ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 4th Test: ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಟೀಮ್‌ ಇಂಡಿಯಾ

ನಾಲ್ಕನೇ ಟೆಸ್ಟ್‌ನಲ್ಲಿ ಜಡೇಜಾ, ಗಿಲ್‌ ಮತ್ತು ಸುಂದರ್‌ ಶತಕ ಬಾರಿಸುವ ಮೂಲಕ ಭಾರತೀಯ ಆಟಗಾರರು ಈ ಸರಣಿಯಲ್ಲಿ 11 ಶತಕ ಸಿಡಿಸಿದ ಸಾಧನೆ ಮಾಡಿದರು. ಇದು ತಂಡದ ಜಂಟಿ ಗರಿಷ್ಠ ದಾಖಲೆ. 1978-19ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ತವರಿನ ಸರಣಿಯಲ್ಲೂ ಟೀಂ ಇಂಡಿಯಾ ಆಟಗಾರರಿಂದ 11 ಶತಕ ದಾಖಲಾಗಿದ್ದವು.

ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಟೀಮ್‌ ಇಂಡಿಯಾ

Profile Abhilash BC Jul 28, 2025 9:34 AM

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ(IND vs ENG 4th Test) ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಆಡಿದ 4 ಪಂದ್ಯಗಳಲ್ಲಿ ಭಾರತ ತಂಡ(team india) 7 ಬಾರಿ 350+ ರನ್‌ ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಹಿಂದಿಕ್ಕಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡ 3 ಸರಣಿಗಳಲ್ಲಿ ತಲಾ 6 ಬಾರಿ ಈ ಸಾಧನೆ ಮಾಡಿತ್ತು. 1920/21, 1948 ಹಾಗೂ 1989ರಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಸರಣಿಗಳಲ್ಲಿ ಆಸೀಸ್‌ ಈ ದಾಖಲೆ ಬರೆದಿತ್ತು. ಅದನ್ನು ಭಾರತ ಈಗ ಮುರಿದಿದೆ.

ನಾಲ್ಕನೇ ಟೆಸ್ಟ್‌ನಲ್ಲಿ ಜಡೇಜಾ, ಗಿಲ್‌ ಮತ್ತು ಸುಂದರ್‌ ಶತಕ ಬಾರಿಸುವ ಮೂಲಕ ಭಾರತೀಯ ಆಟಗಾರರು ಈ ಸರಣಿಯಲ್ಲಿ 11 ಶತಕ ಸಿಡಿಸಿದ ಸಾಧನೆ ಮಾಡಿದರು. ಇದು ತಂಡದ ಜಂಟಿ ಗರಿಷ್ಠ ದಾಖಲೆ. 1978-19ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ತವರಿನ ಸರಣಿಯಲ್ಲೂ ಟೀಂ ಇಂಡಿಯಾ ಆಟಗಾರರಿಂದ 11 ಶತಕ ದಾಖಲಾಗಿದ್ದವು. ಈ ಸರಣಿಯಲ್ಲಿ ಗಿಲ್, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಜಡೇಜಾ ತಲಾ 400+ ರನ್‌ ಗಳಿಸಿದ್ದಾರೆ. ಟೆಸ್ಟ್‌ ಸರಣಿಯೊಂದರಲ್ಲಿ ಭಾರತದ ನಾಲ್ವರು ಈ ಸಾಧನೆ ಮಾಡಿದ್ದು ಇದೇ ಮೊದಲು.

ಒಟ್ಟಾರೆಯಾಗಿ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ 10 ಟೆಸ್ಟ್‌ ಪಂದ್ಯಗಳಲ್ಲಿ 11 ಭಾರತೀಯರು ಶತಕ ಸಿಡಿಸಿದ್ದಾರೆ. ಮುಷ್ತಾಕ್ ಅಲಿ ಅವರು ಈ ಮೈದಾನದಲ್ಲಿ ಮೊದಲ ಟೆಸ್ಟ್‌ ಶತಕ ಬಾರಿಸಿದ ಭಾರತೀಯ. 1936 ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅವರು ಈ ಸಾಧನೆಗೈದಿದ್ದರು.

ಇದನ್ನೂ ಓದಿ ENG vs IND: ಅಂತಿಮ ಟೆಸ್ಟ್‌ನಿಂದ ಹೊರಬಿದ್ದ ರಿಷಭ್ ಪಂತ್; ಎನ್. ಜಗದೀಶನ್ ಬದಲಿ ಆಟಗಾರ

ಮ್ಯಾಂಚೆಸ್ಟರ್‌ನಲ್ಲಿ ಶತಕ ಬಾರಿಸಿದ ಭಾರತೀಯರು(ಟೆಸ್ಟ್‌ನಲ್ಲಿ)

ಮುಷ್ತಾಕ್ ಅಲಿ-112 ರನ್‌ (1936)

ವಿಜಯ್‌ ಮರ್ಚಂಟ್‌-114 ರನ್‌ (1936)

ಪಾಲಿ ಉಮ್ರಿಗರ್‌-112 ರನ್‌ (1959)

ಅಬ್ಬಾಸ್ ಅಲಿ ಬೇಗ್- 118 ರನ್‌ (1959)

ಸುನಿಲ್ ಗವಾಸ್ಕರ್-101 ರನ್‌ (1974)

ಸಂದೀಪ್ ಪಾಟೀಲ್-129 ರನ್‌ (1982)

ಮೊಹಮ್ಮದ್‌ ಅಜರುದ್ದೀನ್‌-179 ರನ್‌ (1982)

ಸಚಿನ್‌ ತೆಂಡೂಲ್ಕರ್‌-119* ರನ್‌ (1990)

ಶುಭಮನ್‌ ಗಿಲ್‌-103 ರನ್‌ (2025)

ರವೀಂದ್ರ ಜಡೇಜಾ-107*ರನ್‌ (2025)

ವಾಷಿಂಗ್ಟನ್‌ ಸುಂದರ್‌-101*ರನ್‌ (2025)