ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND v UAE: ಇಂದಿನ ಯುಎಇ ಪಂದ್ಯಕ್ಕೆ ಹೇಗಿರಲಿದೆ ಭಾರತ ಪ್ಲೇಯಿಂಗ್‌ ಇಲೆವೆನ್‌?

Asia Cup 2025: ಭಾರತ ವಿರುದ್ಧ ಯುಎಇ ಕೇವಲ ಒಂದು ಟಿ20 ಪಂದ್ಯವನ್ನಾಡಿದೆ. ಅದು 2016ರ ಏಷ್ಯಾಕಪ್‌ನಲ್ಲಿ. ಆ ಪಂದ್ಯವನ್ನು ಭಾರತ 9 ವಿಕೆಟ್‌ನಿಂದ ಗೆದ್ದಿತ್ತು. ಹಾಗಂತ ಯುಎಇಯನ್ನು ಭಾರತ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಯುಎಇ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದಿತ್ತು.

ದುಬೈ: ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲು ಭಾರತ(IND v UAE) ಕ್ರಿಕೆಟ್‌ ತಂಡ ಸಜ್ಜಾಗಿದೆ. ಇಂದು(ಗುರುವಾರ) ನಡೆಯುವ ಪಂದ್ಯದಲ್ಲಿ ಯುಎಇ ವಿರುದ್ಧ ಸೆಣಸಲಿದೆ. ಅನುಭವಿಗಳಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ರವೀಂದ್ರ ಜಡೇಜ ಅವರ ಅಲಭ್ಯತೆ ಪಂದ್ಯದಲ್ಲಿ ಕಾಣಲಿದೆ.

ಭಾರತ ಕಳೆದ 3-4 ದಿನ ನಡೆಸಿದ ಅಭ್ಯಾಸ ಅವಧಿಗಳನ್ನು ಗಮನಿಸಿದಾಗ ಶುಭ್‌ಮನ್‌ ಗಿಲ್‌ ಮತ್ತು ಅಭಿಷೇಕ್‌ ಶರ್ಮಾ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಅಧಿಕವಾಗಿದೆ. ಸಂಜು ಸ್ಯಾಮ್ಸನ್‌ ಹೊರಗುಳಿಯುವ ಸಾಧ್ಯತೆ ಇದೆ. ಕೀಪಿಂಗ್‌ ಹೊಣೆ ಜಿತೇಶ್‌ ಶರ್ಮ ಅವರ ಹೆಗಲೇರುವ ಸಾಧ್ಯತೆ ಇದೆ. 3ನೇ ಕ್ರಮಾಂಕದಲ್ಲಿ ತಿಲಕ್‌ ವರ್ಮಾ, 4ರಲ್ಲಿ ನಾಯಕ ಸೂರ್ಯಕುಮಾರ್‌, 5ನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಆಡಲಿದ್ದಾರೆ. ಅಕ್ಷರ್‌ ಪಟೇಲ್‌, ಜಿತೀಶ್‌ ಶರ್ಮಾರನ್ನು ಫಿನಿಶರ್‌ಗಳಾಗಿ ಬಳಸಿಕೊಳ್ಳಬಹುದು. ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ ಇಬ್ಬರೂ ಕಣಕ್ಕಿಳಿಯಬಹುದು. ಜಸ್‌ಪ್ರೀತ್‌ ಬೂಮ್ರಾ ಜೊತೆಗೆ ಅರ್ಶ್‌ದೀಪ್‌ ಸಿಂಗ್‌ ಆಡುವುದು ಬಹುತೇಕ ಖಚಿತ.

ಭಾರತ ವಿರುದ್ಧ ಯುಎಇ ಕೇವಲ ಒಂದು ಟಿ20 ಪಂದ್ಯವನ್ನಾಡಿದೆ. ಅದು 2016ರ ಏಷ್ಯಾಕಪ್‌ನಲ್ಲಿ. ಆ ಪಂದ್ಯವನ್ನು ಭಾರತ 9 ವಿಕೆಟ್‌ನಿಂದ ಗೆದ್ದಿತ್ತು. ಹಾಗಂತ ಯುಎಇಯನ್ನು ಭಾರತ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಯುಎಇ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದಿತ್ತು.

ಭಾರತ ಸಂಭಾವ್ಯ ಆಡುವ ಬಳಗ

ಅಭಿಷೇಕ್‌ ಶರ್ಮ, ಶುಭ್‌ಮನ್‌ ಗಿಲ್, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ಜಿತೇಶ್‌ ಶರ್ಮ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ವರುಣ್ ಚರ್ಕವರ್ತಿ, ಅರ್ಶ್‌ದೀಪ್‌ ಸಿಂಗ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌/ಸೋನಿ ಲಿವ್‌