ನವದೆಹಲಿ: ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಹಾದಿಯಲ್ಲಿ ಯಾರ ಸಹಾನುಭೂತಿ ನನಗೆ ಬೇಡ ಎಂದು ಮಹಾರಾಷ್ಟ್ರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (Prithvi Shaw) ಹೇಳಿದ್ದಾರೆ. ಮುಂಬೈ ತಂಡವನ್ನು ಬಿಟ್ಟು ಮಹಾರಾಷ್ಟ್ರ (Maharashtra) ತಂಡಕ್ಕೆ ಬಂದ ಬಳಿಕ ಪೃಥ್ವಿ ಶಾ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಅವರು ಬುಚಿ ಬಾಬು ಆಹ್ವಾನಿತ ಟೂರ್ನಿಯ (Buchi Babu Invitational Tournament) ಪಂದ್ಯದಲ್ಲಿ ಶತಕವನ್ನು ಬಾರಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಅಂದ ಹಾಗೆ ಕಳೆದ ವರ್ಷ ಫಿಟ್‌ನೆಸ್ ಸಮಸ್ಯೆಯಿಂದ ಮುಂಬೈ ತಂಡದಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಎನ್‌ಒಸಿ ಪಡೆದಿದ್ದ ಪೃಥ್ವಿ ಶಾ, ಮಹಾರಾಷ್ಟ್ರ ತಂಡಕ್ಕೆ ಸ್ಥಳಾಂತರವಾಗಿದ್ದರು.
ಚೆನ್ನೈನ ಗುರುನಾನಕ್ ಕ್ರೀಡಾಂಗಣದಲ್ಲಿ ಛತ್ತೀಸಗಢ ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು ಹಾಗೂ ಶತಕವನ್ನು ಬಾರಿಸಿದರು. ಇದಾದ ಬಳಿಕ ಮಾತನಾಡಿದ ಪೃಥ್ವಿ ಶಾ, "ಯಾರ ಸಹಾನಭೂತಿ ನನಗೆ ಬೇಡ," ಎಂದು ಹೇಳಿದರು. ಆ ಮೂಲಕ ತಮ್ಮ ಬ್ಯಾಟ್ ಮಾಡತನಾಡಲಿದೆ ಎಂಬುದನ್ನು ಅವರು ತಿಳಿಸಿದ್ದರು.
ಬುಚಿಬಾಬು ಟ್ರೋಫಿ: ಮಹಾರಾಷ್ಟ್ರ ಪರ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿದ ಪೃಥ್ವಿ ಶಾ
"ನನ್ನ ಜೀವನದಲ್ಲಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ ಹಾಗಾಗಿ, ಮೊದಲಿನಿಂದಲೂ ಬರಲು ನನಗೆ ಯಾವುದೇ ಅಭ್ಯಂತರವಿಲ್ಲ. ನಾನು ಅಲ್ಲಿ ಮೇಲೆ ಇದ್ದೇನೆ, ನಾನು ಅಲ್ಲಿ ಕೆಳಗೆ ಇದ್ದೇನೆ, ನಾನು ಮತ್ತೆ ಮೇಲೆ ಬಂದಿದ್ದೇನೆ. ನನಗೆ ಅನಿಸಿದ ಹಾಗೆ ಎಲ್ಲವೂ ಸಾಧ್ಯವಿದೆ. ನಾನೊಬ್ಬ ಅತ್ಯಂತ ವಿಶ್ವಾಸದ ವ್ಯಕ್ತಿ, ನನ್ನ ಮೇಲೆ ಹಾಗೂ ನನ್ನ ಕೆಲಸದ ನೀತಿ ಶಾಸ್ತ್ರದ ಬಗ್ಗೆ ನನಗೆ ಬಲವಾದ ನಂಬಿಕೆ ಇದೆ. ಹಾಗಾಗಿ ಈ ಸೀಸನ್ ನನ್ನ ಪಾಲಿಗೆ ಹಾಗೂ ತಂಡದ ಪಾಲಿಗೆ ಅತ್ಯುತ್ತಮವಾಗಿ ಸಾಗಲಿದೆ ಎಂಬ ನಂಬಿಕೆ ನನಗೆ ಇದೆ," ಎಂದು ಪೃಥ್ವಿ ಶಾ ತಿಳಿಸಿದ್ದಾರೆ.
"ನಾನು ಯಾವುದನ್ನೂ ಬದಲಾವಣೆ ಮಾಡುವುದಿಲ್ಲ. ನನಗೆ ನನ್ನ ಮೂಲಭೂತ ಅಂಶಗಳಿಗೆ ಮರಳಬೇಕಷ್ಟೆ. ಅಂಡರ್ 19 ತಂಡದಲ್ಲಿ ಆಡುವಾಗಲೂ ನಾನು ಇದನ್ನೇ ಮಾಡಿದ್ದೆ, ಇದರ ಆಧಾರದ ಮೇಲೆ ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದೆ. ಇದೀಗ ಅದೇ ಹಾದಿಯಲ್ಲಿ ಸಾಗುತ್ತಿದ್ದೇನೆ. ಹೆಚ್ಚು ಅಭ್ಯಾಸ ನಡೆಸಬೇಕು, ಜಿಮ್, ಓಟ ಇದೆಲ್ಲವನ್ನೂ ನಾನು ಮಾಡಬೇಕಾಗಿದೆ. ಇದು ನನ್ನ ಪಾಲಿಗೆ ಸಣ್ಣ ವಿಷಯ ಹಾಗೂ ದೊಡ್ಡ ವಿಷಯವಲ್ಲ. ಇದನ್ನು ನಾನು 12 ಮತ್ತು 13ನೇ ವಯಸ್ಸಿನಿಂದ ಮಾಡಿಕೊಂಡು ಬರುತ್ತಿದ್ದೇನೆ,"ಎಂದು ಪೃಥ್ವಿ ಶಾ ಹೇಳಿದ್ದಾರೆ.
"ನಾನು ನಾನಾಗಿಯೇ ಇರಲು ಪ್ರಯತ್ನಿಸುತ್ತಿದ್ದೇನೆ ಮತ್ತು ನಿಜವಾಗಿಯೂ ಸಾಮಾಜಿಕ ಮಾಧ್ಯಮ ಅಥವಾ ಯಾವುದರಲ್ಲೂ ಮತ್ತು ಆ ರೀತಿಯ ಗೊಂದಲಗಳಲ್ಲಿರಲು ಪ್ರಯತ್ನಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ತುಂಬಾ ಕೆಟ್ಟದಾಗಿದೆ. ನಾನು ಅದನ್ನು ಬಳಸದಿದ್ದಾಗ ಅದು ಒಂದು ರೀತಿಯ ಶಾಂತಿಯುತವಾಗಿರುತ್ತದೆ. ಇದು ಯಾವಾಗಲೂ ನನಗೆ ಕಲಿಯುವುದರ ಬಗ್ಗೆ. ಮತ್ತು ನಾನು ಮೊದಲೇ ಹೇಳಿದಂತೆ, ನನ್ನ ಬಗ್ಗೆ ಮತ್ತು ನಾನು ಯಾರೆಂಬುದರ ಬಗ್ಗೆ ನನಗೆ ಸಾಕಷ್ಟು ವಿಶ್ವಾಸವಿದೆ," ಎಂದು ಬಲಗೈ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.
Buchi Babu 2025: ಮುಂಬೈ ತೊರೆದು ಮಹಾರಾಷ್ಟ್ರ ಪರ ಆಡಲು ಸಜ್ಜಾದ ಪೃಥ್ವಿ ಶಾ!
ಇದೀಗ ಪೃಥ್ವಿ ಶಾ ಅವರು ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ತೋರಲು ಎದುರು ನೋಡುತ್ತಿದ್ದಾರೆ. ಇಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸುವ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳಲು ಪೃಥ್ವಿ ಶಾ ಪ್ರಯತ್ನಿಸುತ್ತಿದ್ದಾರೆ.