ದುಬೈ: ಏಷ್ಯಾ ಕಪ್ 2025ರ(Asia Cup 2025 Final) ಪಾಕಿಸ್ತಾನ ವಿರುದ್ಧದ ಬಹುನಿರೀಕ್ಷಿತ ಫೈನಲ್‌ಗೂ(India vs Pakistan final) ಮೊದಲು, ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಶುಕ್ರವಾರ, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಭಾರತದ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡು(Hardik Pandya injury) ಕೇವಲ ಒಂದು ಓವರ್ ಬೌಲಿಂಗ್ ಮಾಡಿ ಮೈದಾನದಿಂದ ಹೊರನಡೆದಿದ್ದರು. ಇಈಗ ಅವರು ಫೈನಲ್‌ನಲ್ಲಿ ಆಡಲಿದ್ದಾರಾ ಎಂಬ ಅನುಮಾನ ಮೂಡಿದೆ.
ಶ್ರೀಲಂಕಾದ ಚೇಸಿಂಗ್ ವೇಳೆ ಭಾರತ ಪರ ಮೊದಲ ಓವರ್ ಎಸೆದಿದ್ದ ಪಾಂಡ್ಯ ಈ ಓವರ್‌ನಲ್ಲಿಯೇ ಪಾಂಡ್ಯ ಶ್ರೀಲಂಕಾದ ಆರಂಭಿಕ ಆಟಗಾರ ಕುಶಾಲ್ ಮೆಂಡಿಸ್ ಅವರ ವಿಕೆಟ್ ಪಡೆದಿದರು. ಆದಾಗ್ಯೂ, ಓವರ್‌ನ ಕೊನೆಯ ಎಸೆತದಲ್ಲಿ ತೊಡೆ ನೋವಿನಿಂದ ಮೈದಾನದಿಂದ ಹೊರನಡೆದರು. ಪಂದ್ಯದ ಉಳಿದ ಭಾಗಕ್ಕೆ ಅವರು ಹಿಂತಿರುಗಲಿಲ್ಲ. ಇದು ಫೈನಲ್‌ಗೆ ಮುಂಚಿತವಾಗಿ ಕಳವಳವನ್ನು ಉಂಟುಮಾಡಿದೆ.
'ದುಬೈನ ತೇವಾಂಶದ ಪರಿಸ್ಥಿತಿಯಿಂದ ಪಾಂಡ್ಯಗೆ ನೋವು ಕಾಣಿಸಿಕೊಂಡಿದೆ. ಶನಿವಾರ ಅವರ ಫಿಟ್ನೆಸ್ ಅನ್ನು ನಿರ್ಣಯಿಸಿದ ನಂತರ ಫೈನಲ್‌ಗೆ ಅವರ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಭಾರತ ತಂಡದ ಬೌಲಿಂಗ್ ಕೋ ಮಾರ್ನೆ ಮಾರ್ಕೆಲ್, ಲಂಕಾ ಪಂದ್ಯವನ್ನು ಗೆದ್ದ ನಂತರ ಮಾಹಿತಿ ನೀಡಿದರು.
ಒಂದೊಮ್ಮೆ ಪಾಂಡ್ಯ ಅಲಭ್ಯರಾದರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಪಾಂಡ್ಯ ಆಡಿದ ಎಲ್ಲ ಪಂದ್ಯಗಳಲ್ಲಿ ವಿಕೆಟ್ ಟೇಕರ್ ಆಗಿದ್ದರು. ಅದರಲ್ಲೂ ಅವರು ಮೊಲ ಓವರ್‌ನಲ್ಲೇ ಹೆಚ್ಚಾಗಿ ವಿಕೆಟ್ ಬೇಡೆಯಾಡುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರು. ಜತೆಗೆ ಎದುರಾಳಿ ತಂಡದ ಮೇಲೆ ಒತ್ತಡ ಹೇರುತ್ತಿದ್ದರು.
ಇದನ್ನೂ ಓದಿ Asia Cup 2025 Final: ಫೈನಲ್‌ಗೂ ಮುನ್ನ ಭಾರತಕ್ಕೆ ಅದೃಷ್ಟ ತಂದ ಟೈ!