ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಆರ್‌ಸಿಬಿ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಹಾಕ್ತಿರಾ?ʼ:ಕಾಮೆಂಟೇಟರ್ಸ್‌ ವಿರುದ್ಧ ಎಬಿಡಿ ಕಿಡಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳ ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಸಮಯದಲ್ಲಿ ಆರ್‌ಸಿಬಿ ಬೌಲರ್‌ಗಳ ಬಗ್ಗೆ ಕಾಮೆಂಟೇಟರ್ಸ್‌ ನಕಾರಾತ್ಮಕ ಹೇಳಿಕೆಗಳನ್ನು ನೀಡಿದ್ದರು. ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಖಂಡಿಸಿದ್ದಾರೆ ಹಾಗೂ ಕಾಮೆಂಟೇಟರ್ಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ಕಾಮೆಂಟೇಟರ್ಸ್‌ ವಿರುದ್ಧ ಎಬಿಡಿ ಕಿಡಿ.

ಲಖನೌ: ಲಖನೌ ಸೂಪರ್‌ ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಬೌಲರ್‌ಗಳ ಬಗ್ಗೆ ನಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಕಾಮೆಂಟೇಟರ್ಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers) ಕಿಡಿ ಕಾರಿದ್ದಾರೆ. ಮೇ 27 ರಂದು ಪಂದ್ಯ ನಡೆದಿದ್ದ ಏಕನಾ ಕ್ರೀಡಾಂಗಣದಲ್ಲಿ ಪಿಚ್‌ ಬಗ್ಗೆ ಸರಿಯಾಗಿ ವಿಶ್ಲೇಷಿಸುವಲ್ಲಿ ಕಾಮೆಂಟೇಟರ್ಸ್‌ ವಿಫಲರಾಗಿದ್ದಾರೆ. ಪಿಚ್‌ ಬಗ್ಗೆ ವಿಶ್ಲೇಷಣೆ ಮಾಡುವ ಬದಲು ಅವರು ಆರ್‌ಸಿಬಿ ಬೌಲರ್‌ಗಳು ಒತ್ತಡದಲ್ಲಿದ್ದಾರೆಂದು ಅವರು ಹೇಳಿದ್ದಾರೆ ಎಂದು ಎಬಿಡಿ ದೂರಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 227 ರನ್‌ಗಳನ್ನು ಕಲೆ ಹಾಕಿತ್ತು. ಲಖನೌ ಪರ ನಾಯಕ ರಿಷಭ್‌ ಪಂತ್‌, 61 ಎಸೆತಗಳಲ್ಲಿ 118 ರನ್‌ಗಳನ್ನು ಸಿಡಿಸಿದ್ದರು. ಮಿಚೆಲ್‌ ಮಾರ್ಷ್‌ ಕೂಡ 67 ರನ್‌ಗಳನ್ನು ಬಾರಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿನ ಬ್ಯಾಟಿಂಗ್‌ ನೋಡಿದಾಗ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಮೂಲಕ ಜಿತೇಶ್‌ ಶರ್ಮಾ ತಪ್ಪು ಮಾಡಿದ್ದಾರೆಂದು ಅನಿಸುತ್ತಿತ್ತು. ನುವಾನ್‌ ತುಷಾರ ಬಿಟ್ಟರೆ ಇನ್ನುಳಿದ ಎಲ್ಲಾ ಬೌಲರ್‌ಗಳು ಅತ್ಯಂತ ದುಬಾರಿಯಾಗಿದ್ದರು.

ಅಂದ ಹಾಗೆ ಬಳಿಕ ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಜಿತೇಶ್‌ ಶರ್ಮಾ (85*), ವಿರಾಟ್‌ ಕೊಹ್ಲಿ (54) ಹಾಗೂ ಮಯಾಂಕ್‌ ಅಗರ್ವಾಲ್‌ (41*) ಅವರ ಬ್ಯಾಟಿಂಗ್‌ ಬಲದಿಂದ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತ್ತು. ಆ ಮೂಲಕ ಆರ್‌ಸಿಬಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿತ್ತು.

IPL 2025:ʻದಿಗ್ವೇಶ್‌ ಸಿಂಗ್‌ ರನ್‌ಔಟ್‌ ವಿವಾದʼ-ರಿಷಭ್‌ ಪಂತ್‌ ವಿರುದ್ಧ ಅಶ್ವಿನ್‌ ಕಿಡಿ!

ಕಾಮೆಂಟೇಟರ್ಸ್‌ ವಿರುದ್ಧ ಎಬಿಡಿ ಕಿಡಿ

ಎಬಿಡಿ 360 ಶೋನಲ್ಲಿ ಮಾತನಾಡಿದ ಡಿವಿಲಿಯರ್ಸ್‌, "ಕಳೆದ ರಾತ್ರಿ ಕಾಮೆಂಟೇಟರ್ಸ್‌ ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೇನೆ ಹಾಗೂ ನನಗೆ ಕೋಪ ಬಂದಿತ್ತು. ನಾವು ಬೌಲ್‌ ಮಾಡುವಾಗ ಅವರು ನೆಗೆಟಿವ್‌ ಕಾಮೆಂಟ್‌ಗಳನ್ನು ಹಾಕುತ್ತಿದ್ದರು. ʻಆರ್‌ಸಿಬಿ ಬೌಲಿಂಗ್‌ ಒತ್ತಡದಲ್ಲಿದೆ ಎಂದು ಅವರು ಪದೇ ಪದೆ ಹೇಳುತ್ತಿದ್ದರು. ಅವರು ಚೆನ್ನಾಗಿ ನಿರ್ವಹಿಸಲಿದ್ದಾರೆಂದು ನಮಗೆ ತಿಳಿಯುತ್ತಿಲ್ಲ. ಮತ್ತೊಮ್ಮೆ ಇನ್‌ಫಾರ್ಮ್‌ ತಂಡ ಗೆಲುವಿನ ಲಯವನ್ನು ಕಳೆದುಕೊಳ್ಳುತ್ತಿದೆ,ʼ ಎಂದು ಅವರು ಹೇಳಿದ್ದರು. ಆದರೆ, ಇದು ಬ್ಯಾಟಿಂಗ್‌ ವಿಕೆಟ್‌ ಆಗಿದೆ ಎಂದಾದರೆ ಹೇಗೆ? ಕಾಮೆಂಟರಿ ಬಾಕ್ಸ್‌ನಲ್ಲಿರುವ ನೀವೇಲ್ಲರೂ ಬುದ್ದಿವಂತರಾಗಿದ್ದೀರಿ. ಇಲ್ಲಿನ ವಿಕೆಟ್‌ ಬ್ಯಾಟಿಂಗ್‌ಗೆ ಅದ್ಭುತವಾಗಿದೆ ಎಂದು ನೀವು ಪರಿಗಣಿಸುವುದಿಲ್ಲ?," ಎಂದು ಪ್ರಶ್ನೆ ಮಾಡಿದ್ದಾರೆ.

RCB vs PBKS: ಮೊದಲನೇ ಕ್ವಾಲಿಫೈಯರ್‌ಗೂ ಮುನ್ನ ಆರ್‌ಸಿಬಿಗೆ ಟೆನ್ಷನ್‌! ಏಕೆ ಗೊತ್ತೆ?

"ಆರ್‌ಸಿಬಿ ತಂಡದ ಕಳಪೆ ಬೌಲಿಂಗ್‌ ಪ್ರದರ್ಶನ ಅವರಿಗೆ ಮತ್ತೊಮ್ಮೆ ಬೇಕಾಗಿದೆ. ನಾನು ಪಂದ್ಯವನ್ನು ವೀಕ್ಷಿಸಿದ್ದೇನೆ, ಕೆಲವೊಮ್ಮೆ ಕಾಮೆಂಟೇಟರ್ಸ್‌ ನಿರೂಪಣೆ ಮಾಡುವ ಕಡೆಗೆ ಆಕರ್ಷಿತರಾಗುತ್ತಾರೆ. ಹೌದು, ಆರ್‌ಸಿಬಿ ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ, ಆದರೆ ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ವಿಶ್ಲೇಷಿಸದೆ, 'ನೋಡಿ ಮತ್ತೆ ಶುರು. ಬೌಲರ್‌ಗಳು ವಿಫಲರಾಗುತ್ತಿದ್ದಾರೆ, ಅವರು ನಿಷ್ಪ್ರಯೋಜಕರು' ಎಂದು ಹೇಳುವುದು ಸೋಮಾರಿತನ. ಇದು ಕಠಿಣ ಪಿಚ್‌ ಆಗಿದ್ದರೆ, ರಿಷಭ್‌ ಪಂತ್‌ 118 ರನ್‌ಗಳನ್ನು ಸಿಡಿಸುತ್ತಿರಲಿಲ್ಲ. ಎಲ್‌ಎಸ್‌ಜಿಯ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಚೆನ್ನಾಗಿ ಆಡಿದ್ದಾರೆ," ಎಂದು ಹೇಳಿದ್ದಾರೆ.

"ಹೌದು, ಕೆಲವೊಮ್ಮೆ ಕಳಪೆ ಬೌಲಿಂಗ್ ಇತ್ತು. ಆದರೆ ಅಂತಿಮವಾಗಿ ದೊಡ್ಡ ಚಿತ್ರವನ್ನು ನೋಡಬೇಕು. ಸಾಮಾನ್ಯವಾಗಿ ಅಂತಹ ಬ್ಯಾಟಿಂಗ್‌ಗೆ ಬೆಂಬಲ ನೀಡದ ವಿಕೆಟ್‌ ಹಾಗಿದ್ದರೆ 227 ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿತ್ತಾ? ಆದರೆ, ಅದು ಕೇವಲ ಉತ್ತಮ ಮೇಲ್ಮೈ ಎಂದು ಸೂಚಿಸುತ್ತದೆ. ಆರ್‌ಸಿಬಿ ಇನ್ನೂ ಸ್ಪರ್ಧೆಯಲ್ಲಿತ್ತು; ಅವರು ಸೋಲೊಪ್ಪಿಕೊಳ್ಳಲಿಲ್ಲ, ಮತ್ತು ಅವರು ಅದನ್ನು ಸಾಬೀತುಪಡಿಸಿದರು," ಎಂದು ಎಬಿಡಿ ತಿಳಿಸಿದ್ದಾರೆ.