ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ತಮ್ಮ ಕ್ರಿಕೆಟ್ ವೃತ್ತಿಜೀವನ ಮಾತ್ರವಲ್ಲದೆ, ವೈಯಕ್ತಿಕ ಜೀವನದ ಸುದ್ದಿಗಳಿಂದಲೂ ಪ್ರಚಲಿತದಲ್ಲಿರುತ್ತಾರೆ. ಅವರ ರಿಲೇಷನ್‌ಷಿಪ್ ಸ್ಟೇಟಸ್‌ಗಳು ಆಗಾಗ ಗಮನಸೆಳೆಯುತ್ತಿರುತ್ತದೆ. ಇದೀಗ ಪಾಂಡ್ಯ ಅವರು ಮಾಡೆಲ್ ಮಹಿಕಾ ಶರ್ಮಾ(Mahieka Sharma) ಜತೆ ಡೇಟಿಂಗ್ ಆರಂಭಿಸಿದ್ದು ವಿದೇಶದಲ್ಲಿ ಜತೆಯಾಗೊರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಶೀಘ್ರದಲ್ಲೇ ಮಹಿಕಾ ಅವರನ್ನು ವಿವಾಹವಾಗುವ ಸುಳಿವನ್ನು ಕೂಡ ನೀಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಪಾಂಡ್ಯ ಮತ್ತು ಮಹಿಕಾ ಅತ್ಯಂತ ರೋಮ್ಯಾಂಟಿಕ್ ಆಗಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಇಬ್ಬರೂ ಒಟ್ಟಿಗೆ ಮತ್ತು ಮೋಜು ಮಸ್ತಿ ಮಾಡುತ್ತಿರುವುದನ್ನು ಕಾಣಬಹುದು. ಈ ನಡುವೆ, ಮಹಿಕಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿಯನ್ನು ಹಂಚಿಕೊಂಡಿದ್ದಾರೆ, ಇದು ಎಲ್ಲರ ಗಮನ ಸೆಳೆಯುತ್ತಿದೆ. ಮಹಿಕಾ ತನ್ನ ಸ್ನೇಹಿತೆಯ ಸ್ಟೋರಿ ಹಂಚಿದ್ದಾರೆ. ಇದರಲ್ಲಿ ಮಹಿಕಾಳ ಸ್ನೇಹಿತೆ ಲಕ್ಮೆ ಫ್ಯಾಷನ್ ವೀಕ್ ಸಮಯದಲ್ಲಿ ದೆಹಲಿಯಲ್ಲಿ ಮಹಿಕಾಳನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ Hardik Pandya: ವದಂತಿಯ ಮಧ್ಯೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಹಿಕಾ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ, ಹಾರ್ದಿಕ್ ಈಗ ಮತ್ತೊಂದು ಮದುವೆಯಾಗಲು ನಿರ್ಧರಿಸಿದಂತಿದೆ. ಈ ಹಿಂದೆ ಪಾಂಡ್ಯ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಡೇಟಿಂಗ್ ನಡೆಸಿ ಮಗುವಿನ ತಂದೆಯಾದ ಬಳಿಕ ಮದುವೆಯಾಗಿದ್ದರು. ಇದೀಗ ಮಹಿಕಾ ಶರ್ಮಾ ಜತೆಯೂ ಪಾಂಡ್ಯ, ಮಗುವಾದ ಬಳಿಕ ಮದುವೆಯಾಗಲಿದ್ದಾರಾ ಅಥವಾ ಇದಕೂ ಮೊದಲೇ ಮದುವೆಯಾಗಲಿದ್ದಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಪಾಂಡ್ಯ ಮತ್ತು ಮಹಿಕಾ ಶರ್ಮಾ
ಮಹಿಕಾ ಶರ್ಮಾ ಮಾಡೆಲ್ ಮತ್ತು ಯೋಗ ಟ್ರೈನರ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.