ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಕದಿನ ರ‍್ಯಾಂಕಿಂಗ್: ಅಗ್ರ 5ರಲ್ಲಿ ಮುಂದುವರಿದ ಗಿಲ್, ರೋಹಿತ್, ಕೊಹ್ಲಿ

ಬೌಲರ್‌ಗಳ ವಿಭಾಗದಲ್ಲಿ ಭಾರತದ ಕುಲದೀಪ್‌ ಯಾದವ್‌ 650 ಅಂಕದೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಜಡೇಜ 616 ಅಂಕ ಪಡೆದು 9ನೇ ಕ್ರಮಾಂಕದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ ಮಹರಾಜ್‌ ಮತ್ತು ಶ್ರೀಲಂಕಾದ ಮಹೀಶ ತೀಕ್ಷಣ ತಲಾ 671 ಪಾಯಿಂಟ್‌ಗಳನ್ನು ಹೊಂದಿದ್ದು, ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ದುಬೈ: ಐಸಿಸಿ ನೂತನ ಏಕದಿನ( ICC ODI Rankings) ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರತದ ಶುಭಮನ್ ಗಿಲ್‌, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಅಗ್ರ ಐದರೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶುಭಮನ್‌ ಗಿಲ್‌ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್‌ ಶರ್ಮ ಎರಡನೇ ವಿರಾಟ್ 4ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಪ್ರಮುಖ ಬ್ಯಾಟರ್‌ ಬಾಬರ್‌ ಅಜಂ ಮೂರನೇ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಭಾರತದ ಕುಲದೀಪ್‌ ಯಾದವ್‌ 650 ಅಂಕದೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಜಡೇಜ 616 ಅಂಕ ಪಡೆದು 9ನೇ ಕ್ರಮಾಂಕದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ ಮಹರಾಜ್‌ ಮತ್ತು ಶ್ರೀಲಂಕಾದ ಮಹೀಶ ತೀಕ್ಷಣ ತಲಾ 671 ಪಾಯಿಂಟ್‌ಗಳನ್ನು ಹೊಂದಿದ್ದು, ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಕಳೆದ ವಾರ ಐಸಿಸಿ ಏಕದಿನ ರ‍್ಯಾಂಕಿಂಗ್‌ ಪರಿಷ್ಕೃತಗೊಂಡಾಗ ಕೊಹ್ಲಿ ಹಾಗೂ ರೋಹಿತ್ ಹೆಸರು ಕೂಡ ಮಾಯವಾಗಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಜತೆಗೆ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು. ಬಳಿಕ ವೆಬ್‌ಸೈಟ್‌ನಲ್ಲಿ ಆದ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಐಸಿಸಿ ಸ್ಪಷ್ಟನೆ ನೀಡಿತ್ತು. ರೋಹಿತ್‌ ಮತ್ತು ಕೊಹ್ಲಿ ಕಳೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ಭಾರತ ಪರ ಯಾವುದೇ ಪಂದ್ಯ ಆಡಿಲ್ಲ. ಉಭಯ ಆಟಗಾರರು ಟಿ20 ಮತ್ತು ಟೆಸ್ಟ್‌ಗೆ ಈಗಾಗಲೇ ನಿವೃತ್ತಿ ಹೇಳಿರುವ ಕಾರಣ ಏಕದಿನದಲ್ಲಿ ಮಾತ್ರ ಆಡುತ್ತಿದ್ದಾರೆ.

ಟಾಪ್ 5 ಬ್ಯಾಟರ್‌ಗಳು

ಶುಭಮನ್ ಗಿಲ್‌– 784 ಪಾಯಿಂಟ್‌

ರೋಹಿತ್‌ ಶರ್ಮಾ-756 ಪಾಯಿಂಟ್‌

ಬಾಬರ್ ಅಜಂ-739 ಪಾಯಿಂಟ್‌

ವಿರಾಟ್‌ ಕೊಹ್ಲಿ– 736 ಪಾಯಿಂಟ್‌

ಡೆರಿಲ್‌ ಮಿಚೆಲ್‌–720 ಪಾಯಿಂಟ್‌

ಇದನ್ನೂ ಓದಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಲವಾದ ಕಾರಣವನ್ನು ತಿಳಿಸಿದ ರೋಹಿತ್‌ ಶರ್ಮಾ!

ಟಾಪ್‌-5 ಬೌಲರ್‌ಗಳು

ಕೇಶವ ಮಹರಾಜ್‌ –671 ಪಾಯಿಂಟ್‌

ಮಹೀಶ ತೀಕ್ಷಣ–671 ಪಾಯಿಂಟ್‌

ಕುಲದೀಪ್‌ ಯಾದವ್‌-650 ಪಾಯಿಂಟ್‌

ಬರ್ನಾರ್ಡ್‌ ಸ್ಕಾಲ್ಟ್ಜ್‌–644 ಪಾಯಿಂಟ್‌

ರಶೀದ್‌ ಖಾನ್‌– 640 ಪಾಯಿಂಟ್‌