ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ ಗೆಲುವಿಗೆ ಗವಾಸ್ಕರ್‌ 'ಲಕ್ಕಿ ಜಾಕೆಟ್‌' ಕಾರಣ!

Gavaskar 'lucky jacket: ಗವಾಸ್ಕರ್‌ ನುಡಿದಂತೆ ಭಾರತ ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗಿತು. ಭಾರತ ಗೆಲ್ಲುತ್ತಿದ್ದಂತೆ ಗವಾಸ್ಕರ್‌ ಕಾಮೆಂಟರಿ ಬಾಕ್ಸ್‌ನಿಂದ ಮತ್ತೊಮ್ಮೆ ನನ್ನ ಲಕ್ಕಿ ಜಾಕೆಟ್ ಎಷ್ಟು ಪ್ರಭಾವಶಾಲಿ ಎನ್ನುವುದು ಗೊತ್ತಾಯಿತೆ ಎಂದು ಹೇಳುವ ಮೂಲಕ ತಂಡದ ಗೆಲುವನ್ನು ಸಂಭ್ರಮಿಸಿದರು. ಈ ವಿಡಿಯೊ ಭಾರೀ ವೈರಲ್‌ ಆಗಿದೆ.

ಲಂಡನ್‌: ಓವಲ್‌ನಲ್ಲಿ(Oval) ನಡೆದ ಇಂಗ್ಲೆಂಡ್‌(IND vs ENG) ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯಭೇರಿ ಬಾರಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾಗೊಂಡಿತು. ಭಾರತ ಗೆಲುವಿನ ಬೆನ್ನಲ್ಲೇ ಸುನೀಲ್‌ ಗವಾಸ್ಕರ್‌(Sunil Gavaskar) ಲಕ್ಕಿ ಜಾಕೆಟ್‌(Gavaskar 'lucky jacket) ಕೂಡ ಸದ್ದು ಮಾಡಲಾರಂಭಿಸಿದೆ.

ಹೌದು, ಮೂರನೇ ದಿನದಾಟ ಮುಕ್ತಾಯಗೊಂಡ ಬಳಿಕ ಭಾರತದ ಮಾಜಿ ನಾಯಕ ಮತ್ತು ದಂತಕಥೆ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ಗಿಲ್‌ಗೆ ವಿಷೇಶ ಉಡುಗೊರೆಯೊಂದನ್ನು ನೀಡಿದ್ದರು. ಇದೇ ವೇಳೆ ಅವರು "ಲಕ್ಕಿ ಜಾಕೆಟ್" ಎಂದು ಕರೆಯುವ ಜಾಕೆಟ್ ಅನ್ನು ಧರಿಸಿ ನಾನು ಕಾಮೆಂಟರಿ ಬಾಕ್ಸ್‌ನಿಂದ ತಂಡವನ್ನು ಹುರಿದುಂಬಿಸುವೆ. ನಾನು ಈ ಜಾಕೆಟ್‌ ಧರಿಸಿದಾಗ ಭಾರತ ಯಾವತ್ತೂ ಸೋತಿಲ್ಲ. ಹೀಗಾಗಿ ಕೊನೆಯ ಪಂದ್ಯದಲ್ಲಿ ತಂಡ ಗೆಲ್ಲುತ್ತದೆ ಎಂದು ಗವಾಸ್ಕರ್‌ ಗಿಲ್‌ಗೆ ವಿಶ್ವಾಸ ತುಂಬಿದ್ದರು.

ಗವಾಸ್ಕರ್‌ ನುಡಿದಂತೆ ಭಾರತ ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗಿತು. ಭಾರತ ಗೆಲ್ಲುತ್ತಿದ್ದಂತೆ ಗವಾಸ್ಕರ್‌ ಕಾಮೆಂಟರಿ ಬಾಕ್ಸ್‌ನಿಂದ ಮತ್ತೊಮ್ಮೆ ನನ್ನ ಲಕ್ಕಿ ಜಾಕೆಟ್ ಎಷ್ಟು ಪ್ರಭಾವಶಾಲಿ ಎನ್ನುವುದು ಗೊತ್ತಾಯಿತೆ ಎಂದು ಹೇಳುವ ಮೂಲಕ ತಂಡದ ಗೆಲುವನ್ನು ಸಂಭ್ರಮಿಸಿದರು. ಈ ವಿಡಿಯೊ ಭಾರೀ ವೈರಲ್‌ ಆಗಿದೆ.



ಈ ಹಿಂದೆ 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 'ಗಾಬಾ' ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತವು 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ತನ್ನದಾಗಿಸಿಕೊಂಡಿತ್ತು. ಈ ಪಂದ್ಯದಲ್ಲಿಯೂ ಗವಾಸ್ಕರ್‌ ಇದೇ ಲಕ್ಕಿ ಜಾಕೆಟ್‌ ತೊಟ್ಟು ಕಾಮೆಂಟರಿ ಬಾಕ್ಸ್‌ನಲ್ಲಿದ್ದರು. ಆಗಲೂ ಭಾರತ ಐತಿಹಾಸಿಕ ಗೆಲುವು ಕಂಡಿತ್ತು. ಇದೀಗ ಅವರ ಲಕ್ಕಿ ಜಾಕೆಟ್‌ ಪವಾಡ ಲಂಡನ್‌ನಲ್ಲಿಯೂ ಫಲಪ್ರದ ನೀಡಿದೆ.

ಇದನ್ನೂ ಓದಿ IND vs ENG: ʻನನಗೋಸ್ಕರ ಅಲ್ಲ, ದೇಶಕ್ಕೋಸ್ಕರ ಬೌಲ್‌ ಮಾಡುತ್ತೇನೆʼ: ಮೊಹಮ್ಮದ್‌ ಸಿರಾಜ್‌!