Rinku Singh: ವಿನ್ನಿಂಗ್ ಬೌಂಡರಿ ಬಾರಿಸಿ ಭವಿಷ್ಯ ನಿಜವಾಗಿಸಿದ ರಿಂಕು ಸಿಂಗ್
ಪಂದ್ಯದ ನಂತರ ಮಾತನಾಡಿದ ರಿಂಕು ಸಿಂಗ್, "ಬೇರೇನೂ ಮುಖ್ಯವಲ್ಲ. ಈ ಒಂದು ಚೆಂಡು ಮುಖ್ಯ. ಒಂದು ಬೇಕಿತ್ತು. ನಾನು ಅದನ್ನು ಫೋರ್‌ಗೆ ಹೊಡೆದೆ. ನಾನು ಫಿನಿಷರ್ ಎಂದು ಎಲ್ಲರಿಗೂ ತಿಳಿದಿದೆ. ತಂಡ ಗೆದ್ದಿತು ಮತ್ತು ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ" ಎಂದು ಹೇಳಿದರು.

-

ದುಬೈ: ಕಾಕತಾಳೀಯ ಎಂಬಂತೆ, ರಿಂಕು ಸಿಂಗ್(Rinku Singh) ಅವರು ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನ ನುಡಿದಿದ್ದ ಭವಿಷ್ಯವೊಂದು ಅಕ್ಷರಶಃ ನಿಜವಾಗಿದೆ. ಹೌದು, ಏಷ್ಯಾಕಪ್ ಆರಂಭಕ್ಕೂ ಮೊದಲು ಟೀಮ್ ಇಂಡಿಯಾ ಆಟಗಾರರ ವಿಶೇಷ ಸಂದರ್ಶನ ನಡೆಸಲಾಗಿತ್ತು. ಈ ವೇಳೆ ರಿಂಕುಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ರಿಂಕು, ನಾನು ಬಾರಿಯ ಪಂದ್ಯಾವಳಿಯಲ್ಲಿ ವಿನ್ನಿಂಗ್ ರನ್ ಬಾರಿಸುವೆ ಎಂದಿದ್ದರು. ಅವರ ಈ ಮಾತು ನಿಜವಾಗಿದೆ.
ಭಾನುವಾರ ನಡೆದ ಪಾಕಿಸ್ತಾನ ಎದುರಿನ ಫೈನಲ್(Asia Cup 2025 final) ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿಗೆ 1 ರನ್ ಬೇಕಿದ್ದಾಗ ರಿಂಕು ಸಿಂಗ್ ಬೌಂಡರಿ ಬಾರಿಸಿ ತಂಡದ ಗೆಲುವನ್ನು ಸಾರಿದರು. ಸ್ವಾರಸ್ಯವೆಂದರೆ ರಿಂಕುಗೆ ಫೈನಲ್ ತನಕ ಆಡುವ ಅವಕಾಶ ಸಿಕ್ಕಿರಲಿಲ್ಲ. ಹಾರ್ದಿಕ್ ಪಾಂಡ್ಯ ತೊಡೆ ಸಂದು ನೋವಿನಿಂದ ಬಳಲಿದ ಕಾರಣ ಫೈನಲ್ ಪಂದ್ಯದಿಂದ ಹೊರಗುಳಿದರು. ಹೀಗಾಗಿ ರಿಂಕುಗೆ ತಂಡದಲ್ಲಿ ಅವಕಾಶ ಲಭಿಸಿತು. ರಿಂಕು ಎದುರಿಸಿದು ಕೂಡ ಒಂದೇ ಎಸೆತ. ಆ ಎಸೆತದಲ್ಲೇ ಅವರು ಭಾರತದ ವಿನ್ನಿಂಗ್ ರನ್ ಬಾರಿಸಿದರು. ಯೋಗವೊಂದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದಕ್ಕೆ ರಿಂಕು ಸಿಂಗ್ ಅವರ ಈ ಸೌಭಾಗ್ಯವೇ ಉತ್ತಮ ಉದಾಹರಣೆ.
ಪಂದ್ಯದ ನಂತರ ಮಾತನಾಡಿದ ರಿಂಕು ಸಿಂಗ್, "ಬೇರೇನೂ ಮುಖ್ಯವಲ್ಲ. ಈ ಒಂದು ಚೆಂಡು ಮುಖ್ಯ. ಒಂದು ಬೇಕಿತ್ತು. ನಾನು ಅದನ್ನು ಫೋರ್‌ಗೆ ಹೊಡೆದೆ. ನಾನು ಫಿನಿಷರ್ ಎಂದು ಎಲ್ಲರಿಗೂ ತಿಳಿದಿದೆ. ತಂಡ ಗೆದ್ದಿತು ಮತ್ತು ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ" ಎಂದು ಹೇಳಿದರು.
Rinku Singh had envisioned it before the Asia Cup — hitting the winning runs in the final. 🥹
— Jan Ki Baat (@jankibaat1) September 29, 2025
And he made it a reality. ❤️#AsiaCup2025 pic.twitter.com/s3332D29z4
2.6 ಕೋಟಿ ಬಹುಮಾನ
ಚಾಂಪಿಯನ್ ಭಾರತ ತಂಡಕ್ಕೆ 2.6 ಕೋಟಿ ಬಹುಮಾನ ಮೊತ್ತ ಲಭಿಸಿತು. ರನ್ನರ್ ಅಪ್ ಆದ ಪಾಕಿಸ್ತಾನಕ್ಕೆ 1.3 ಕೋಟಿ ಸಿಕ್ಕಿತು. ಸರಣಿ ಶ್ರೇಷ್ಠ ಆಟಗಾರ ಅಭಿಷೇಕ್ ಶರ್ಮಗೆ 12 ಲಕ್ಷ ಲಭಿಸಿತು. ಅಭಿಷೇಕ್ 7 ಪಂದ್ಯಗಳಿಂದ 314 ರನ್ ಬಾರಿಸಿದ್ದರು.