ಲಂಡನ್: ಜೂನ್ 28 ರಿಂದ ಪ್ರಾರಂಭವಾಗುವ ವೈಟ್-ಬಾಲ್ ಸರಣಿಗೆ ಇಂಗ್ಲೆಂಡ್ ಮಹಿಳಾ ತಂಡವು ಭಾರತ ಮಹಿಳಾ ತಂಡದ ಆತಿಥ್ಯ ವಹಿಸಲು ಸಜ್ಜಾಗಿದೆ. ಎರಡೂ ತಂಡಗಳು ಐದು ಟಿ20ಐ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಸರಣಿ ಆರಂಭಕ್ಕೂ ಮುನ್ನವೇ ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) 5 ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್ ಮಹಿಳಾ ತಂಡವನ್ನು ಪ್ರಕಟಿಸಿದೆ.
ನ್ಯಾಟ್ ಸ್ಕಿವರ್ ಬ್ರಂಟ್ ತಂಡವನ್ನು ಮುನ್ನಡೆಸಲಿದ್ದಾರೆ. ಎಡಗೈ ಸ್ಪಿನ್ನರ್ ಸೋಫಿ ಎಕ್ಲ್‌ಸ್ಟೋನ್ ವಾಪಸಾಗಿದ್ದಾರೆ. ಎಕ್ಲ್‌ಸ್ಟೋನ್ ತನ್ನ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಲುವಾಗಿ ಕ್ರೀಡೆಯಿಂದ ವಿರಾಮ ತೆಗೆದುಕೊಂಡಿದ್ದರು. ಈಗ ಟಿ20ಐ ಸರಣಿಯಲ್ಲಿ ಭಾರತೀಯ ಮಹಿಳೆಯರನ್ನು ಎದುರಿಸಲು ಸಜ್ಜಾಗಿದ್ದಾರೆ.
"ಎಕ್ಲ್‌ಸ್ಟೋನ್ ಮತ್ತೆ ತಂಡಕ್ಕೆ ಮರಳಿರುವುದು ತುಂಬಾ ಸಂತೋಷ ತಂದಿದೆ. ಅವರು ಮತ್ತೆ ತಂಡಕ್ಕೆ ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಕೋಚ್ ಎಡ್ವರ್ಡ್ಸ್ ತಿಳಿಸಿದರು.
ಇದಲ್ಲದೆ, ಎಡ್ವರ್ಡ್ಸ್ ಅವರು ಇಂಗ್ಲೆಂಡ್ ತಂಡ ಸರಣಿಯಲ್ಲಿ ಭಾರತವನ್ನು ಎದುರಿಸಲು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ನಾವು ನಿಜವಾಗಿಯೂ ಭಾರತವನ್ನು ಎದುರಿಸಲು ಎದುರು ನೋಡುತ್ತಿದ್ದೇವೆ, ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಮತ್ತು ಇದು ನಮಗೆ ಒಂದು ದೊಡ್ಡ ಪರೀಕ್ಷೆಯಾಗಲಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ WTC Final Day 4: ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವಿಗೆ ಮಳೆ ಅಡ್ಡಿ ಆತಂಕ!
ಇಂಗ್ಲೆಂಡ್ ಮಹಿಳಾ ತಂಡ
ನ್ಯಾಟ್ ಸ್ಕಿವರ್ ಬ್ರಂಟ್ (ನಾಯಕಿ), ಎಮ್ ಆರ್ಲಟ್, ಟಾಮಿ ಬ್ಯೂಮಂಟ್, ಲಾರೆನ್ ಬೆಲ್, ಅಲೈಸ್ ಕ್ಯಾಪ್ಸಿ, ಚಾರ್ಲಿ ಡೀನ್, ಸೋಫಿ ಡಂಕ್ಲಿ, ಸೋಫಿ ಎಕ್ಲ್ ಸ್ಟೋನ್, ಲಾರೆನ್ ಫಿಲರ್, ಆ್ಯಮಿ ಜೋನ್ಸ್, ಪೇಜ್ ಸ್ಕೋಲ್‌ಫೀಲ್ಡ್, ಲಿನ್ಸಿ ಸ್ಮಿತ್, ಡ್ಯಾನಿ ವ್ಯಾಟ್ ಹಾಜ್, ಐಸಿ ವೋಂಗ್