ಅಹಮದಾಬಾದ್: ವಿಶ್ವಕಪ್, ಐಪಿಎಲ್ ಟೂರ್ನಿ ಅಥವಾ ಇನ್ನ್ಯಾವುದೇ ದೊಡ್ಡ ಮಟ್ಟದ ಟೂರ್ನಿಗಳಲ್ಲಿ ನಾನು ಬೆಂಬಲಿಸುವ ತಂಡಗಳು ಸೋಲುತ್ತದೆ, ಆದ್ದರಿಂದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ ಎಂದು ಪಂಜಾಬ್ ಕಿಂಗ್ಸ್‌ನ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ (Virender Sehwag) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು (ಜೂನ್ 3) ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ನ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ಹಾಗೂ ಪಂಜಾಬ್ ಕಿಂಗ್ಸ್ ಒಂದು ಬಾರಿ ಫೈನಲ್‌ಗೆ ಪ್ರವೇಶ ಮಾಡಿದ್ದವು. ಆದರೆ, ಫೈನಲ್ ಗೆದ್ದು ಪ್ರಶಸ್ತಿ ಗೆಲ್ಲುವಲ್ಲಿ ಈ ಎರಡೂ ತಂಡಗಳು ಎಡವಿದ್ದವು. ಆದರೆ ಈ ಬಾರಿ ಎರಡು ತಂಡಗಳ ಆಟಗಾರರು ಟ್ರೋಫಿ ಗೆಲ್ಲುವ ಭರವಸೆಯನ್ನು ಅಭಿಮಾನಿಗಳಲ್ಲಿ ಮೂಡಿಸಿದ್ದಾರೆ.
RCB vs PBKS: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಅಹಮದಾಬಾದ್‌ಗೆ ಮರಳಿದ ಫಿಲ್ ಸಾಲ್ಟ್!
ಆರ್‌ಸಿಬಿ ಟ್ರೋಫಿ ಗೆಲ್ಲುತ್ತದೆ: ವೀರೇಂದ್ರ ಸೆಹ್ವಾಗ್
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟಿದಾರ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವ ಹಾಗೂ ಅನುಭವಿ ಆಟಗಾರರ ಸಂಯೋಜನೆ ಹೊಂದಿದ್ದು, ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ ಎಂದು ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ತಾನು ಆರ್‌ಸಿಬಿ ತಂಡವನ್ನು ಬೆಂಬಲಿಸಲು ಕಾರಣವೇನೆಂದು ಕೂಡ ಅವರು ತಿಳಿಸಿದ್ದಾರೆ.
"ಆರ್‌ಸಿಬಿ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸಬೇಕು ಎಂಬುದು ನನ್ನ ಭಾವನೆ. ನಾನು ನನ್ನ ಹಳೆಯ ಸೂತ್ರವನ್ನೇ ಅನುಸರಿಸುತ್ತೇನೆ. ಏಕೆಂದರೆ ನಾನು ಯಾವ ತಂಡವನ್ನು ಬೆಂಬಲಿಸುತ್ತೇನೋ ಆ ತಂಡ ಸೋಲುತ್ತದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಬೆಂಬಲಿಸಿದ್ದೆ, ಆದರೆ ಆ ತಂಡ ಸೋಲು ಕಂಡಿತ್ತು. ಕ್ವಾಲಿಫೈಯರ್ ಒಂದರಲ್ಲಿ ಪಂಜಾಬ್ ಕಿಂಗ್ಸ್, ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲು ಎದುರಿಸುವಲ್ಲಿ ಎಡವಿತ್ತು. ಕ್ವಾಲಿಫೈಯರ್ ಎರಡರ ಪಂದ್ಯದಲ್ಲಿ ನಾನು ಬೆಂಬಲಿಸಿದ್ದ ಮುಂಬೈ ಇಂಡಿಯನ್ಸ್ ತಂಡವು ಸೋಲೊಪ್ಪಿಕೊಂಡಿತ್ತು," ಎಂದು ಮಾಜಿ ಸ್ಪೋಟಕ ಆರಂಭಿಕ ತಿಳಿಸಿದ್ದಾರೆ.
RCB vs PBKS Final: ಗೆದ್ದು ಬಾ ಆರ್‌ಸಿಬಿ; ಅಭಿಮಾನಿಗಳಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ
ಭಾರತ ತಂಡ ಸೋಲು ಕಂಡಿತ್ತು
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ಭಾರತ ತಂಡವನ್ನು ಬೆಂಬಲಿಸಿದಾಗಲೂ ಆ ತಂಡಕ್ಕೆ ಸೋಲಾಗಿದೆ ಎಂದು ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
"ಇದೇ ರೀತಿಯ ಫಲಿತಾಂಶವನ್ನು ನಾನು ಟೀಮ್ ಇಂಡಿಯಾವನ್ನು ಬೆಂಬಲಿಸಿದಾಗಲೂ ಪಡೆದಿದ್ದೇನೆ. ನಾನು ಬಹಿರಂಗವಾಗಿ ಭಾರತ ತಂಡದ ಹೆಸರನ್ನು ಸೂಚಿಸಿದಾಗ ಆ ತಂಡವು ಸೋಲು ಕಂಡಿತ್ತು," ಎಂದು ಸೆಹ್ವಾಗ್ ತಿಳಿಸಿದ್ದಾರೆ.
RCB vs PBKS: ಐಪಿಎಲ್ ಫೈನಲ್‌ಗೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
ಐಪಿಎಲ್ ಟೂರ್ನಿಗೆ ಹೊಸ ಅಧಿಪತಿ
ಇಂದು (ಜೂನ್ 3) ನಡೆಯಲಿರುವ 18ನೇ ಆವೃತ್ತಿಯ ಫೈನಲ್ ಪಂದ್ಯದ ನಂತರ ಟ್ರೋಫಿಗೆ ಹೊಸ ಅಧಿಪತಿ ಸಿಗಲಿದೆ. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್, ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ತಂಡಕ್ಕೆ ಚೊಚ್ಚಲ ಚಾಂಪಿಯನ್ ಪಟ್ಟ ತಂದುಕೊಡಲು ಎದುರು ನೋಡುತ್ತಿದ್ದಾರೆ. ಬ್ಯಾಟಿಂಗ್‌ನಲ್ಲೂ ಉತ್ತಮ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 87* ರನ್ ಗಳಿಸಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದಾರೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲೂ ಎದುರಾಳಿ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಮೆರೆಯಲು ಎದುರು ನೋಡುತ್ತಿದ್ದಾರೆ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ (614 ರನ್) ಹಾಗೂ ಜಾಸ್ ಹೇಝಲ್‌ವುಡ್ (21 ವಿಕೆಟ್) ತಂಡದ ಗೆಲುವಿನಲ್ಲಿ ಪಾತ್ರ ವಹಿಸಲು ಹೊರಟಿದ್ದಾರೆ.