳೆ ಹಸ್ತಲಾಘವ ನಿರಾಕರಿಸಿದ ಸೂರ್ಯ-ಸಲ್ಮಾನ್
ವರದಿಯ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಭಾರತದ ವಿರುದ್ಧ ಹ್ಯಾಂಡ್‌ಶೇಕ್ ವಿವಾದದ ನಿರ್ಬಂಧಗಳನ್ನು ಪರಿಗಣಿಸುತ್ತಿದೆ. ಆದರೆ ಬಿಸಿಸಿಐ, ಎಸಿಸಿಯಿಂದ ಯಾವುದೇ ದೂರು ಸ್ವೀಕರಿಸಿಲ್ಲ. "ಹಸ್ತಲಾಘವ ನೀಡದ ಅಥವಾ ಈ ಘಟನೆಯನ್ನು ಅಂತ್ಯಗೊಳಿಸುವ ಬಗ್ಗೆ ಬಿಸಿಸಿಐಗೆ ಎಸಿಸಿಯಿಂದ ಯಾವುದೇ ಅಧಿಕೃತ ದೂರು ಬಂದಿಲ್ಲ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.