ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಜು ಸ್ಯಾಮ್ಸನ್‌ ಔಟ್‌! ಪಾಕಿಸ್ತಾನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

India's Probale Playing Xi: ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದ ಬಳಿಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲು ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.

‌ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI ವಿವರ.

ದುಬೈ: ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದ ಬಳಿಕ 2025ರ ಏಷ್ಯಾ ಕಪ್‌ ( Asia Cup 2025) ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಕಂಡಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ (IND vs PAK) ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಈ ಮಹತ್ವದ ಪಂದ್ಯ ಸೆಪ್ಟಂಬರ್‌ 14 ರಂದು ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಪಾಕಿಸ್ತಾನ ತಂಡದ ಎದುರು ಟೀಮ್‌ ಇಂಡಿಯಾಗೆ (India) ಕಠಿಣ ಸವಾಲು ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ತನ್ನ ಅತ್ಯುತ್ತಮ ಆಟಗಾರರನ್ನು ಒಳಗೊಂಡ ಆಡುವ ಬಳಗವನ್ನು ಕಣಕ್ಕೆ ಇಳಿಸಲು ಎದುರು ನೋಡುತ್ತಿದೆ.

ಯುಎಇ ವಿರುದ್ಧದ ಪಂದ್ಯದಂತೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಕೂಡ ಭಾರತದ ಪರ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಆರಂಭಿಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಆಡಿದ್ದರು. ಆದರೆ, ಅವರಿಗೆ ಬ್ಯಾಟಿಂಗ್‌ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ, ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ಫಿನಿಷರ್‌ ಆಗಿ ಜಿತೇಶ್‌ ಶರ್ಮಾ ಅವರನ್ನು ಆಡಿಸಬಹುದು. ಜಿತೇಶ್‌ ಶರ್ಮಾ ಅವರನ್ನು ಆಡಿಸುವ ಮೂಲಕ ಆರನೇ ಆಲ್‌ರೌಂಡರ್‌ ಅವರನ್ನು ಕೈ ಬಿಡುವ ಸಾಧ್ಯತೆ ಇದೆ. ಆ ಮೂಲಕ ವೇಗದ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚುವರಿ ಬೌಲರ್‌ ಅನ್ನು ಆಡಿಸಬಹುದು.

UAE vs IND: ಗೆಲುವಿನೊಂದಿಗೆ ದಾಖಲೆ ಬರೆದ ಟೀಮ್‌ ಇಂಡಿಯಾ

ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಪೂರ್ಣ ಪ್ರಮಾಣದ ವೇಗದ ಬೌಲರ್‌ ಆಗಿ ಜಸ್‌ಪ್ರೀತ್‌ ಬುಮ್ರಾ ಅವರು ಆಡಿದ್ದರು. ಇವರಿಗೆ ಶಿವಂ ದುಬೆ ಹಾಗೂ ಹಾರ್ದಿಕ್‌ ಪಾಂಡ್ಯ ಎರಡನೇ ವೇಗದ ಬೌಲರ್‌ ಆಗಿ ಅವಕಾಶ ನೀಡಲಾಗಿತ್ತು. ಇದೀಗ ಪಾಕಿಸ್ತಾನ ತಂಡ ಬಲಿಷ್ಠವಾಗಿರುವ ಕಾರಣ, ಅರ್ಷದೀಪ್‌ ಸಿಂಗ್‌ಗೆ ಎರಡನೇ ವೇಗದ ಬೌಲರ್‌ ಆಗಿ ಆಡಿಸಬಹುದು. ಏಕೆಂದರೆ ಎಡಗೈ ವೇಗಿ ಭಾರತದ ಪರ ಅತಿ ಹೆಚ್ಚು ಟಿ20ಐ ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಆಗಿದ್ದಾರೆ. ಹಾಗಾಗಿ ಶಿವಂ ದುಬೆ ಅವರು, ಅರ್ಷದೀಪ್‌ ಸಿಂಗ್‌ಗೆ ಅವಕಾಶ ಬಿಟ್ಟುಕೊಡಬಹುದು. ಜಸ್‌ಪ್ರೀತ್‌ ಬುಮ್ರಾ ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದು, ಸ್ಪಿನ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ ಹಾಗೂ ಅಕ್ಷರ್‌ ಪಟೇಲ್‌ ಅವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿದ್ದಾರೆ.

Asia Cup 2025: ʻ5 or 6ನೇ ಕ್ರಮಾಂಕ ಸೂಕ್ತವಲ್ಲʼ-ಸಂಜು ಸ್ಯಾಮ್ಸನ್‌ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಡಬ್ಲ್ಯುವಿ ರಾಮನ್‌!

ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್‌ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

  1. ಅಭಿಷೇಕ್‌ ಶರ್ಮಾ (ಓಪನರ್‌)
  2. ಶುಭಮನ್‌ ಗಿಲ್‌ (ಓಪನರ್‌, ಉಪ ನಾಯಕ)
  3. ಸೂರ್ಯಕುಮಾರ್‌ ಯಾದವ್‌ (ನಾಯಕ)
  4. ತಿಲಕ್‌ ವರ್ಮಾ (ಬ್ಯಾಟ್ಸ್‌ಮನ್‌)
  5. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌)
  6. ಅಕ್ಷರ್‌ ಪಟೇಲ್‌ (ಆಲ್‌ರೌಂಡರ್‌)
  7. ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌)
  8. ಕುಲ್ದೀಪ್‌ ಯಾದವ್‌ (ಸ್ಪಿನ್ನರ್‌)
  9. ಅರ್ಷದೀಪ್‌ ಸಿಂಗ್‌ (ವೇಗದ ಬೌಲರ್‌)
  10. ಜಸ್‌ಪ್ರೀತ್‌ ಬುಮ್ರಾ (ವೇಗದ ಬೌಲರ್‌)
  11. ವರುಣ್‌ ಚಕ್ರವರ್ತಿ (ಸ್ಪಿನ್ನರ್‌)

Asia Cup 2025: ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಯಿಂದ ಭಾರತಕ್ಕೆ ಸುಲಭ ತುತ್ತಾದ ಯುಎಇ!

ಪಂದ್ಯದ ವಿವರ

ಭಾರತ vs ಪಾಕಿಸ್ತಾನ

2025ರ ಏಷ್ಯಾ ಕಪ್‌, ಬಿ ಗುಂಪಿನ ಪಂದ್ಯ

ದಿನಾಂಕ: ಸೆಪ್ಟಂಬರ್‌ 14, 2025

ಸಮಯ: 08: 00ಕ್ಕೆ

ಸ್ಥಳ: ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ದುಬೈ

ನೇರ ಪ್ರಸಾರ: ಸೋನಿ ನೆಟ್‌ವರ್ಕ್ಸ್‌