ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanju Samson: ಏಷ್ಯಾಕಪ್‌ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸಂಜುಗಿಲ್ಲ ಅವಕಾಶ

ಮೊದಲ ಎರಡು ಗಂಟೆಗಳಲ್ಲಿ ಗಿಲ್, ಅಭಿಷೇಕ್, ಸೂರ್ಯಕುಮಾರ್, ತಿಲಕ್, ಜಿತೇಶ್ ಮತ್ತು ರಿಂಕು ನೆಟ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಾಸ್ತವವಾಗಿ, ಗಿಲ್ ಮತ್ತು ಅಭಿಷೇಕ್ ನೆಟ್ಸ್‌ನಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡಿದರು. ಹೀಗಾಗಿ ಈ ಜೋಡಿ ಇನಿಂಗ್ಸ್‌ ಆರಂಭಿಸುವುದು ಖಚಿತ. ಅರ್ಶ್‌ದೀಪ್‌ ಸಿಂಗ್‌, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಕೂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು.

ದುಬೈ: ದುಬೈನ ಐಸಿಸಿ ಅಕಾಡೆಮಿಯಲ್ಲಿ ಭಾರತದ ಮೊದಲ ಅಭ್ಯಾಸ ಅವಧಿಯು ತಮ್ಮ ಏಷ್ಯಾಕಪ್‌(Asia Cup 2025)ನ ಗುರಿಗಳನ್ನು ಕಂಡುಕೊಳ್ಳುವುದರ ಉದ್ದೇಶ ಸ್ಪಷ್ಟಗೊಂಡಿದೆ. ಯಾರು ಎಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬ ಪ್ರಕ್ರಿಯೆಯಲ್ಲಿ ಅಭ್ಯಾಸ ನಡೆಸಲಾಯಿತು. ಈ ಅಭ್ಯಾಸವನ್ನು ನೋಡುವಾಗ ಸಂಜು ಸ್ಯಾಮ್ಸನ್‌(Sanju Samson)ಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನುವಂತಿದೆ.

ಶುಭಮನ್ ಗಿಲ್, ರಿಂಕು ಸಿಂಗ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮುಂತಾದವರೆಲ್ಲರೂ ನೆಟ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಆದರೆ ಸಂಜು ಸ್ಯಾಮ್ಸನ್‌ ಅಭ್ಯಾಸದಿಂದ ಹೊರಗುಳಿದದ್ದು ಕಂಡು ಬಂತು. ಜಿತೇಶ್‌ ಶರ್ಮ ಅವರು ಬ್ಯಾಟಿಂಗ್‌ ಜತೆಗೆ ಕೀಪಿಂಗ್‌ ಅಭ್ಯಾಸ ನಡೆಸಿದರು. ಸಂಜು ಅವರು ಕೇವಲ ಆಟಗಾರರ ಅಭ್ಯಾಸವನ್ನಷ್ಟೇ ವೀಕ್ಷಿಸಿದರು. ಇದನ್ನು ನೋಡುವಾಗ ಅವರಿಗೆ ಅವಕಾಶ ಸಿಗುವುದು ಅನುಮಾನ.

ಮೊದಲ ಎರಡು ಗಂಟೆಗಳಲ್ಲಿ ಗಿಲ್, ಅಭಿಷೇಕ್, ಸೂರ್ಯಕುಮಾರ್, ತಿಲಕ್, ಜಿತೇಶ್ ಮತ್ತು ರಿಂಕು ನೆಟ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಾಸ್ತವವಾಗಿ, ಗಿಲ್ ಮತ್ತು ಅಭಿಷೇಕ್ ನೆಟ್ಸ್‌ನಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡಿದರು. ಹೀಗಾಗಿ ಈ ಜೋಡಿ ಇನಿಂಗ್ಸ್‌ ಆರಂಭಿಸುವುದು ಖಚಿತ. ಅರ್ಶ್‌ದೀಪ್‌ ಸಿಂಗ್‌, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಕೂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೆಳಕ್ರಮಾಂಕದಲ್ಲಿ ಆಡಿದ್ದ ಜಿತೇಶ್‌, ಕೆಲವು ಪಂದ್ಯಗಳಲ್ಲಿ ಫಿನಿಷರ್ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಅಧಿಕ.