ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಅಹಮದಾಬಾದ್‌ಗೆ ಮರಳಿದ ಫಿಲ್‌ ಸಾಲ್ಟ್‌!

RCB vs PBKS IPL 2025 Final: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸಲಿವೆ. ಅಂದ ಹಾಗೆ ಫೈನಲ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಹೊರಬಿದ್ದಿದೆ.

RCB vs PBKS: ಆರ್‌ಸಿಬಿಗೆ ಮರಳಿದ ಫಿಲ್‌ ಸಾಲ್ಟ್‌!

ಆರ್‌ಸಿಬಿ ಓಪನರ್‌ ಫಿಲ್‌ ಸಾಲ್ಟ್‌ ಫೈನಲ್‌ಗೆ ಲಭ್ಯ.

Profile Ramesh Kote Jun 3, 2025 6:07 PM

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿಇದೀಗ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು (RCB vs PBKS) ಕಾದಾಟ ನಡೆಸಲಿವೆ. ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಫಿಲ್‌ ಸಾಲ್ಟ್‌ (Phil Salt) ಫೈನಲ್‌ ಹಣಾಹಣಿಗೆ ಅಲಭ್ಯರಾಗಲಿದ್ದಾರೆಂದು ಹಲವು ವರದಿಗಳಾಗಿದ್ದವು. ಆದರೆ, ಪಂಜಾಬ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ ಆಡಲಿದ್ದಾರೆಂದು ಮೂಲಗಳು ತಿಳಿಸಿವೆ. ಆರ್‌ಸಿಬಿ ಆರಂಭಿಕ ಮಂಗಳವಾರ ಮುಂಜಾನೆ 03 ಗಂಟೆಗೆ ಮರಳಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗಕ್ಕೆ ಬ್ಯಾಟಿಂಗ್‌ ಬಲ ಬರಲಿದೆ.

ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆದಿದ್ದ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಫಿಲ್‌ ಸಾಲ್ಟ್‌ 27 ಎಸೆತಗಳಲ್ಲಿ 56 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ ತಂಡದ 8 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದರು. ಈ ಪಂದ್ಯದ ಬಳಿಕ ತಮ್ಮ ಮಗುವಿನ ಜನನದ ಕಾರಣ ತವರಿಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಫೈನಲ್‌ಗೆ ಅಲಭ್ಯರಾಗಿದ್ದಾರೆಂದು ಹೇಳಲಾಗಿತ್ತು. ಆದರೆ, ಮೂಲಗಳ ಪ್ರಕಾರ ಫಿಲ್‌ ಸಾಲ್ಟ್‌ ಅಹಮದಾಬಾದ್‌ಗೆ ಮರಳಿದ್ದಾರೆ ಹಾಗೂ ಆರ್‌ಸಿಬಿ ಪರ ಕಣಕ್ಕೆ ಇಳಿಯಲಿದ್ದಾರೆಂದು ಹೇಳಲಾಗುತ್ತಿದೆ.

IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

"ಸೋಮವಾರ ಮಧ್ಯರಾತ್ರಿ (ಮಂಗಳವಾರ ಮುಂಜಾನಿ) ಫಿಲ್‌ ಸಾಲ್ಟ್‌ ಅವರು ಆಗಮಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಫೈನಲ್‌ ಪಂದ್ಯದ ನಿಮಿತ್ತ ಅವರು ಆರ್‌ಸಿಬಿಗೆ ಸೇರ್ಪಡೆಯಾಗಲಿದ್ದಾರೆ ಹಾಗೂ ಪ್ಲೇಯಿಂಗ್‌ XIನಲ್ಲಿ ಆಡಲಿದ್ದಾರೆ," ಎಂಬ ಮೂಲಗಳು ತಿಳಿಸಿರುವ ಬೆಳವಣಿಗೆಗಳನ್ನು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

2025ರ ಐಪಿಎಲ್‌ ಟೂರ್ನಿಯಲ್ಲಿ ಫಿಲ್‌ ಸಾಲ್ಟ್‌ ಅವರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಇವರು ಆಡಿದ 12 ಪಂದ್ಯಗಳಿಂದ 35.18ರ ಸರಾಸರಿಯಲ್ಲಿ 387 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 175.90ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಸಿಡಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ಧ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅವರು 27 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು 6 ಬೌಂಡರಿಗಳು ಹಾಗೂ 3 ಸಿಕ್ಸರ್‌ ಬಾರಿಸಿದ್ದಾರೆ.



ಟಿಮ್‌ ಡೇವಿಡ್‌ ಅಲಭ್ಯ

ಆರ್‌ಸಿಬಿ ಪಾಲಿಗೆ ಕಹಿ ಸುದ್ದಿ ಏನೆಂದರೆ ಆಸ್ಟ್ರೇಲಿಯಾ ಆಲ್‌ರೌಂಡರ್‌ ಟಿಮ್‌ ಡೇವಿಡ್‌ ಅವರು ಅಲಭ್ಯರಾಗಿದ್ದಾರೆ. ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದು, ಇನ್ನೂ ಗುಣಮುಖರಾಗುತ್ತಿದ್ದಾರೆ. ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಆಲ್‌ರೌಂಡರ್‌ ಲಿಯಾಂ ಲಿವಿಂಗ್‌ಸ್ಟೋನ್‌ ಅಥವಾ ನ್ಯೂಜಿಲೆಂಡ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಟಿಮ್‌ ಸೈಫರ್ಟ್‌ ಅವರು ಆಡಬಹುದು.

RCB vs PBKS: ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

2025ರ ಐಪಿಎಲ್‌ ಪೈನಲ್‌ಗೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜಾಶ್ ಹೇಝಲ್‌ವುಡ್, ಸುಯಶ್ ಶರ್ಮಾ

ಪಂಜಾಬ್‌ ಕಿಂಗ್ಸ್‌: ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಜಾಶ್ ಇಂಗ್ಲಿಸ್ (ವಿ.ಕೀ), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸೋಯ್ನಿಸ್‌, ಅಝ್ಮತ್‌ವುಲ್ಲಾ ಒಮರ್ಜಾಯ್, ಕೈಲ್ ಜೇಮಿಸನ್, ಅರ್ಷದೀಪ್‌ ಸಿಂಗ್, ಹರಪ್ರೀತ್‌ ಬ್ರಾರ್ / ಯುಜ್ವೇಂದ್ರ ಚಹಲ್, ವೈಶಾಖ್ ವಿಜಯಕುಮಾರ್