ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ಸಾರ್ವಕಾಲಿಕ ಶ್ರೇಷ್ಠ ಟಿ20 ವಿಶ್ವಕಪ್‌ ಪ್ಲೇಯಿಂಗ್‌ XI ಆರಿಸಿದ ದಿನೇಶ್‌ ಕಾರ್ತಿಕ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೆಂಟರ್‌ ದಿನೇಶ್‌ ಕಾರ್ತಿಕ್‌ ಅವರು ಭಾರತದ ಸಾರ್ವಕಾಲಿಕ ಟಿ20 ವಿಶ್ವಕಪ್‌ ಪ್ಲೇಯಿಂಗ್‌ XI ಅನ್ನು ಆರಿಸಿದ್ದಾರೆ. ಆದರೆ, ಅವರು ಟಿ20 ವಿಶ್ವಕಪ್‌ ವಿಜೇತ ಆರಂಭಿಕ ಗೌತಮ್‌ ಗಂಭೀರ್‌ ಅವರನ್ನು ಕಡೆಗಣಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಟಿ20 ವಿಶ್ವಕಪ್‌ ಪ್ಲೇಯಿಂಗ್‌ XI ಆರಿಸಿದ ದಿನೇಶ್‌ ಕಾರ್ತಿಕ್‌.

ನವದೆಹಲಿ: 2007 ಹಾಗೂ 2024ರ ಐಸಿಸಿ ಟಿ20 ವಿಶ್ವಕಪ್‌ ವಿಜೇತ ಆಟಗಾರರನ್ನು ಒಳಗೊಂಡಂತೆ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (Dinesh Karthik) ಅವರು ಭಾರತದ ಸಾರ್ವಕಾಲಿಕ ಟಿ20 ವಿಶ್ವಕಪ್‌ ಪ್ಲೇಯಿಂಗ್‌ XI (India’s all-time T20 World Cup XI) ಅನ್ನು ಆರಿಸಿದ್ದಾರೆ. ಆದರೆ, ಅವರು ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿಯನ್ನು (Virat Kohli) ಆಯ್ಕೆ ಮಾಡಿದ್ದಾರೆ. ಕ್ರಿಕ್‌ಬಝ್‌ ಪ್ರಕಟಿಸಿದ ವಿಡಿಯೊದಲ್ಲಿ ದಿನೇಶ್‌ ಕಾರ್ತಿಕ್‌ ಈ ತಂಡವನ್ನು ಪ್ರಕಟಿಸಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಎಂಟು ಇನಿಂಗ್ಸ್‌ಗಳಿಂದ ವಿರಾಟ್‌ ಕೊಹ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ್ದರು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ 59 ಎಸೆತಗಳಲ್ಲಿ 76 ರನ್‌ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಆಯ್ಕೆ ಮಾಡಿದ ದಿನೇಶ್‌ ಕಾರ್ತಿಕ್‌, ನಾಲ್ಕನೇ ಕ್ರಮಾಂಕಕ್ಕೆ ರಾಬಿನ್‌ ಉತ್ತಪ್ಪ ಅವರನ್ನು ಆರಿಸಿದ್ದಾರೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅರ್ಧಶತಕಗಳ ಸಹಿತ 199 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ ಡೇವಿಡ್‌ ಮಿಲ್ಲರ್‌ ಅವರ ನಿರ್ಣಾಯಕ ಕ್ಯಾಚ್‌ ಅನ್ನು ಸೂರ್ಯ ಪಡೆದಿದ್ದರು.

Asia Cup 2025: ಅಂಪೈರ್‌ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್‌ ಆಟಗಾರ; ವಿಡಿಯೊ ವೈರಲ್‌

ಇನ್ನು ನಾಲ್ಕನೇ ಕ್ರಮಾಂಕಕ್ಕೆ ಯುವರಾಜ್‌ ಸಿಂಗ್‌ ಅವರನ್ನು ಶಿವಂ ದುಬೆ ಬದಲಿಗೆ ಕಾರ್ತಿಕ್‌ ಆಯ್ಕೆ ಮಾಡಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ 2007ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 148 ರನ್‌ಗಳನ್ನು ಕಲೆ ಹಾಕಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸ್ಟುವರ್ಟ್‌ ಬ್ರಾಡ್‌ ಅವರ ಓವರ್‌ನಲ್ಲಿ ಯುವಿ ಆರು ಸಿಕ್ಸರ್‌ ಬಾರಿಸಿದ್ದರು. ನಾಯಕ ಹಾಗೂ ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಿಷಭ್‌ ಪಂತ್‌ ಬದಲು ಎಂಎಸ್‌ ಧೋನಿಯನ್ನು ಆರಿಸಲಿದ್ದಾರೆ.

ಆರನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಅವರನ್ನು ಡಿಕೆ ಆರಿಸಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ 16 ರನ್‌ಗಳಿಗೆ ಹರಿಣ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ಹಾರ್ದಿಕ್‌ ಆಡಿಸಿಕೊಂಡಿದ್ದರು. ಏಳನೇ ಕ್ರಮಾಂಕದಲ್ಲಿ 2007ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಇರ್ಫಾನ್‌ ಪಠಾಣ್‌ ಸ್ಥಾನ ಪಡೆದಿದ್ದಾರೆ.

Asia Cup 2025: ಭಾರತ vs ಪಾಕ್‌ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

ಜೋಗಿಂದರ್‌ ಶರ್ಮಾರನ್ನು ಕೈ ಬಿಟ್ಟ ಡಿ.ಕೆ

ಇನ್ನು ತಮ್ಮ ತಂಡದ ಬೌಲಿಂಗ್‌ ವಿಭಾಗದಲ್ಲಿ ಎಂಟನೇ ಕ್ರಮಾಂಕಕ್ಕೆ ಅಕ್ಷರ್‌ ಪಟೇಲ್‌ ಬದಲು ಹರ್ಭಜನ್‌ ಸಿಂಗ್‌ ಅವರನ್ನು ಕಾರ್ತಿಕ್‌ ಆರಿಸಿದ್ದಾರೆ. 9ನೇ ಕ್ರಮಾಂಕಕ್ಕೆ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ ಅವರನ್ನು ಆರಿಸಲಾಗಿದೆ. 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪರ ಅರ್ಷದೀಪ್‌ ಸಿಂಗ್‌ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು. ಹಾಗಾಗಿ ಜೋಗಿಂದರ್‌ ಶರ್ಮ ಅವರ ಬದಲು ಅರ್ಷದೀಪ್‌ ಸಿಂಗ್‌ಗೆ ಸ್ಥಾನವನ್ನು ನೀಡಲಾಗಿದೆ.

ತಂಡದ 10ನೇ ಕ್ರಮಾಂಕಕ್ಕೆ ಪೂರ್ಣ ಪ್ರಮಾಣದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಹಾಗೂ 11ನೇ ಕ್ರಮಾಂಕಕ್ಕೆ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಮಿಂಚಿದ್ದ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆರಿಸಲಾಗಿದೆ. ಬುಮ್ರಾ ಕಳೆದ ಟಿ20 ವಿಶ್ವಕಪ್‌ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.

Asia Cup 2025: ಪಾಕಿಸ್ತಾನದ ಬಳಿ ಕ್ಷಮೆಯಾಚಿಸಿದ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್!

ದಿನೇಶ್‌ ಕಾರ್ತಿಕ್‌ರ ಭಾರತದ ಸಾರ್ವಕಾಲಿಕ ಟಿ20 ವಿಶ್ವಕಪ್‌ ಪ್ಲೇಯಿಂಗ್‌ xi: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಎಂಎಸ್ ಧೋನಿ (ನಾಯಕ, ವಿಕೆಟ್‌ ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಅರ್ಷದೀಪ್‌ ಸಿಂಗ್, ಕುಲ್ದೀಪ್ ಯಾದವ್ ಮತ್ತು ಜಸ್‌ಪ್ರೀತ್‌ ಬುಮ್ರಾ