ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಏಕದಿನ ವಿಶ್ವಕಪ್‌ನಲ್ಲಿ ಆಡ್ತಾರಾ? ಶುಭಮನ್‌ ಗಿಲ್‌ ಕೊಟ್ಟ ಉತ್ತರ ಹೀಗಿದೆ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ. ಆಸೀಸ್ ವಿರುದ್ಧದ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗುವುದು ಎನ್ನಲಾಗುತ್ತಿದೆ. ಇದರ ನಡುವೆ ನಾಯಕ ಶುಭಮನ್ ಗಿಲ್‌ ಏಕದಿನ ವಿಶ್ವಕಪ್ ಸಮಯದಲ್ಲೂ ಅವರು ತಂಡದ ಜೊತೆ ಇರಲಿದ್ದಾರೆ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.

ರೋಹಿತ್‌-ಕೊಹ್ಲಿಯ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಗಿಲ್‌!

ದುಬೈ: ಭಾರತ ಹಾಗೂ ಮತ್ತು ಆಸ್ಟ್ರೇಲಿಯಾ (IND vs AUS) ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್ 19 ರಂದು ಆರಂಭವಾಗಲಿದೆ. ಮುಂಬರುವ 2027ರ ಏಕದಿನ ವಿಶ್ವಕಪ್ (ODI World Cup 2025) ದೃಷ್ಟಿಯಿಂದ ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಇನ್ನು ಈ ಸರಣಿಯಲ್ಲಿ ಭಾರತ ಏಕದಿನ ತಂಡವನ್ನು ಶುಭಮನ್ ಗಿಲ್‌ (Shubman Gill) ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ತಂಡದಲ್ಲಿ ಆಟಗಾರರಾಗಿ ಅಷ್ಟೇ ಕಾಣಿಸಿಕೊಳ್ಳಲಿದ್ದಾರೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯವರು ಬಹಳ ದಿನಗಳ ನಂತರ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಉಭಯ ಆಟಗಾರರ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗುವುದು ಎನ್ನಲಾಗುತ್ತಿದೆ.

ಹಾಗಾಗಿ ರೋಹಿತ್ ಶರ್ಮಾ ಅವರಿಗೆ ಈ ಸರಣಿ ನಿರ್ಣಾಯಕವಾಗಿದೆ. ಏಕೆಂದರೆ 2027ರ ಏಕದಿನ ವಿಶ್ವಕಪ್​ ಪೂರ್ವ ತಯಾರಿಯ ದೃಷ್ಟಿಯಲ್ಲಿ ಭಾರತ ತಂಡವನ್ನು ರೂಪಿಸಬೇಕಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಿಳಿಸಿದ್ದಾರೆ. ಇದೇ ಕಾರಣದಿಂದಾಗಿ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದೆ ಹಾಗೂ ಅವರಿಗೆ ಈ 3 ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಅನಿವಾರ್ಯತೆ ಇದೆ. ಒಂದು ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಫಲರಾದರೆ, ನವೆಂಬರ್ ಮತ್ತು ಡಿಸೆಂಬರ್​ ತಿಂಗಳಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮತ್ತೊಂದು ಅವಕಾಶ ನೀಡಬಹುದು.

IND vs AUS: ಆಸ್ಟ್ರೇಲಿಯಾ ಸರಣಿಯಿಂದ ನನ್ನನ್ನು ಕೈ ಬಿಟ್ಟಿದ್ದೇಕೆ? ಮೊಹಮ್ಮದ್‌ ಶಮಿ ಪ್ರತಿಕ್ರಿಯೆ!

ಈ ಸರಣಿಯಲ್ಲೂ ರೋಹಿತ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರದಿದ್ದರೆ 2026ರ ಏಕದಿನ ವಿಶ್ವಕಪ್‌ ಟೂರ್ನಿಗೆ ಅವರನ್ನು ಆಯ್ಕೆ ಮಾಡುವುದು ಅನುಮಾನ. ಹೀಗಾಗಿಯೇ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳು ರೋಹಿತ್ ಶರ್ಮಾ ಅವರ​ ಭವಿಷ್ಯ ನಿರ್ಧರಿಸಲಿವೆ. ಇದರ ನಡುವೆ ಭಾರತ ತಂಡದ ನಾಯಕ ಗಿಲ್ ಈ ಸ್ಟಾರ್ ಜೋಡಿಯ ಕುರಿತು ಭಾರತ ತಂಡ ಹೊಂದಿರುವ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಗಿಲ್, ರೋಹಿತ್ ಮತ್ತು ವಿರಾಟ್ ಜೋಡಿ ಹೊಂದಿರುವ ಅನುಭವ ಭಾರತಕ್ಕೆ ನಿಜವಾಗಿಯೂ ಅಮೂಲ್ಯವಾದುದು ಮತ್ತು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಅವರು ಖಂಡಿತವಾಗಿಯೂ ನಮ್ಮ ಜೊತೆ ಇರಲಿದ್ದಾರೆ ಎಂದು ಮಹತ್ವದ ಸುಳಿವು ನೀಡಿದ್ದಾರೆ.

IND vs AUS: ರೋಹಿತ್‌ ಶರ್ಮಾ ಬಗ್ಗೆ ಬಿಸಿಸಿಐ ಸೆಲೆಕ್ಟರ್ಸ್‌ಗೆ ಎಚ್ಚರಿಕೆ ನೀಡಿದ ಮೊಹಮ್ಮದ್‌ ಕೈಫ್‌!

"ಅವರು ಹೊಂದಿರುವ ಅನುಭವ ಮತ್ತು ಭಾರತಕ್ಕಾಗಿ ಅವರು ಗೆದ್ದಿರುವ ಪಂದ್ಯಗಳು ನಿಜವಾಗಿಯೂ ಮೌಲ್ಯಯುತವಾಗಿವೆ. ಕೆಲವೇ ಆಟಗಾರರು ಈ ಕೌಶಲ ಮತ್ತು ಅನುಭವವನ್ನು ಒದಗಿಸುತ್ತಾರೆ. ಅವರು ಖಂಡಿತವಾಗಿಯೂ ಮಿಶ್ರಣದಲ್ಲಿದ್ದಾರೆ (ವಿಶ್ವಕಪ್ 2027 ಕ್ಕೆ)," ಎಂದು ಅವರು ಹೇಳಿದರು.

ನಾಯಕತ್ವದ ಬಗ್ಗೆ ಗಿಲ್‌ ಹೇಳಿದ್ದಿದು

ಭಾರತ ತಂಡವನ್ನು ಮತ್ತೊಂದು ಸ್ವರೂಪದಲ್ಲಿ ಮುನ್ನಡೆಸಲು ಸಿದ್ದರಾಗಿರುವ ಗಿಲ್, ನನಗೆ ನಾಯಕತ್ವ ಸಿಗುತ್ತದೆ ಅಂತ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ.

"ಏಕದಿನ ಪಂದ್ಯಗಳ ನಾಯಕತ್ವ ಘೋಷಣೆಯಾಗುವ ಮೊದಲೇ ನನಗೆ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಈ ಮಾದರಿಯಲ್ಲಿ ನನ್ನ ದೇಶವನ್ನು ಮುನ್ನಡೆಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಭವಿಷ್ಯವನ್ನು ಎದುರು ನೋಡುತ್ತಿದ್ದೇನೆ ಮತ್ತು ಸಾಧ್ಯವಾದಷ್ಟು ವರ್ತಮಾನದಲ್ಲಿರುತ್ತೇನೆ," ಶುಭಮನ್‌ ಗಿಲ್‌ ಭರವಸೆ ನೀಡಿದ್ದಾರೆ.