ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಅಂಪೈರ್‌ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್‌ ಆಟಗಾರ; ವಿಡಿಯೊ ವೈರಲ್‌

ಈ ಘಟನೆ ನಡೆಯುತ್ತಿದ್ದಾಗ ಕಾಮೆಂಟರಿ ಮಾಡುತ್ತಿದ್ದ ಪಾಕಿಸ್ತಾನ ಮಾಜಿ ನಾಯಕ ಹಾಗೂ ಆಟಗಾರ ವಾಸಿಮ್ ಅಕ್ರಮ್ 'ಬುಲ್ಸ್‌ ಐ' ಎನ್ನುವ ಪ್ರತಿಕ್ರಿಯೆಯೂ ಸಹ ಬಹಳಷ್ಟು ಗಮನ ಸೆಳೆಯಿತು. ಆದರೆ ಅಕ್ರಮ್‌ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಟೀಕೆ ವ್ಯಕ್ತಪಡಿಸಿದ್ದಾರೆ.

ಅಂಪೈರ್‌ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್‌ ಆಟಗಾರ

-

Abhilash BC Abhilash BC Sep 18, 2025 1:24 PM

ದುಬೈ: ಬುಧವಾರ ನಡೆದಿದ್ದ ಏಷ್ಯಾ ಕಪ್‌(Asia Cup 2025) 'ಎ' ಗುಂಪಿನ ಪಂದ್ಯದಲ್ಲಿ 41 ರನ್‌ಗಳಿಂದ ಯುಎಇ ತಂಡವನ್ನು ಮಣಿಸಿದ ಪಾಕಿಸ್ತಾನ ಸೂಪರ್‌ ಫೋರ್‌ ಹಂತಕ್ಕೂ ಪ್ರವೇಶ ಪಡೆಯಿತು. ಆದರೆ ಈ ಪಂದ್ಯದಲ್ಲಿ ಪಾಕ್‌ ಪೀಲ್ಡರ್‌ ಎಸೆತ ಚೆಂಡೊಂದು ಅಂಪೈರ್‌ ತಲೆಗೆ ತಗುಲಿದೆ ವಿಲಕ್ಷಣ ಘಟನೆ ಸಂಭವಿಸಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು(viral video) ನೆಟ್ಟಿಗರು ಹಲವು ರೀತಿಯ ಕಮೆಂಟ್‌ಗಳನ್ನು ಮಾಡಿದ್ದಾರೆ.

ಯುಎಇ ಚೇಸಿಂಗ್‌ ವೇಳೆ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ, ಧ್ರುವ್ ಪರಾಶರ್ ಅವರು ಸೈಮ್ ಅಯೂಬ್ ಅವರನ್ನು ಎದುರಿಸುತ್ತಿದ್ದಾಗ, ಅವರು ಫೀಲ್ಡರ್ ಕಡೆಗೆ ಚೆಂಡನ್ನು ಹೊಡೆದರು. ಚೆಂಡು ಹಿಡಿದ ಫೀಲ್ಡರ್ ನೇರವಾಗಿ ಚೆಂಡನ್ನು ನಾನ್‌ಸ್ಟ್ರೈಕರ್‌ನತ್ತ ಎಸೆತದರು. ಈ ವೇಳೆ ಚೆಂಡು ನೇರವಾಗಿ ಅಂಪೈರ್ ರುಚಿರಾ ಪಲ್ಲಿಯಗುರುಗೆ ಅವರ ತಲೆಗೆ ಬಡಿಯಿತು. ನಂತರ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಗಾಯಗೊಂಡ ಅಂಪೈರ್‌ಗೆ ಪಾಕಿಸ್ತಾನ ಮತ್ತು ಯುಎಇ ಆಟಗಾರರು ತಕ್ಷಣ ಬಂದು ತಪಾಸಣೆ ನಡೆಸಿದರು. ಗಾಯಗೊಂಡ ಅವರ ಸ್ಥಾನವನ್ನು ಗಾಜಿ ಸೊಹೆಲ್ ವಹಿಸಿಕೊಂಡರು.

ಈ ಘಟನೆ ನಡೆಯುತ್ತಿದ್ದಾಗ ಕಾಮೆಂಟರಿ ಮಾಡುತ್ತಿದ್ದ ಪಾಕಿಸ್ತಾನ ಮಾಜಿ ನಾಯಕ ಹಾಗೂ ಆಟಗಾರ ವಾಸಿಮ್ ಅಕ್ರಮ್ 'ಬುಲ್ಸ್‌ ಐ' ಎನ್ನುವ ಪ್ರತಿಕ್ರಿಯೆಯೂ ಸಹ ಬಹಳಷ್ಟು ಗಮನ ಸೆಳೆಯಿತು. ಆದರೆ ಅಕ್ರಮ್‌ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಟೀಕೆ ವ್ಯಕ್ತಪಡಿಸಿದ್ದಾರೆ.



ಕೆಲ ನೆಟ್ಟಿಗರು ಭಾರತ ತಂಡದ ಮತ್ತು ಪಂದ್ಯದ ವೇಳೆ ಭಾರತೀಯ ಆಟಗಾರರು ಹಸ್ತಲಾಘವ ಮಾಡದೇ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡವು 146 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಅನನುಭವಿ ಯುಎಇ ತಂಡವು ಪಾಕಿಸ್ತಾನದ ಸಂಘಟಿತ ಬೌಲಿಂಗ್‌ ದಾಳಿ ಎದುರಿಸುವಲ್ಲಿ ವಿಫಲವಾಯಿತು. 17.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್‌ ಆಯಿತು.