ಮ್ಯಾಂಚೆಸ್ಟರ್: ಇನ್ನಿಂಗ್ಸ್ ಸೋಲಿನ ಭೀತಿಗೆ ಒಳಗಾಗಿದ್ದರೂ ಅಪ್ರತಿಮ ಹೋರಾಟ ಪ್ರದರ್ಶಿಸಿದ ಭಾರತ ತಂಡ, ಭಾನುವಾರ ಕೊನೆಗೊಂಡ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್(IND vs ENG 4th Test) ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದರೊಂದಿಗೆ ಸರಣಿ ಸೋಲಿನ ಭೀತಿಯಿಂದ ಪಾರಾಗಿದೆ. ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್(Ben Stokes) ಡ್ರಾ ಆಫರ್ ನೀಡಿರೂ ಇದನ್ನೂ ಜಡೇಜ-ಸುಂದರ್ ತಿರಸ್ಕರಿಸಿ ಘಟನೆ ಕೂಡ ನಡೆಯಿತು.
ಹೌದು, ದಿನದಾಟದಲ್ಲಿ 15 ಓವರ್‌ಗಳು ಬಾಕಿ ಇರುವಾಗಲೇ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಡ್ರಾ ಆಫರ್ ನೀಡಿದರು. ಆಗ ಜಡೇಜಾ 89, ಸುಂದರ್ 80 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಸ್ಟೋಕ್ಸ್ ಡ್ರಾ ಮಾಡಲು ಹಸ್ತಾಲಾಘವಕ್ಕೆ ಮುಂದಾದರೂ, ಜಡೇಜಾ-ಸುಂದರ್ ಒಪ್ಪಲಿಲ್ಲ. ಇದು ಇಂಗ್ಲೆಂಡ್ ತಂಡದ ಆಟಗಾರರ ಅಸಮಾಧಾನಕ್ಕೂ ಕಾರಣವಾಯಿತು. ಇದೇ ಕಾರಣಕ್ಕೆ ಸ್ಟೋಕ್ಸ್ ಅರೆ ಕಾಲಿಕ ಬೌಲರ್‌ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್‌ಗೆ ಬೌಲಿಂಗ್ ನೀಡಿದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಜಡೇಜಾ ಮತ್ತು ಸುಂದರ್ ಸತತ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಬಿಸಿ ಮುಟ್ಟಿಸಿದರು. ಪಂದ್ಯ ಮುಂದುವರಿಯಿತು. ಬಳಿಕ 5 ಓವರ್ ಆಡಿ, ಇಬ್ಬರೂ ಶತಕ ಸಿಡಿಸಿದ ನಂತರ ಪಂದ್ಯ ಡ್ರಾಗೊಳಿಸಲಾಯಿತು.
ಪಂದ್ಯದ ಬಳಿಕ ಸ್ಟೋಕ್ಸ್ ವರ್ತನೆಯನ್ನು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತೀವ್ರವಾಗಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಒಬ್ಬರು 90 ರನ್, ಇನ್ನೊಬ್ಬರು 85 ರನ್ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅವರು ಶತಕಕ್ಕೆ ಅರ್ಹರಲ್ಲವೇ? ಎಂದು ಗಂಭೀರ್ ಪ್ರಶ್ನಿಸಿದರು.
"If you want a hundred, you should have batted like it earlier"
— Sportstar (@sportstarweb) July 27, 2025
"You're going to get a Test hundred against Harry Brook & Ben Duckett" #ENGvIND | #ManchesterTest pic.twitter.com/KPLjfdUoaL
ʼಇಂಗ್ಲೆಂಡ್ ಕೂಡ ಅದೇ ಪರಿಸ್ಥಿತಿಯಲ್ಲಿದ್ದರೆ ಅವರು ಹೊರನಡೆಯುತ್ತಿದ್ದರಾ? ಇಂಗ್ಲೆಂಡ್ನ ಯಾರಾದರೂ ಬ್ಯಾಟರ್ 90 ಅಥವಾ 85 ರನ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದರೆ ಅವರು ಶತಕ ತಪ್ಪಿಸಿಕೊಳ್ಳಲು ನಿರ್ಧರಿಸುತ್ತಿದ್ದರೆ? ಅದು ಅವರ ಆಯ್ಕೆ. ಅವರು ಆ ರೀತಿಯಲ್ಲಿ ಆಡಲು ಬಯಸಿದರೆ, ಅದು ಅವರ ಆಯ್ಕೆ. ಆ ಇಬ್ಬರು ವ್ಯಕ್ತಿಗಳು ಶತಕಕ್ಕೆ ಅರ್ಹರುʼ ಎಂದು ನಾನು ಭಾವಿಸುತ್ತೇನೆ ಎಂದು ಗಂಭೀರ್ ಹೇಳಿದರು.
ಇದನ್ನೂ ಓದಿ IND vs ENG 4th Test: ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ