Asia Cup 2025 Final: ಫೈನಲ್‌ಗೂ ಮುನ್ನ ಭಾರತಕ್ಕೆ ಅದೃಷ್ಟ ತಂದ ಟೈ!
ಏಷ್ಯಾ ಕಪ್ ಚರಿತ್ರೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಇಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ!. ಈ ಬಾರಿಯ ಪಂದ್ಯಾವಳಿಯಲ್ಲಿ ಅದು ಸಂಭವಿಸಿದೆ. ಲೀಗ್ ಮತ್ತು ಸೂಪರ್-4 ಪಂದ್ಯಗಳಲ್ಲಿ ಪಾಕ್‌ಗೆ ಸೋಲಿನ ರುಚಿ ತೋರಿಸಿದ ಭಾರತ ಇದೀಗ ಪೈನಲ್‌ನಲ್ಲಿಯೂ ಸೋಲುಣಿಸುವ ತವಕದಲ್ಲಿದೆ. ಆದರೆ ಪಾಕ್ ಸೇಡು ತೀರಿಸುವ ಕಾತರದಲ್ಲಿದೆ.

-

ದುಬೈ: ಭಾನುವಾರ ನಡೆಯುವ ಏಷ್ಯಾಕಪ್(Asia Cup 2025) ಫೈನಲ್ ಪಂದ್ಯಕ್ಕೂ ಮುನ್ನ ಶ್ರೀಲಂಕಾ(IND vs SL) ವಿರುದ್ಧ ಸೋಲಿನಿಂದ ಪಾರಾಗಿ ಸೂಪರ್ ಗೆಲುವು ಸಾಧಿಸಿದ ಭಾರತಕ್ಕೆ ಈ ಗೆಲುವು ಅದೃಷ್ಟ ತಂದಿದೆ. ಫೈನಲ್‌ಗೆ ಮುನ್ನವೇ ಭಾರತ(Team India) ಕಪ್ ಗೆಲ್ಲಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಹೌದು, ವಿಶ್ವಕಪ್ ಅಥವಾ ಏಷ್ಯಾಕಪ್‌ನಲ್ಲಿ ಭಾರತ ತಾನಾಡಿದ ಪಂದ್ಯಗಳು ಟೈ ಆದಾಗಲೆಲ್ಲಾ ಚಾಂಪಿಯನ್ ಆಗಿದೆ. 2007ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ, 2011ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್, 2018ರ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯ ಟೈ ಆದಾಗ ಭಾರತ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ಭಾರತಕ್ಕೆ ಅದೃಷ್ಟ ಒಲಿಯುತ್ತಾ ಎನ್ನುವುದು ಭಾನುವಾರ ತಿಳಿಯಲಿದೆ.
ಏಷ್ಯಾ ಕಪ್ ಚರಿತ್ರೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಇಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ!. ಈ ಬಾರಿಯ ಪಂದ್ಯಾವಳಿಯಲ್ಲಿ ಅದು ಸಂಭವಿಸಿದೆ. ಲೀಗ್ ಮತ್ತು ಸೂಪರ್-4 ಪಂದ್ಯಗಳಲ್ಲಿ ಪಾಕ್‌ಗೆ ಸೋಲಿನ ರುಚಿ ತೋರಿಸಿದ ಭಾರತ ಇದೀಗ ಪೈನಲ್‌ನಲ್ಲಿಯೂ ಸೋಲುಣಿಸುವ ತವಕದಲ್ಲಿದೆ. ಆದರೆ ಪಾಕ್ ಸೇಡು ತೀರಿಸುವ ಕಾತರದಲ್ಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಭಿಷೇಕ್ ಶರ್ಮಾ ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 202 ರನ್ ಕಲೆಹಾಕಿದರೆ, ಶ್ರೀಲಂಕಾ ಕೂಡ 5 ವಿಕೆಟ್‌ಗೆ 202 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.
ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ಲಂಕಾ ಪೆರೇರಾ ವಿಕೆಟ್ ಕಳೆದುಕೊಂಡಿತು. ಅರ್ಶ್‌ದೀಪ್ ಲಂಕಾವನ್ನು ಕೇವಲ 2 ರನ್‌ಗೆ ಕಟ್ಟಿಹಾಕಿದರು. ಗಿಲ್ ಜೊತೆ ಕಣಕ್ಕಿಳಿದ ಸೂರ್ಯಕುಮಾರ್ ಮೊದಲ ಎಸೆತದಲ್ಲೇ 3 ರನ್ ಕದ್ದು ತಂಡವನ್ನು ಗೆಲ್ಲಿಸಿದರು.