ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Final Day 4: ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವಿಗೆ ಮಳೆ ಅಡ್ಡಿ ಆತಂಕ!

ಪಂದ್ಯದಲ್ಲಿ ಗೆದ್ದರೆ ಮಾತ್ರ ಟ್ರೋಫಿ ನೀಡಲಾಗುವುದು. ಫಲಿತಾಂಶ ನಿರ್ಧಾರದ ಒಂದೇ ಕಾರಣಕ್ಕೆ ಮೀಸಲು ದಿನಕ್ಕೆ ಆಟ ವಿಸ್ತರಣೆಯೂ ಆಗುದಿಲ್ಲ. 5ನೇ ದಿನ ಸ್ಪಷ್ಟ ಫಲಿತಾಂಶ ಬಾರದೆ ಇದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲ್ಪಡುತ್ತದೆ. ಮಳೆಯಿಂದ ಒಂದು ದಿನದ ಆಟ ನಷ್ಟವಾದರೆ ಮಾತ್ರ ಮೀಸಲು ದಿನಕ್ಕೆ ಪಂದ್ಯ ವಿಸ್ತರಿಸಲ್ಪಡುತ್ತದೆ.

ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವಿಗೆ ಮಳೆ ಅಡ್ಡಿ ಆತಂಕ!

Profile Abhilash BC Jun 14, 2025 10:39 AM

ಲಂಡನ್‌: ಲಾರ್ಡ್ಸ್‌ನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ(Australia vs South Africa) ನಡುವಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಫೈನಲ್‌(WTC Final 2025) ಪಂದ್ಯದಲ್ಲಿ ಹರಿಣ ಪಡೆ ಐತಿಹಾಸಿಕ ಗೆಲುವಿನಂಚಿಗೆ ಬಂದು ನಿಂತಿದೆ. ಚೊಚ್ಚಲ ವಿಶ್ವಕಪ್‌ ಗೆಲ್ಲಲು ಇನ್ನು 69 ರನ್‌ ಅಗತ್ಯವಿದೆ. ಕ್ರಿಕೆಟ್ ವಿಶ್ವದಲ್ಲಿ ದುರಾದೃಷ್ಟವನ್ನೇ ಬೆನ್ನಿಗೆ ಕಟ್ಟಿಕೊಂಡಿರುವ, ಚೋಕರ್ಸ್‌ ಎಂದೇ ಕರೆಯಲ್ಪಡುವ ದಕ್ಷಿಣ ಆಫ್ರಿಕಾಕ್ಕೆ ಮತ್ತೆ ಸಂಕಷ್ಟವೊಂದು ಎದುರಾಗಿದೆ. ನಾಲ್ಕನೇ ದಿನದಾಟ ( WTC Final Day 4)ಶನಿವಾರ(ಜೂನ್ 14) ದಂದು ಹವಾಮಾನ ಇಲಾಖೆ ಮಳೆ ಆತಂಕ ವ್ಯಕ್ತಪಡಿಸಿವೆ.

ಅಕ್ಯೂವೆದರ್ ಪ್ರಕಾರ, 4 ನೇ ದಿನದ ಮೊದಲ ಅವಧಿಯಲ್ಲಿ 55 ಪ್ರತಿಶತ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ 60 ಪ್ರತಿಶತ ಮೋಡ ಕವಿದ ವಾತಾವರಣ ಮತ್ತು ಗಂಟೆಗೆ 48 ಕಿ.ಮೀ. ವೇಗದ ಗಾಳಿ ಬೀಸುತ್ತದೆ. ಜೂನ್ 13 ರಂದು ಹವಾಮಾನ ಆಟಕ್ಕೆ ಅನುಕೂಲಕರವಾಗಿದ್ದವು, ಆದರೆ 4 ನೇ ದಿನವು ಅದೇ ಸ್ಥಿರತೆ ಕಾಣುವುದು ಅಸಾಧ್ಯ ಎಂದಿದೆ. ಇದು ದಕ್ಷಿಣ ಆಫ್ರಿಕನ್ನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

ಪಂದ್ಯಕ್ಕೂ ಮುನ್ನ ಮಳೆಯಾದರೆ ಪಿಚ್‌ ಹೇಗೆ ವರ್ತಿಸಲಿದೆ ಎಂದು ಊಹೆ ಮಾಡುವುದು ಕೂಡ ಕಷ್ಟ. ಅದರಲ್ಲೂ ಮೊದಲ ಅವಧಿಯಲ್ಲಿ ವಿಕೆಟ್‌ ಬೀಳುವುದೇ ಹೆಚ್ಚು. ಹೀಗಾಗಿ ದಕ್ಷಿಣ ಆಫ್ರಿಕಾಗೆ ಸಂಕಷ್ಟ ಎದುರಾದದ್ದು ಸುಳ್ಳಲ್ಲ.

ಮಳೆ ನಿಯಮ ಹೇಗಿದೆ?

ಏಕದಿನ, ಟಿ20 ವಿಶ್ವಕಪ್‌ನಂತೆ ಫೈನಲ್‌ ಪಂದ್ಯ ರದ್ದಾದರೆ ಅಥವಾ ಪೂರ್ಣ ಫಲಿತಾಂಶ ಕಾಣದೇ ಇದ್ದರೆ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಆದರೆ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಈ ನಿಯಮ ಅನ್ವಯವಾಗುದಿಲ್ಲ. ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಅಥವಾ ಪಂದ್ರ ಡ್ರಾ, ಟೈಗೊಂಡರೆ ಟ್ರೋಪಿಯನ್ನು ಹಂಚಿ ಉಭಯ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ.

ಪಂದ್ಯದಲ್ಲಿ ಗೆದ್ದರೆ ಮಾತ್ರ ಟ್ರೋಫಿ ನೀಡಲಾಗುವುದು. ಫಲಿತಾಂಶ ನಿರ್ಧಾರದ ಒಂದೇ ಕಾರಣಕ್ಕೆ ಮೀಸಲು ದಿನಕ್ಕೆ ಆಟ ವಿಸ್ತರಣೆಯೂ ಆಗುದಿಲ್ಲ. 5ನೇ ದಿನ ಸ್ಪಷ್ಟ ಫಲಿತಾಂಶ ಬಾರದೆ ಇದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲ್ಪಡುತ್ತದೆ. ಮಳೆಯಿಂದ ಒಂದು ದಿನದ ಆಟ ನಷ್ಟವಾದರೆ ಮಾತ್ರ ಮೀಸಲು ದಿನಕ್ಕೆ ಪಂದ್ಯ ವಿಸ್ತರಿಸಲ್ಪಡುತ್ತದೆ.

ಇದನ್ನೂ ಓದಿ WTC final: 50 ವರ್ಷದ ವಿಶ್ವಕಪ್‌ ಫೈನಲ್‌ ದಾಖಲೆ ಮುರಿದ ಸ್ಟಾರ್ಕ್‌-ಹ್ಯಾಜಲ್‌ವುಡ್‌