ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Buchi Babu 2025: ಮುಂಬೈ ತೊರೆದು ಮಹಾರಾಷ್ಟ್ರ ಪರ ಆಡಲು ಸಜ್ಜಾದ ಪೃಥ್ವಿ ಶಾ!

ಮುಂಬೈ ತಂಡವನ್ನು ತೊರೆದಿರುವ ಭಾರತದ ಸ್ಟಾರ್‌ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರು ಮಹಾರಾಷ್ಟ್ರ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಅವರು ಇತ್ತೀಚೆಗೆ ತಾವು ದೀರ್ಘಾವಧಿ ಪ್ರತಿನಿಧಿಸಿದ್ದ ಮುಂಬೈ ತಂಡವನ್ನು ತೊರೆದಿದ್ದರು.

ಮಹಾರಾಷ್ಟ್ರ ಪರ ಪದಾರ್ಪಣೆ ಮಾಡಲು ಸಜ್ಜಾದ ಪೃಥ್ವಿ ಶಾ!

ಮಹಾರಾಷ್ಟ್ರ ಪರ ಆಡಲು ಸಜ್ಜಾಗುತ್ತಿರುವ ಪೃಥ್ವಿ ಶಾ.

Profile Ramesh Kote Aug 14, 2025 7:34 PM

ನವದೆಹಲಿ: ಭಾರತದ ಸ್ಟಾರ್‌ ಬ್ಯಾಟ್ಸ್‌ಮನ್‌ ಪೃಥ್ವಿ ಶಾ (Prithvi shaw) ಅವರು ದೇಶಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ (Maharashtra) ತಂಡವನ್ನು ಪ್ರತಿನಿಧಿಸಲು ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ಅಖಿಲ ಭಾರತೀಯ ಬುಚಿ ಬಾಬು ಆಹ್ವಾನಿತ ಟೂರ್ನಿಯ 17 ಸದಸ್ಯರ ಮಹಾರಾಷ್ಟ್ರ ತಂಡದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಸ್ಥಾನವನ್ನು ಪಡೆದಿದ್ದಾರೆ. ಪೃಥ್ವಿ ಶಾ ತಾವು ದೇಶಿ ಕ್ರಿಕೆಟ್‌ನಲ್ಲಿ ದೀರ್ಘಾವಧಿ ಕ್ರಿಕೆಟ್‌ ಆಡಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ಅವರು ಮುಂಬೈ (Mumbai) ತಂಡವನ್ನು ಬಿಟ್ಟು ಮಹಾರಾಷ್ಟ್ರ ತಂಡಕ್ಕೆ ಬಂದಿದ್ದಾರೆ.

ಕಳೆದ ದೇಶಿ ಕ್ರಿಕೆಟ್‌ ಆವೃತ್ತಿಯಲ್ಲಿ ಪೃಥ್ವಿ ಶಾ ಮುಂಬೈ ಪರ ವಿಫಲರಾಗಿದ್ದರು. ಅವರು ಫಿಟ್‌ನೆಸ್‌ ಸಮಸ್ಯೆಯನ್ನು ಎದುರಿಸಿದ್ದರಿಂದ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದರು. ಇದು ಅವರಿಗೆ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು. ಇದರಿಂದ ಅವರನ್ನು ರಣಜಿ ಟ್ರೋಫಿ ಹಾಗೂ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ತಂಡದಿಂದ ಕೈ ಬಿಡಲಾಗಿತ್ತು. ಇದರಿಂದ ಪೃಥ್ವಿ ಶಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ಪೃಥ್ವಿ ಶಾ ಮುಂಬೈ ತಂಡವನ್ನು ತೊರೆದಿದ್ದರು.

Ranji Trophy: ಮುಂಬೈ ತೊರೆದು ಮಹಾರಾಷ್ಟ್ರ ತಂಡಕ್ಕೆ ಸೇರಲು ಕಾರಣ ತಿಳಿಸಿದ ಪೃಥ್ವಿ ಶಾ!

ಆಗಸ್ಟ್‌ 18 ರಿಂದ ಸೆಪ್ಟಂಬರ್‌ 9ರ ವರೆಗೆ ಬುಚಿ ಬಾಬು ಆಹ್ವಾನಿತ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಅಂಕಿತ್‌ ಬಾವ್ನೆ ಮುನ್ನಡೆಸಲಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಋತುರಾಜ್‌ ಗಾಯಕ್ವಾಡ್‌ ಅವರು ಕೂಡ ಈ ತಂಡದಲ್ಲಿ ಆಡಲಿದ್ದಾರೆ. ಋತುರಾಜ್‌ ಗಾಯಕ್ವಾಡ್‌ ಅವರು ಕೊನೆಯ ಬಾರಿ ಭಾರತ ಎ ತಂಡದ ಪರ ಆಡಿದ್ದರು. ಅಂದ ಹಾಗೆ ಋತುರಾಜ್‌ ಗಾಯಕ್ವಾಡ್‌ ಹಾಗೂ ವಿಕೆಟ್‌ ಕೀಪರ್‌ ಸೌರಭ್‌ ನವಾಲೆ ಅವರು ಪಶ್ಚಿಮ ವಲಯದ ಪರ ಆಡಲು ತೆರಳಲಿದ್ದಾರೆ.

Prithvi Shaw: ಮುಂಬೈ ತೊರೆದು ಮಹಾರಾಷ್ಟ್ರ ತಂಡ ಸೇರಿದ ಪೃಥ್ವಿ ಶಾ

ಮಹಾರಾಷ್ಟ್ರ ತಂಡ: ಅಂಕಿತ್‌ ಬಾವ್ನೆ (ನಾಯಕ), ಋತುರಾಜ್‌ ಗಾಯಕ್ವಾಡ್‌, ಪೃಥ್ವಿ ಶಾ, ಸಿದ್ದೇಶ್‌ ವೀರ್‌, ಸಚಿನ್‌ ದಾಸ್‌, ಅರ್ಷಿನ್‌ ಕುಲಕರ್ಣಿ, ಹರ್ಷಲ್‌ ಕಾಟೆ, ಸಿದ್ದಾರ್ಥ್‌ ಮ್ಹಾತ್ರೆ, ಸೌರಭ್‌ ನವಾಲೆ (ವಿಕೆಟ್‌ ಕೀಪರ್‌), ಮಂದರ್‌ ಭಂಡಾರಿ (ವಿ.ಕೀ), ರಾಮಕೃಷ್ಣ ಘೋಷ್‌, ಮುಖೇಶ್‌ ಚೌಧರಿ, ಪ್ರದೀಪ್‌ ದಾಧೆ, ವಿಕ್ಕಿ ಒಸ್ವಾಲ್‌, ಹಿತೇಶ್‌ ವಾಲಂಜ್‌, ಪ್ರಶಾಂತ್‌ ಸೋಲಂಕಿ, ರಾಜವರ್ಧನ್‌ ಹಂಗರ್ಗೇಕರ್‌.